ಕಾರಿನಲ್ಲಿ ಬೆತ್ತಲಾಗಿ ಜೋಡಿಗಳ ಕುಚು ಕುಚು – ಬುದ್ದಿಹೇಳಲು ಬಂದ ಪೊಲೀಸ್ ಮೇಲೆ ಕಾರು ಚಲಾಯಿಸಿ ಜೋಡಿ ಎಸ್ಕೇಪ್

ಕಾರಿನಲ್ಲಿ ಬೆತ್ತಲಾಗಿ ಜೋಡಿಗಳ ಕುಚು ಕುಚು – ಬುದ್ದಿಹೇಳಲು ಬಂದ ಪೊಲೀಸ್ ಮೇಲೆ ಕಾರು ಚಲಾಯಿಸಿ ಜೋಡಿ ಎಸ್ಕೇಪ್

ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಉದ್ಯಾನವನವೊಂದರ ಬಳಿ ವಿಲಕ್ಷಣ ಘಟನೆಯೊಂದು ನಡೆದಿದೆ. ಕಾರಿನಲ್ಲಿದ್ದ ಜೋಡಿಯೊಂದು ಅಲ್ಲೇ ಬಟ್ಟೆಬಿಚ್ಚಿ ಸರಸದಲ್ಲಿ ತೊಡಗಿದ್ದಾರೆ. ಜೋಡಿಗೆ ಬುದ್ದಿಹೇಳಲು ಬಂದ ಕರ್ತವ್ಯನಿರತ ಸಬ್ ಇನ್ಸ್ಪೆಕ್ಟರ್ ಮೇಲೆ ಯುವಕ ಕಾರು ಚಲಾಯಿಸಲು ಮುಂದಾಗಿದ್ದಾನೆ.

ಇದನ್ನೂ ಓದಿ: ಕೊಲೆ ಮಾಡಲೇಬೇಕು ಎಂದು ಗುಂಡಿ ತೋಡಿ ಇಟ್ಟಿದ್ದ ಪಾತಕಿ – ಶಿಕ್ಷಕಿಯನ್ನು ಕ್ರೂರವಾಗಿ ಕೊಂದವನು ಹೇಳಿದ್ದೇನು?

ಜೋಡಿಯೊಂದು ಮಟ ಮಟ ಮಧ್ಯಾಹ್ನವೇ ಕಾರಿನಲ್ಲೇ ಬೆತ್ತಲಾಗಿ ಕಾಮತೃಷೆ ತೀರಿಸಿಕೊಳ್ಳಲು ಮುಂದಾದ ವಿಲಕ್ಷಣ ವಿದ್ಯಮಾನ ಬೆಂಗಳೂರಿನ ಉದ್ಯಾನವೊಂದರ ಬಳಿ ನಡೆದಿದೆ. ಇದೇ ವೇಳೆ, ದೃಶ್ಯ ಕಂಡು ಬುದ್ಧಿಹೇಳಲು ಬಳಿ ತೆರಳಿದ ಪೊಲೀಸ್ ಮೇಲೆಯೆ ಕಾರು ಚಲಾಯಿಸಿಕೊಂಡು ಜೋಡಿ ಪರಾರಿಯಾಗಿದೆ. ಗಾಯಗೊಂಡ ಸಬ್ ಇನ್ಸ್ಪೆಕ್ಟರ್ ಮಹೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಉದ್ಯಾನವನವೊಂದರ ಬಳಿ ಕಿಯೋ ಸೆಲಾಟೋಸ್ ಕಾರಿನಲ್ಲಿ ಜೋಡಿ ಬಂದಿದ್ದರು. ಅದು ಕೂಡಾ ಮಟ ಮಟ ಮಧ್ಯಾಹದ ಸಮಯ. ಆ ಜೋಡಿಗೆ ಅದ್ಯಾವ ಮಟ್ಟಿಗೆ ಕಾಮತೃಷೆ ಏರಿತ್ತೋ.. ಜನ ಓಡಾಡುವ ಜಾಗ. ಪಾರ್ಕ್‌ನ ಸುತ್ತಮುತ್ತ ಜನ ಇದ್ದಾರೆ ಎಂಬ ಪರಿಜ್ಞಾನವೇ ಇಲ್ಲದೆ ಕಾರಿನೊಳಗೆ ಬಟ್ಟೆ ಬಿಚ್ಚಲು ಆರಂಭಿಸಿದ್ದಾರೆ. ನಂತರ ಯಾರು ನೋಡಲಿ ಬಿಡಲಿ ಎಂಬಂತೆ ಕಾರೊಳಗೆ ಕಾಮಕೇಳಿ ಶುರುಮಾಡಿದ್ದಾರೆ. ಸರಸದಲ್ಲಿ ತಲ್ಲೀನವಾಗಿರುವ ಜೋಡಿ ಕಂಡು ಸ್ಥಳೀಯರು ಮುಜುಗರ ಪಟ್ಟಿದ್ದಾರೆ. ಇದೇ ವೇಳೆ ಅಲ್ಲಿ ಕರ್ತವ್ಯ ನಿರತರಾಗಿದ್ದ ಸಬ್ ಇನ್ಸ್ಪೆಕ್ಟರ್ ಮಹೇಶ್ ಆ ಜೋಡಿಯನ್ನು ಗಮನಿಸಿದ್ದಾರೆ. ಜೋಡಿಗೆ ಬುದ್ಧಿ ಹೇಳಬೇಕು ಎಂದುಕೊಂಡ ಸಬ್ ಇನ್ಸ್ಪೆಕ್ಟರ್ ಮಹೇಶ್ ಕಾರಿನ ಬಳಿ ತೆರಳಿದ್ದಾರೆ. ಕಾರಿನ ಬಳಿ ಹೋಗಿ ನಂಬರ್ ಪ್ಲೇಟ್ ಪರಿಶೀಲನೆ ನಡೆಸಿದ್ದಾರೆ. ಅಷ್ಟರಲ್ಲಿ ಎಚ್ಚೆತ್ತುಕೊಂಡ ಯುವಕ ಏಕಾಏಕಿ ಕಾರು ಚಲಾಯಿಸಿದ್ದಾನೆ. ದಿಢೀರ್ ಕಾರು ಚಲಿಸಲು ಆರಂಭಿಸಿದ ಕಾರಣ ಸಬ್ ಇನ್ಸ್ಪೆಕ್ಟರ್ ಮಹೇಶ್ ಬಾನೆಟ್ ಮೇಲೆ ಬಿದ್ದಿದ್ದಾರೆ. ಅವರು ಕಾರಿನ ಬಾನೆಟ್ ಹಿಡಿದುಕೊಂಡು ಒದ್ದಾಡುತ್ತಿದ್ದರೂ ಲೆಕ್ಕಿಸದ ಯುವಕ ಕಾರು ಚಲಾಯಿಸಿದ್ದಾನೆ. ಏಕಾಏಕಿ ಕಾರನ್ನು ರಿವರ್ಸ್ ತೆಗೆದು ಮತ್ತೆ ಮುಂದಕ್ಕೆ ಚಲಾಯಿಸಿದ್ದಾನೆ. ಪರಿಣಾಮವಾಗಿ ಕೆಳಗೆ ಬಿದ್ದ ಸಬ್ ಇನ್ಸ್ಪೆಕ್ಟರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಹೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Sulekha