ಜುಲೈ 6ರಂದು ಬೆಳಗ್ಗೆ 5 ಗಂಟೆ 12 ನಿಮಿಷ- ‘ಸಲಾರ್’ ಸಿನಿಮಾದ ಟೀಸರ್ ಅನಾವರಣಕ್ಕೆ ಕ್ಷಣಗಣನೆ..!

ಜುಲೈ 6ರಂದು ಬೆಳಗ್ಗೆ 5 ಗಂಟೆ 12 ನಿಮಿಷ- ‘ಸಲಾರ್’ ಸಿನಿಮಾದ ಟೀಸರ್ ಅನಾವರಣಕ್ಕೆ ಕ್ಷಣಗಣನೆ..!

ಹೊಂಬಾಳೆ ಫಿಲ್ಮ್ಸ್ ಅರ್ಪಿಸುವ, ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಈ ಚಿತ್ರ ರಿಲೀಸ್‌ಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಮಹತ್ವದ ಮಾಹಿತಿ ನೀಡಿದೆ. ಅದು ಕೂಡಾ ಹೊಸ ಪೋಸ್ಟರ್ ಮೂಲಕ ‘ಸಲಾರ್’ ಚಿತ್ರದ ಟೀಸರ್ ರಿಲೀಸ್ ಬಗ್ಗೆ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ:  ಶಿವನ ಅವತಾರದಲ್ಲಿ ಬಾಲಿವುಡ್‌ನ ಸ್ಟೈಲ್‌ಕಿಂಗ್ –  ಅಕ್ಷಯ್ ಕುಮಾರ್‌ಗೆ ಸಕ್ಸಸ್ ತಂದುಕೊಡುತ್ತಾ ‘ಓಎಂಜಿ 2’ ಸಿನಿಮಾ?

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ಸಲಾರ್’ ಸಿನಿಮಾದ ಟೀಸರ್ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯು ಹೊಸ ಪೋಸ್ಟರ್ ಹಂಚಿಕೊಂಡಿದೆ. ಜುಲೈ 6ರಂದು ‘ಸಲಾರ್’ ಟೀಸರ್ ರಿಲೀಸ್ ಆಗಲಿದೆ. ಅಚ್ಚರಿ ಏನೆಂದರೆ ಅಂದು ನಸುಕಿನ 5 ಗಂಟೆ 12 ನಿಮಿಷಕ್ಕೆ ಟೀಸರ್ ಅನಾವರಣ ಆಗಲಿದೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಯಶಸ್ಸಿನ ಬಳಿಕ ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ ‘ಸಲಾರ್’. ‘ಹೊಂಬಾಳೆ ಫಿಲ್ಮ್ಸ್’ ತಂಡ ಈ ಚಿತ್ರಕ್ಕೆ ಬಹುಕೋಟಿ ರೂಪಾಯಿ ಬಂಡವಾಳ ಸುರಿದಿದೆ. ಬಹಳ ಅದ್ದೂರಿಯಾಗಿ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ಶ್ರುತಿ ಹಾಸನ್ ಅವರು ನಟಿಸಿದ್ದಾರೆ. ಮಲಯಾಳಂ ಸ್ಟಾರ್ ಕಲಾವಿದ ಪೃಥ್ವಿರಾಜ್ ಸುಕುಮಾರನ್ ಅವರು ಕೂಡ ಒಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೂ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಕಥೆಗೂ ಲಿಂಕ್ ಇರಬಹುದಾ ಎಂಬ ಕುತೂಹಲವೂ ಇದೆ.

ಪ್ರಭಾಸ್ ನಟಿಸಿದ ‘ಆದಿಪುರುಷ್’ ಸಿನಿಮಾ ನಿರೀಕ್ಷಿತ ಪ್ರಮಾಣದಲ್ಲಿ ಕಲೆಕ್ಷನ್ ಮಾಡಲಿಲ್ಲ. ಹಾಗಾಗಿ ಮುಂಬರುವ ಸಿನಿಮಾಗಳ ಮೂಲಕ ಗೆಲ್ಲಲೇಬೇಕಾದ ಅನಿವಾರ್ಯತೆ ಅವರಿಗೆ ಇದೆ. ಎಲ್ಲರ ದೃಷ್ಟಿ ಈಗ ‘ಸಲಾರ್’ ಸಿನಿಮಾ ಮೇಲಿದೆ. ಟೀಸರ್ ನೋಡಿದ ಬಳಿಕ ಅಭಿಮಾನಿಗಳಿಂದ ಯಾವ ರೀತಿಯ ರೆಸ್ಪಾನ್ಸ್ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ರವಿ ಬಸ್ರೂರು ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

suddiyaana