ಆಸ್ಟ್ರೇಲಿಯಾ ವಿರುದ್ಧ 4ನೇ ಟಿ20 ಮ್ಯಾಚ್‌ಗೆ ಶುರುವಾಯ್ತು ಕೌಂಟ್‌ಡೌನ್ – ಸಿರೀಸ್ ಗೆಲ್ಲುವ ತವಕದಲ್ಲಿ ಟೀಮ್ ಇಂಡಿಯಾ

ಆಸ್ಟ್ರೇಲಿಯಾ ವಿರುದ್ಧ 4ನೇ ಟಿ20 ಮ್ಯಾಚ್‌ಗೆ ಶುರುವಾಯ್ತು ಕೌಂಟ್‌ಡೌನ್ – ಸಿರೀಸ್ ಗೆಲ್ಲುವ ತವಕದಲ್ಲಿ ಟೀಮ್ ಇಂಡಿಯಾ

ಭಾರತ VS ಆಸ್ಟ್ರೇಲಿಯಾ..4ನೇ ಟಿ-20 ಮ್ಯಾಚ್..ಇಲ್ಲಿ ಆಸ್ಟ್ರೇಲಿಯಾಗೆ ಮತ್ತೊಮ್ಮೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಆಸಿಸ್​​ಗೆ ಇದು ಮಾಡು ಇಲ್ಲವೆ ಮಡಿ ಪಂದ್ಯ. ಹೀಗಾಗಿ ಈ ಮ್ಯಾಚ್​ ತುಂಬಾ ರೋಚಕವಾಗಲಿದೆ. ಹಾಗೆಯೇ ಟೀಂ ಇಂಡಿಯಾದ ಪ್ಲೇಯಿಂಗ್​-11ನಲ್ಲಿ ಏನೆಲ್ಲಾ ಚೇಂಜೆಸ್​​ಗಳಾಗಬಹುದು? ಇವೆಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದ ಉಗಾಂಡ – ಆಫ್ರಿಕನ್ ರಾಷ್ಟ್ರದ ಐತಿಹಾಸಿಕ ಸಾಧನೆ

ರಾಯ್​ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಾಲ್ಕನೇ ಟಿ20 ಪಂದ್ಯ ನಡೆಯಲಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ಈಗಾಗಲೇ 2-1 ಅಂತರದಿಂದ ಮುನ್ನಡೆ ಪಡೆಕೊಂಡಿದ್ದು, ನಾಲ್ಕನೇ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಟೋಟಲಿ, 4ನೇ ಮ್ಯಾಚ್ ಕೂಡಾ​​ ಬೌಲರ್ಸ್​​ಗಳ ಕೈಯಲ್ಲೇ ಇದೆ. ಆದ್ರೆ ಟೀಂ ಇಂಡಿಯಾಗೆ ಈಗ ತಲೆ ನೋವಾಗಿರೋದೆ ಬೌಲರ್ಸ್​ಗಳು. 3ನೇ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ವೈಫಲ್ಯ ಎದ್ದು ಕಾಣುತ್ತಿತ್ತು. ಬ್ಯಾಟ್ಸ್​​ಮನ್​ಗಳು 222 ರನ್ ಮಾಡಿದ್ರೂ ಅದನ್ನ ಡಿಫೆಂಡ್ ಮಾಡೋಕೆ ಬೌಲರ್ಸ್​​ಗಳಿಗೆ ಸಾಧ್ಯವಾಗಿರಲಿಲ್ಲ.

ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಎರಡು ಬದಲಾವಣೆ ಖಚಿತ. ಉಪನಾಯಕ ಶ್ರೇಯಸ್ ಅಯ್ಯರ್ ಆಗಮನದಿಂದ ಮೆನ್ ಇನ್ ಬ್ಲೂ ಬ್ಯಾಟಿಂಗ್ ಬಲ ಹೆಚ್ಚಿದೆ. ಹೀಗಾಗಿ ತಿಲಕ್ ವರ್ಮ ತನ್ನ ಸ್ಥಾನವನ್ನು ಹಿರಿಯ ಬ್ಯಾಟರ್‌ಗೆ ಬಿಟ್ಟುಕೊಡಬೇಕಾಗುತ್ತದೆ.

ಹಾಗಿದ್ರೆ ಆಸ್ಟ್ರೇಲಿಯಾ ವಿರುದ್ಧದ 4ನೇ ಟಿ-20 ಮ್ಯಾಚ್​ಗೆ ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿರಬಹುದು? ಸಂಭಾವ್ಯ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋದನ್ನ ನೋಡೋಣ.

 

  • ಟೀಂ ಇಂಡಿಯಾ PLAYING-11? 
  • ಯಶಸ್ವಿ ಜೈಸ್ವಾಲ್
  • ರುತುರಾಜ್ ಗಾಯಕ್ವಾಡ್
  • ಇಶಾನ್ ಕಿಶನ್
  • ಸೂರ್ಯಕುಮಾರ್ ಯಾದವ್
  • ಶ್ರೇಯಸ್ ಅಯ್ಯರ್ OR ತಿಲಕ್ ವರ್ಮಾ
  • ರಿಂಕು ಸಿಂಗ್
  • ಅಕ್ಸರ್ ಪಟೇಲ್
  • ರವಿ ಬಿಷ್ಣೋಯಿ
  • ಮುಕೇಶ್ ಕುಮಾರ್
  • ಪ್ರಸಿಧ್ ಕೃಷ್ಣ
  • ಅರ್ಶ್​​ದೀಪ್ ಸಿಂಗ್

 

ಇದು ಅಸ್ಟ್ರೇಲಿಯಾ ವಿರುದ್ಧದ 4ನೇ ಟಿ-20 ಮ್ಯಾಚ್​ಗೆ ಟೀಂ ಇಂಡಿಯಾದ ಸಂಭ್ಯಾವ್ಯ ಪ್ಲೇಯಿಂಗ್​-11. ಇಲ್ಲಿ ಪ್ರಸಿಧ್​​ ಕೃಷ್ಣರನ್ನ ಆಡಿಸುವ ಸಾಧ್ಯತೆ ಇದೆ ಅನ್ನೋದಕ್ಕೆ ಒಂದಷ್ಟು ಕಾರಣಗಳಿವೆ. ​​ 3ನೇ ಮ್ಯಾಚ್​​ನಲ್ಲಿ ಟೀಂ ಇಂಡಿಯಾ ಸೋಲೋಕೆ ಪ್ರಮುಖ ಕಾರಣವಾಗಿದ್ದೇ ಪ್ರಸಿಧ್ ಕೃಷ್ಣ. 4 ಓವರ್​​ಗಳಲ್ಲಿ 68 ರನ್ ಕೊಟ್ಟು ಹೊಸ ದಾಖಲೆಯನ್ನೇ ಬರೆದಿದ್ರು.ಆದರೆ, ಪ್ರಸಿಧ್ ಕೃಷ್ಣ ಔಟ್​ ಆಫ್ ಫಾರ್ಮ್​​ನಲ್ಲಿದ್ದಾರೆ. ಎಫೆಕ್ಟಿವ್ ಆಗಿ ಬೌಲಿಂಗ್ ಮಾಡ್ತಿಲ್ಲ. 3ನೇ ಮ್ಯಾಚ್​​ನಲ್ಲಂತೂ ಯರ್ರಾಬಿರ್ರಿ ರನ್ ಕೊಟ್ಟಿದ್ದಾರೆ. ಹಾಗಂತಾ ಈಗಲೇ ಸಡನ್​ ಆಗ ಅವರನ್ನ ಟೀಂನಿಂದ ಡ್ರಾಪ್ ಮಾಡಿದ್ರೆ, ಅದು ಪ್ರಸಿಧ್ ಕೃಷ್ಣ ಮೇಲೆ ಬೇರೆಯದ್ದೇ ರೀತಿಯಲ್ಲಿ ಎಫೆಕ್ಟ್ ಆಗುವ ಸಾಧ್ಯತೆ ಇದೆ. ಪ್ಲೇಯರ್ ಮೆಂಟಲಿ ಕೂಡ ವೀಕ್ ಆಗ್ತಾರೆ. ಪ್ರಸಿಧ್ ಕೃಷ್ಣ ಒಬ್ಬ ಟ್ಯಾಲೆಂಟೆಡ್ ಬೌಲರ್ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಎಲ್ಲರ ಕೆರಿಯರ್​​​ನಲ್ಲೂ ಬ್ಯಾಡ್ ಟೈಮ್ ಬಂದೇ ಬರುತ್ತೆ.​​ ಅಂಥಾ ಟೈಮ್​ನಲ್ಲಿ ಪ್ಲೇಯರ್ಸ್​ಗಳನ್ನ ಪುಶ್ ಮಾಡಬೇಕಾಗಿರೋದು ತುಂಬಾನೆ ಇಂಪಾರ್ಟೆಂಟ್. ತಂಡದ ಕೋಚ್​, ಕ್ಯಾಪ್ಟನ್ ಮತ್ತು ಮ್ಯಾನೇಜ್ಮೆಂಟ್ ತಮ್ಮ ಪ್ಲೇಯರ್ಸ್​​ಗಳ ಬಗ್ಗೆ ಯೋಚನೆ ಮಾಡೋದು ಈ ರೀತಿಯಲ್ಲಿ. ಎಷ್ಟೇ ಫೇಲ್ಯೂರ್ ಆದ್ರೂ ಮತ್ತೆ ಮತ್ತೆ ಚಾನ್ಸ್​ ಕೊಟ್ಟು ಬ್ಯಾಕ್​​ಅಪ್​ ಮಾಡ್ತಾರೆ. ಹೀಗಾಗಿ 4ನೇ ಟಿ-20 ಮ್ಯಾಚ್​ನಲ್ಲೂ ಪ್ರಸಿಧ್ ಕೃಷ್ಣ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ. ಹಾಗಂತಾ ಗ್ಯಾರಂಟಿ ಏನಿಲ್ಲ.. ಪ್ರಸಿಧ್ ಬದಲು ಬೇರೆಯವರಿಗೆ ಅವಕಾಶ ಕೊಟ್ರೂ ಆಶ್ಚರ್ಯ ಇಲ್ಲ. ಬಟ್ ನಿಮಗೆ ಗೊತ್ತಿರಲಿ, ಇದೇ ಪ್ರಸಿಧ್ ಕೃಷ್ಣ ಮುಂಬರು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸೀರಿಸ್​ಗೆ ಸೆಲೆಕ್ಟ್ ಆಗಿದ್ದಾರೆ. ಹೀಗಾಗಿ ಪ್ರಸಿಧ್ ಆದಷ್ಟು ತಮ್ಮ ಬೌಲಿಂಗ್​ನಲ್ಲಿ ಮತ್ತೆ ಫಾರ್ಮ್ ಕಂಡುಕೊಳ್ಳಬೇಕಿದೆ. ತಮ್ಮ ಸ್ಕಿಲ್​ ಮೇಲೆ ವರ್ಕೌಟ್ ಮಾಡಲೇಬೇಕಿದೆ. ಇಲ್ಲದಿದ್ರೆ ಕೆರಿಯರ್​​ಗೇ ಡ್ಯಾಮೇಜ್ ಆಗಬಹುದು.

ಇನ್ನು ಆಸ್ಟ್ರೇಲಿಯಾ ಟೀಂ ಬಗ್ಗೆಯೂ ಹೇಳಲೇಬೇಕು. ಆಸಿಸ್​ಗೆ ಒಂದು ದೊಡ್ಡ ಹೊಡೆತ ಬಿದ್ದಿದೆ. ಯಾಕಂದ್ರೆ 4 ಮತ್ತು 5ನೇ ಟಿ-20 ಮ್ಯಾಚ್​ನಲ್ಲಿ ಗ್ಲೇನ್ ಮ್ಯಾಕ್ಸ್​​ವೆಲ್ ಆಡ್ತಾ ಇಲ್ಲ. ಮ್ಯಾಕ್ಸ್​ವೆಲ್​ ಈಗಾಗ್ಲೇ ಆಸ್ಟ್ರೇಲಿಯಾಗೆ ತೆರಳಿದ್ದಾರೆ. ಆದ್ರೆ, ಮತ್ತೊಂದು ಡೇಂಜರಸ್ ಬ್ಯಾಟ್ಸ್​ಮನ್​ ಟೀಂನಲ್ಲೇ ಇದ್ದಾರೆ. ಟ್ರಾವಿಸ್ ಹೆಡ್.. 3ನೇ ಮ್ಯಾಚ್​ನಲ್ಲಿ ಟೀಂ ಇಂಡಿಯಾಗೆ ಮತ್ತೊಂದು ವಾರ್ನಿಂಗ್​ ಕೊಟ್ಟಿದ್ರು. ಹೀಗಾಗಿ ಟ್ರಾವಿಸ್ ಹೆಡ್​ರನ್ನ ಆದಷ್ಟು ಬೇಗ ಔಟ್ ಮಾಡದೆ ಇದ್ರೆ ರಿಸಲ್ಟ್ ಏನಾಗುತ್ತೆ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಯೇ ಇಲ್ಲ. ತಲೆನೋವು ಕಡಿಮೆ ಆಗಬೇಕು ಅನ್ನೋದಾದ್ರೆ ಮೊದಲು ಹೆಡ್​ರನ್ನ ತೆಗಿಲೇಬೇಕು. ಹೀಗಾಗಿ ಟ್ರಾವಿಸ್ ಹೆಡ್​ಗಾಗಿ ಟೀಂ ಇಂಡಿಯಾ ಪ್ರತ್ಯೇಕ ಸ್ಟ್ರ್ಯಾಟಜಿ ಮಾಡಿರುತ್ತೆ.

Sulekha