ಕಾರಿಗೆ ಅಡ್ಡ ಬಂದ ಎಮ್ಮೆ – ರೈತನಿಗೆ ದಂಡ ವಿಧಿಸಿ ವಿವಾದಕ್ಕೀಡಾದ ಡಿಸಿ
ತೆಲಂಗಾಣ: ಜಿಲ್ಲಾಧಿಕಾರಿ ಕಾರಿಗೆ ಎಮ್ಮೆಗಳು ಅಡ್ಡ ಬಂದಿತೆಂದು ಮಾಲೀಕನಿಗೆ ದಂಡ ವಿಧಿಸಿರುವ ಘಟನೆ ತೆಲಂಗಾಣದ ಮುಳುಗು ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಗಂಪೋಣಿ ಗೂಡಿನ ಬೋಯಿನಿ ಯಾಕಯ್ಯ ಹಾಗೂ ಬೋರು ನರಸಾಪುರದ ರೈತರು ಎಮ್ಮೆಗಳನ್ನು ಕಾಡಿಗೆ ತಳ್ಳುತ್ತಿದ್ದಾಗ ಜಾನುವಾರುಗಳು ಮುಳುಗು ಜಿಲ್ಲಾಧಿಕಾರಿ ಕೃಷ್ಣಾ ಆದಿತ್ಯ ಅವರ ವಾಹನಕ್ಕೆ ಅಡ್ಡವಾಗಿ ಬಂದಿದೆ. ಈ ಸಮಯದಲ್ಲಿ ಎಷ್ಟೇ ಹಾರ್ನ್ ಮಾಡಿದರೂ ಕೂಡ ಜಾನುವಾರುಗಳು ಸ್ಥಳದಿಂದ ಕದಲದೇ ಇದ್ದದ್ದನ್ನು ಕಂಡು ಸಿಟ್ಟಿಗೆದ್ದ ಜಿಲ್ಲಾಧಿಕಾರಿಗಳು ಗುಂಡು ಹಾರಿಸಿದ್ದಾರೆ. ಮಾತ್ರವಲ್ಲದೆ, ಯಾಕಯ್ಯ ಎಂಬುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿ, ವಿವಾದಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ: ಕೇಸರಿ ಬಿಕಿನಿ ಹಾಕಿದ ದೃಶ್ಯಕ್ಕೆ ಬಿತ್ತು ಕತ್ತರಿ -‘ಪಠಾಣ್’ ಸಿನಿಮಾದ ವಿವಾದಕ್ಕೆ ಬ್ರೇಕ್ ಹಾಕಿದ ಶಾರುಖ್
ಇನ್ನು ಜಿಲ್ಲಾಧಿಕಾರಿ ಕೃಷ್ಣಾ ಆದಿತ್ಯ ಅವರ ಆದೇಶವನ್ನು ಪಾಲಿಸಿರುವ ಅಧಿಕಾರಿಗಳು, ಗೋರಕ್ಷಕ ಯಾಕಯ್ಯ ಎಂಬುವವರಿಗೆ ಬರೋಬ್ಬರಿ 7,500 ರೂ. ದಂಡ ವಿಧಿಸಿದ್ದಾರೆ. ಮಾತ್ರವಲ್ಲದೆ, ಈ ದಂಡವನ್ನು ಪಾವತಿಸದಿದ್ದರೆ ಪ್ರಕರಣ ದಾಖಲಿಸುವುದಾಗಿಯೂ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.
ಸೋಮವಾರ (ಜನವರಿ 02) ನಡೆದ ಈ ವಿಚಿತ್ರ ಘಟನೆಗೆ ಸಂಬಂಧಿಸಿದಂತೆ ದನಗಳ ಮಾಲೀಕರು ಹಾಗೂ ಕಾವಲುಗಾರರು ಎಂಪಿಡಿಒ ಕಚೇರಿ ಬಳಿ ಧರಣಿ ನಡೆಸಿದ್ದಾರೆ.