ರಿಲೀಸ್​ಗೂ ಮುನ್ನವೇ ‘ಪುಪ್ಪ 2’ ಕಲೆಕ್ಷನ್ ಜೋರು! –  ದಾಖಲೆ ಬೆಲೆಗೆ ಸಿನಿಮಾದ  ಡಿಜಿಟಲ್‌ ಹಕ್ಕು ಖರೀದಿಸಿದ ನೆಟ್‌ಫ್ಲಿಕ್ಸ್!

ರಿಲೀಸ್​ಗೂ ಮುನ್ನವೇ ‘ಪುಪ್ಪ 2’ ಕಲೆಕ್ಷನ್ ಜೋರು! –  ದಾಖಲೆ ಬೆಲೆಗೆ ಸಿನಿಮಾದ  ಡಿಜಿಟಲ್‌ ಹಕ್ಕು ಖರೀದಿಸಿದ ನೆಟ್‌ಫ್ಲಿಕ್ಸ್!

ಟಾಲಿವುಡ್‌ ಐಕಾನ್ ಸ್ಟಾರ್‌’ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2: ದಿ ರೂಲ್’ ಸಿನಿಮಾ  ಭಾರಿ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರದ ಟೀಸರ್‌ ಕೂಡ ರಿಲೀಸ್‌ ಆಗಿತ್ತು. ಅಲ್ಲು ಅರ್ಜುನ್‌ ಅವರು ನಾರಿಯ ವೇಷದಲ್ಲಿ ಮಾರಿಯ ರೋಷವನ್ನು ತಾಳಿ ಅಬ್ಬರಿಸಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಎರಡನೇ ಟೀಸರ್‌ ರಿಲೀಸ್‌ ಆಗುವ ಸಾಧ್ಯತೆಯಿದೆ. ಇದೀಗ ಸಿನಿ ಪ್ರೇಮಿಗಳಲ್ಲಿ ಸಿನಿಮಾದ ಮೇಲಿರುವ ನಿರೀಕ್ಷೆ ದುಪ್ಪಟ್ಟಾಗಿದೆ. ಸಿನಿಮಾ ರಿಲೀಸ್‌ಗೂ ಮುನ್ನವೇ ಇದೀಗ ವಿತರಣೆ ಹಕ್ಕು ಭಾರಿ ಮೊತ್ತಕ್ಕೆ ಸೇಲ್‌ ಆಗಿದೆ.

ಇದನ್ನೂ ಓದಿ: ಹಾರ್ದಿಕ್ ನಗುವ ನಾಟಕ? – ಒಳಗೆ ನಡೀತಿರೋದೇನು ಗೊತ್ತಾ?-HITಮ್ಯಾನ್ ಗೆ ಬಿಗ್ ಡೇ!

ಹೌದು,  ‘ಪುಷ್ಪ 2: ದಿ ರೂಲ್’ ಸಿನಿಮಾದ ಕ್ರೇಜ್‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ʼಕೆಜಿಎಫ್-2‌ ಹಾಗೂ ʼಬಾಹುಬಲಿ-2ʼ ಬಳಿಕ ಒಂದು ಸಿನಿಮಾಕ್ಕಾಗಿ ಪ್ರೇಕ್ಷಕರು ಅತ್ಯಂತ ಕಾತರದಿಂದ ಕಾಯುತ್ತಿರುವ ಸಿನಿಮಾ ಅಂದರೆ ಅದು ʼಪುಷ್ಪ-2ʼ. ಸುಕುಮಾರ್ ನಿರ್ದೇಶನದ ʼಪುಷ್ಪ- 2ʼ ಸಿನಿಮಾದ ಉತ್ತರ ಭಾರತ ವಿತರಣೆ ಹಕ್ಕುಗಳನ್ನು ಅನಿಲ್ ಥಡಾನಿ ಅವರು ಮುಂಗಡ ಆಧಾರದ ಮೇಲೆ 200 ಕೋಟಿ ರೂಪಾಯಿಗಳ ದಾಖಲೆ ಬೆಲೆಗೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಇನ್ನು ʼಪುಷ್ಪ-2ʼ ಸಿನಿಮಾದ ಡಿಜಿಟಲ್‌ ಹಕ್ಕನ್ನು ನೆಟ್‌ಫ್ಲಿಕ್ಸ್ 250 ಕೋಟಿ ರೂ.ಗಳ ಮೂಲ ಬೆಲೆಗೆ ಖರೀದಿಸಿದೆ. ಸಿನಿಮಾ ರಿಲೀಸ್‌ ಆದ ಬಳಿಕ ಅದು ಬಾಕ್ಸ್‌ ಆಫೀಸ್‌ ನಲ್ಲಿ ಹೇಗೆ ಕಮಾಯಿ ಮಾಡುತ್ತದೆ ಎನ್ನುವುದರ ಮೇಲೆ ಈ ಮೂಲ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ. 300 ಕೋಟಿ ರೂಪಾಯಿವರೆಗೂ ಇದರ ಬೆಲೆ ವಿಸ್ತರಿಸಬಹುದು ಎಂದು ಮೂಲಗಳು ತಿಳಿಸಿರುವುದಾಗಿ ʼಪಿಂಕ್‌ ವಿಲ್ಲಾʼ ವರದಿ ಮಾಡಿದೆ.

ಈ ಹಿಂದೆ ʼಆರ್‌ ಆರ್‌ ಆರ್‌ʼ ಸಿನಿಮಾದ ಡಿಜಿಟಲ್‌ ಹಕ್ಕು 170 ಕೋಟಿ ರೂ.ಗೆ ಮಾರಾಟವಾಗಿತ್ತು. ʼಪುಷ್ಪ-2ʼ ಸಿನಿಮಾದ ಡಿಜಿಟಲ್‌ ಹಕ್ಕು 250 ಕೋಟಿ ರೂಪಾಯಿಗೆ ಮಾರಾಟವಾದರೆ ಎಲ್ಲಾ ಭಾಷೆಗಳಲ್ಲೂ ಇದು ದಾಖಲೆಯಾಗಲಿದೆ. ಅಲ್ಲು ಅರ್ಜುನ್‌ ಜೊತೆ ಸಿನಿಮಾದಲ್ಲಿ ಫಾಹದ್‌ ಫಾಸಿಲ್‌, ರಶ್ಮಿಕಾ ಮಂದಣ್ಣ ಸೇರಿದಂತೆ ಇತರೆ ಪ್ರಮುಖರು ಕಾಣಿಸಿಕೊಳ್ಳಲಿದ್ದಾರೆ. ಇದೇ ವರ್ಷದ ಆಗಸ್ಟ್‌ 15 ರಂದು ಸಿನಿಮಾ ತೆರೆ ಕಾಣಲಿದೆ.

Shwetha M

Leave a Reply

Your email address will not be published. Required fields are marked *