BMRCL ನಿರ್ಲಕ್ಷ್ಯಕ್ಕೆ ತಾಯಿ ಮತ್ತು ಮಗು ಬಲಿ ಪ್ರಕರಣ – ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಸಿಎಂ

BMRCL ನಿರ್ಲಕ್ಷ್ಯಕ್ಕೆ ತಾಯಿ ಮತ್ತು ಮಗು ಬಲಿ ಪ್ರಕರಣ – ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಸಿಎಂ

BMRCL ನಿರ್ಲಕ್ಷ್ಯಕ್ಕೆ ತಾಯಿ ಮತ್ತು ಮಗು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ತಲಾ ಹತ್ತು ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಬೆಂಗಳೂರಲ್ಲಿ ಮೆಟ್ರೋ ಕಾಮಗಾರಿ ವೇಳೆ ಕಬ್ಬಿಣದ ಪಿಲ್ಲರ್ ಕುಸಿದು​ ತಾಯಿ, ಮಗು ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. BMRCL ಈಗಾಗಲೆ ತಲಾ 10 ಲಕ್ಷ ಪರಿಹಾರ ಘೋಷಣೆ ಮಾಡಿದೆ.

ಇದನ್ನೂ ಓದಿ:  ಬೆಂಗಳೂರಲ್ಲಿ ಮೆಟ್ರೋ ಕಾಮಗಾರಿಗೆ ಎರಡು ಬಲಿ – ತಾಯಿ ಮಗುವಿನ ದಾರುಣ ಸಾವು

ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಎಲ್ಲ ಮಾಹಿತಿ ಪಡೆಯುತ್ತಿದ್ದೇನೆ. ನಾಗವಾರ್‌ನಲ್ಲಿ ಸ್ಟೀಲ್ ಪಿಲ್ಲರ್ ಕುಸಿದಿದೆ. ಗದಗನ ಹೆಣ್ಣು ಮಗಳು ಹಾದು ಹೋಗುವಾಗ ಕಬ್ಬಿಣದ ಪಿಲ್ಲರ್ ತಲೆ ಮೇಲೆ ಬಿದ್ದು ಸಾವಾಗಿದೆ. ಅದು ಅತ್ಯಂತ ದುರದೃಷ್ಟಕರ. ಈ ಬಗ್ಗೆ ತನಿಖೆ ಮಾಡಿಸುತ್ತೇವೆ. ಏನು ಕಾರಣ? ಯಾರು ಗುತ್ತಿಗೆದಾರ? ಎಲ್ಲವನ್ನೂ ತನಿಖೆ ಮಾಡಲಾಗುವುದು. ಸಂಬಂಧಿಸಿವರ ಮೇಲೆ ಪ್ರಕರಣ ದಾಖಲಿಸಲು ಹೇಳಿದ್ದೇನೆ ಎಂದು ಹೇಳಿದರು. ಹೆಣ್ಣೂರು-ನಾಗವಾರ ಮೆಟ್ರೋ ಮಾರ್ಗದಲ್ಲಿ ದುರಂತ ಸಂಭವಿಸಿದೆ. ಕಬ್ಬಿಣ ಕಂಬಿಗಳ ಪಿಲ್ಲರ್ ನಿರ್ಮಾಣ ಹಂತದಲ್ಲಿ ದೋಷ ಕಂಡುಬಂದಿದೆ. ಕಂಬಿ ಕುಸಿದುಬಿದ್ದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತಾಯಿ, ಮಗು ಸಾವನ್ನಪ್ಪಿದ್ದಾರೆ. ತಾಂತ್ರಿಕ ಅಂಶಗಳ ಬಗ್ಗೆ ಪರಿಶೀಲನೆ ನಡೆಸಬೇಕು. ನಿರ್ಮಾಣ ಹಂತದಲ್ಲಿ ದೋಷ ಕಂಡು ಬಂದರೆ ಕಾಮಗಾರಿ ನಿಲ್ಲಿಸುತ್ತೇವೆ ಎಂದು ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್​ ಹೇಳಿದ್ದಾರೆ.

ಐರನ್ ಪಿಲ್ಲರ್ Structural problem ಇತ್ತು ಅಂತ ಮೇಲ್ನೋಟಕ್ಕೆ ಕಂಡುಬಂದಿದೆ. Technical aspects ಪರಿಶೀಲನೆ ಆಗಬೇಕು. ಅದನ್ನು ತಜ್ಞರ ತಂಡ ಮಾಡಲಿದೆ. Structural fault ಇರೋ ಪಿಲ್ಲರ್‌ಗಳ ಕೆಲಸ ನಿಲ್ಲಿಸಲಾಗುತ್ತದೆ ಎಂದು ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್​ ಹೇಳಿದ್ದಾರೆ.

 

suddiyaana