ಗಂಡ ಹೆಂಡತಿ ಜಗಳದಲ್ಲಿ ಬಲಿಯಾಗಿ ಹೋದೆಯಾ ಕಂದ..! – ಹೆತ್ತ ಮಗುವನ್ನೇ ಕೊಂದ ತಾಯಿಗೆ ಕ್ಷಮೆಯುಂಟೇ?

ಹೆಣ್ಣು ಕುಲಕ್ಕೆ ಕಳಂಕ ಎನ್ನಬಹುದೋ.. ಇಲ್ಲವೇ, ಗಂಡನ ಮೇಲಿನ ಸಿಟ್ಟನ್ನು ನಿಯಂತ್ರಿಸಲಾಗದೇ ಇಷ್ಟು ದೊಡ್ಡ ಮಹಾಪರಾಧ ಮಾಡಿರಬಹುದೋ.. ಏನೇ ಆದರೂ ಇಲ್ಲಿ ಬಲಿಯಾಗಿದ್ದು ನಾಲ್ಕು ವರ್ಷದ ಕಂದ. ಅಮ್ಮನ ತೋಳಿನಲ್ಲಿ ಹಾಯಾಗಿದ್ದ ಕಂದ, ಅಮ್ಮನ ಕೈಯಲ್ಲೇ ಪ್ರಾಣ ಬಿಡುವಂತಾಗಿದ್ದು ಮಾತ್ರ ದುರಂತ.
ಇದನ್ನೂ ಓದಿ: ರಾತ್ರಿ ಮಲಗಿದವರು ಮಸಣ ಸೇರಿದರು! – ಒಂದೇ ಮನೆಯ ಐವರು ದುರ್ಮರಣ!
ಕೃತಕ ಬುದ್ಧಿಮತ್ತೆ ಕಂಪನಿಯೊಂದರ ಸಿಇಒ ಆಗಿದ್ದಳು ಸುಚನಾ. 39 ವರ್ಷ ವಯಸ್ಸು. ಮಗ ಚಿನ್ಮಯ್ ಗೆ 4 ವರ್ಷ. ಆರೋಪಿ ಸುಚನಾ ಈಗ ಮಗುವನ್ನು ನಾನೆ ಕೊಲೆ ಮಾಡಿದ್ದೇನೆ ಎಂದು ತಪ್ಪು ಒಪ್ಪಿಕೊಂಡಿದ್ದಾಳೆ. ಗಂಡ ಹೆಂಡತಿಯ ಮಧ್ಯೆ ಉಂಟಾದ ದಾಂಪತ್ಯ ಕಲಹಕ್ಕೆ ಬಲಿಯಾಗಿದ್ದು ಮಾತ್ರ ನಾಲ್ಕು ವರ್ಷದ ಕಂದ.
ತಂದೆ ವೆಂಕಟರಮಣ ಪ್ರತಿ ಭಾನುವಾರ ವಿಡಿಯೋ ಕಾಲ್ ಅಥವಾ ನೇರವಾಗಿ ಮಗನೊಂದಿಗೆ ಮಾತನಾಡಬಹುದು ಎಂದು ನ್ಯಾಯಾಲಯ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಜನವರಿ 7 ರವಿವಾರ ರಂದು ವೆಂಕಟರಮಣ ಮಗುವಿನೊಂದಿಗೆ ಮಾತನಾಡಲು ಪತ್ನಿ ಸುಚನಾಗೆ ವಿಡಿಯೋ ಕರೆ ಮಾಡಿದ್ದಾನೆಯ. ಆಗ ಸುಚನಾ ಮಗು ಮಲಗಿಕೊಂಡಿದೆ ಎಂದು ಹೇಳಿದ್ದಾಳೆ. ಸರಿ ಅಂತ ವೆಂಕಟರಮಣ ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಪತ್ನಿ ಸುಚನಾಗೆ ವಿಡಿಯೋ ಕರೆ ಮಾಡುತ್ತಾರೆ. ಹೀಗೆ ವೆಂಕಟರಮಣ ಪದೇ ಪದೇ ಕರೆ ಮಾಡುತ್ತಾರೆ. ಆದರೆ ಪತಿ ವೆಂಕಟರಮಣರೊಂದಿಗೆ ಮಗ ಚಿನ್ಮಯ್ ಮಾತನಾಡುವುದು ಸುಚನಾಗೆ ಇಷ್ಟವಿರಲಿಲ್ಲ. ಕೆಲ ಸಮಯದ ಬಳಿಕ ಮಗು ಎಚ್ಚರವಿದ್ದಾಗಲೇ ವೆಂಕಟರಮಣ ಮತ್ತೆ ವಿಡಿಯೋ ಕಾಲ್ ಮಾಡುತ್ತಾರೆ. ಆಗ ಸುಚನಾ ಮಗ ಚಿನ್ಮಯ್‌ಗೆ ಮಲಗಲು ಹೇಳುತ್ತಾಳೆ. ಆದರೆ ಚಿನ್ಮಯ್ ಮಲಗಿರಲಿಲ್ಲ. ಆಗ ಸುಚನಾ ಕಾಲ್ ರಿಸಿವ್ ಮಾಡುತ್ತಾಳೆ. ಆಗ ಆರೋಪಿ ಸುಚನಾ ಮಗು ಮಲಗಿಕೊಂಡಿದೆ ಎಂದು ಮತ್ತೆ ವೆಂಕಟರಮಣ ಅವರಿಗೆ ಹೇಳುತ್ತಾಳೆ. ಆದರೆ ಇತ್ತ ಮಗನ ಶಬ್ಧ ಕೇಳಿಸುತ್ತದೆ. ಕೂಡಲೆ ಆರೋಪಿ ಸುಚನಾ, ಪುತ್ರ ಚಿನ್ಮಯ್ ಶಬ್ಧ ಪತಿ ವೆಂಕರಮಣ ಅವರಿಗೆ ಕೇಳಬಾರದೆಂದು ದಿಂಬನ್ನು ಮಗುವಿನ ಮುಖಕ್ಕೆ ಅದುಮುತ್ತಾಳೆ. ಇದರಿಂದ ಉಸಿರು ಗಟ್ಟಿ ಚಿನ್ಮಯ್ ಮೃತಪಡುತ್ತಾನೆ. ಕೊಲೆ ಮಾಡಬೇಕು ಎಂಬುವ ಉದ್ದೇಶದಿಂದ ಮಗನನ್ನು ಹತ್ಯೆ ಮಾಡಿಲ್ಲ ಎಂದು ಸುಚನಾ ಪೊಲೀಸರ ಮುಂದೆ ಹೇಳಿದ್ದಾಳೆ. ಇನ್ನು ಮಗ ಚಿನ್ಮಯ್ ಮೃತಪಟ್ಟ ಬಳಿಕ ಸುಚನಾ ಕೈ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಾಳೆ.
ನಂತರ ಕೂಡಲೇ ಬೆಂಗಳೂರಿಗೆ ಹೋಗಲು ನಿರ್ಧರಿಸುತ್ತಾಳೆ. ಬೆಂಗಳೂರಿಗೆ ಹೋಗಿ ಏನಾದರು ಮಾಡುವ ಅಂತ ಯೋಚನೆ ಮಾಡಿದ್ದ ಸುಚನಾ, ಹೋಟೇಲ್ ಸಿಬ್ಬಂದಿ ಕಡೆಯಿಂದ ಟ್ಯಾಕ್ಸಿ ಬುಕ್ ಮಾಡಿಸಿಕೊಂಡಿದ್ದಾಳೆ. ಬಳಿಕ ಮೃತ ಮಗ ಚಿನ್ಮಯ್ ಶವವನ್ನು ಬ್ಯಾಗ್ನಲ್ಲಿ ಇಟ್ಟುಕೊಂಡು ಗೋವಾದಿಂದ ಬೆಂಗಳೂರಿಗೆ ಬರುತ್ತಿದ್ದಾಗ ಚಿತ್ರದುರ್ಗದಲ್ಲಿ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾಳೆ.