ಚಾಂಪಿಯನ್ಸ್ ಟ್ರೋಫಿಯಿಂದ PAK ಔಟ್? -ಭಾರತ Or ಸೌತ್ ಆಫ್ರಿಕಾದಲ್ಲಿ ಟೂರ್ನಿ
ಹೈಬ್ರಿಡ್ ಗೆ ಒಪ್ಪದೇ ಕೆಟ್ಟ ಪಾಕಿಸ್ತಾನ
ಹಿಡಿದ ಹಠ ಬಿಡ್ಲಿಲ್ಲ.. ಹೇಳಿದವ್ರ ಮಾತೂ ಕೇಳಲಿಲ್ಲ. ನಂದೇ ನಡೀಬೇಕು.. ಎಲ್ರೂ ಇಲ್ಲೇ ಬಂದು ಆಡ್ಬೇಕು ಅಂತಾ ಪಟ್ಟು ಹಿಡಿದ ಪಾಕಿಸ್ತಾನ ಈಗ ಪೇಚಿಗೆ ಸಿಲುಕಿದೆ. ಇಡೀ ಟೂರ್ನಿಯೇ ಕೈ ಜಾರಿ ಹೋಗೋ ಸ್ಥಿತಿಗೆ ಬಂದಿದೆ. ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯಿಂದಲೇ ಹೊರಬೀಳೋ ಹಂತಕ್ಕೆ ಬಂದಿದೆ. ಜಗತ್ತಿನ ಬೇರೆ ಬೇರೆ ರಾಷ್ಟ್ರಗಳೆಲ್ಲಾ ಭಾರತಕ್ಕೆ ಬೆಂಬಲವಾಗಿ ನಿಂತಿದ್ರೆ ಪಾಕಿಸ್ತಾನ ಒಂಟಿಯಾಗಿ ಕೈಕಟ್ಟಿ ನಿಲ್ಲುವಂತಾಗಿದೆ. ಹಾಗಾದ್ರೆ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಶಿಫ್ಟ್ ಆಯ್ತಾ? ಭಾರತದ ಪಂದ್ಯಗಳು ಎಲ್ಲಿ ನಡೆಯುತ್ತೆ? ಮೊಂಡಾಟ ಮಾಡಿದ ನೆರೆ ರಾಷ್ಟ್ರಕ್ಕೆ ಆಗೋ ನಷ್ಟ ಎಷ್ಟು? ಐಸಿಸಿ ಮಾಡಿದ ವಾರ್ನಿಂಗ್ ಏನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸಿಹಿ ಸಾವು ಸುಬ್ಬಿ ಎಂಟ್ರಿ – ಸೀತಾ ಹುಚ್ಚಿ.. ರಾಮ್ ಮತ್ತೊಂದು ಮದುವೆ
2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸ್ತಾ ಇದೆ. 2008ರ ಬಳಿಕ ಪಾಕ್ಗೆ ಕಾಲಿಡದ ಭಾರತವನ್ನ ಹೇಗಾದ್ರೂ ಮಾಡಿ ತನ್ನ ದೇಶಕ್ಕೆ ಕರೆಸಿಕೊಳ್ಬೇಕು ಅನ್ನೋ ಲೆಕ್ಕಾಚಾರದಲ್ಲಿತ್ತು. ಬಟ್ ಭಾರತ ಮಾತ್ರ ಟೂರ್ನಿ ಆಡದೇ ಇದ್ರೂ ಪರ್ವಾಗಿಲ್ಲ ಪಾಕ್ಗೆ ಮಾತ್ರ ಕಾಲಿಡೋ ಪ್ರಶ್ನೆಯೇ ಇಲ್ಲ ಅಂತಾ ಖಡಾಖಂಡಿತವಾಗಿ ಹೇಳಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಗಾಗಿ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದಿಲ್ಲ ಎಂದು ಭಾರತೀಯ ವಿದೇಶಾಂಗ ಸಚಿವಾಲಯವೂ ಘೋಷಿಸಿದೆ. ಆದ್ರೂ ಪಟ್ಟು ಬಿಡದ ಪಾಕಿಸ್ತಾನ ನಾನಾ ಕಸರತ್ತುಗಳನ್ನ ಮಾಡಿ ಏನೇನೋ ಬೆದರಿಕೆಗಳನ್ನೂ ಹಾಕಿದೆ. ಇದೇ ವಿಚಾರವಾಗಿ ಶುಕ್ರವಾರ ಐಸಿಸಿ ಸದಸ್ಯ ರಾಷ್ಟ್ರಗಳ ಜೊತೆ ಸಭೆ ನಡೆಸಿದ್ದು, ಪಾಕಿಸ್ತಾನಕ್ಕೆ ಸರಿಯಾಗೇ ಬೆಂಡೆತ್ತಿದೆ.
ಹೈಬ್ರಿಡ್ ಮಾದರಿಯನ್ನ ಒಪ್ಪಿಕೊಳ್ಳಿ.. ಇಲ್ಲದಿದ್ರೆ ಟೂರ್ನಿಯಿಂದಲೇ ಹೊರಗಿರಿ!
ಚಾಂಪಿಯನ್ಸ್ ಟ್ರೋಫಿ ಆಯೋಜನೆ ಹೊಣೆ ಹೊತ್ತಿದ್ದ ಪಾಕಿಸ್ತಾನಕ್ಕೆ ಈ ಹಿಂದೆ ಐಸಿಸಿ ಭಾರತದ ಪಂದ್ಯಗಳನ್ನ ಹೊರರಾಷ್ಟ್ರಗಳಲ್ಲಿ ಆಯೋಜನೆ ಮಾಡುವಂತೆ ಹೇಳಿತ್ತು. ಬಟ್ ಪಾಕ್ ಮಾತ್ರ ಇದಕ್ಕೆ ಕ್ಯಾರೇ ಎಂದಿರಲಿಲ್ಲ. ಇಲ್ಲ ಎಲ್ಲಾ ಭದ್ರತೆ ಕೊಡೋಕೆ ನಾವ್ ರೆಡಿ ಇದ್ದೇವೆ. ಸ್ಟೇಡಿಯಮ್ಗಳನ್ನೂ ಹೈಟೆಕ್ ಮಾಡ್ತಿದ್ದೇವೆ. ಸೋ ಇಲ್ಲೇ ಬಂದು ಮ್ಯಾಚ್ ಆಡ್ಬೇಕು ಅಂತಾ ಪಟ್ಟು ಹಿಡಿದಿತ್ತು. ಐಸಿಸಿ ಮಾತ್ರ ಉಭಯ ದೇಶಗಳಿಗೂ ಸಮಸ್ಯೆಯಾಗದಂತೆ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ಆಯೋಜನೆಗೆ ಒಪ್ಪಿಕೊಳ್ಳುವಂತೆ ಐಸಿಸಿ ಸಲಹೆ ನೀಡಿತ್ತು. ಭಾರತ ಕೂಡಾ ತಟಸ್ಥ ಸ್ಥಳದಲ್ಲಿ ತನ್ನ ಪಂದ್ಯಗಳನ್ನು ಆಡಲು ಒಪ್ಪಿಕೊಂಡಿತ್ತು. ಬಟ್ ಪಾಕ್ ಮಾತ್ರ ತನ್ನ ಹುಚ್ಚಾಟ ಬಿಟ್ಟಿಲ್ಲ. ಹೀಗಾಗಿ ಐಸಿಸಿ ಪಿಸಿಬಿಗೆ ಖಡಕ್ ವಾರ್ನಿಂಗ್ ಮಾಡಿದೆ. ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಳ್ಳಿ. ಇಲ್ಲದಿದ್ರೆ ಟೂರ್ನಿಯಿಂದಲೇ ಹೊರಗುಳಿಯಲು ಸಿದ್ಧರಾಗಿ ಅಂತಾ ಎಚ್ಚರಿಕೆ ನೀಡಿದೆ.
ಪಿಸಿಬಿ ನಕರ ಮಾಡಿದ್ರೆ ಸೌತ್ ಆಫ್ರಿಕಾ ಅಥವಾ ಭಾರತದಲ್ಲಿ ಟೂರ್ನಿ!
ಚಾಂಪಿಯನ್ಸ್ ಟ್ರೋಫಿಗೆ 8 ರಾಷ್ಟ್ರಗಳು ಅರ್ಹತೆ ಪಡೆದಿವೆ ಭಾರತ, ಪಾಕಿಸ್ತಾನ್, ಬಾಂಗ್ಲಾದೇಶ್, ನ್ಯೂಝಿಲೆಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌತ್ ಆಫ್ರಿಕಾ ಹಾಗೇ ಅಫ್ಘಾನಿಸ್ತಾನ್. ಐಸಿಸಿ ಸಭೆಯಲ್ಲಿ 7 ರಾಷ್ಟ್ರಗಳು ಹೈಬ್ರಿಡ್ ಮಾದರಿ ಆಯೋಜನೆಗೆ ಓಕೆ ಅಂದಿವೆ. ಬಟ್ ಪಾಕ್ ಒಂದನ್ನ ಬಿಟ್ಟು. ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಈ ಹಠಮಾರಿ ನಿರ್ಧಾರದಿಂದ ಐಸಿಸಿ ಕೂಡ ತಲೆಕೆಡಿಸಿಕೊಂಡಿದೆ. ಇದೀಗ ಪಾಕಿಸ್ತಾನ್ ತಂಡವನ್ನೇ ಟೂರ್ನಿಯಿಂದ ಹೊರಗಿಟ್ಟು ಸೌತ್ ಆಫ್ರಿಕಾ ಅಥವಾ ಭಾರತದಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸುವ ಬಗ್ಗೆ ಕೂಡ ಚಿಂತಿಸಲಾಗಿದೆ. ಸೋ ಪಾಕಿಸ್ತಾನ ಹೈಬ್ರಿಡ್ ಮಾದರಿಗೆ ಒಪ್ಪಿಗೆ ನೀಡದಿದ್ರೆ ಟೂರ್ನಿ ಆಯೋಜನೆಯ ಹಕ್ಕು ಕೈ ತಪ್ಪುವುದಲ್ಲದೇ, ಇಡೀ ಟೂರ್ನಿಯಿಂದ ಪಾಕಿಸ್ತಾನ್ ತಂಡ ಹೊರಬೀಳಲಿದೆ.
ಐಸಿಸಿ ನಿರ್ಧಾರಕ್ಕೆ ಒಪ್ಪದಿದ್ರೆ ಪಾಕ್ ಗೆ ಸಾವಿರಾರು ಕೋಟಿ ನಷ್ಟ!
ಟೂರ್ನಿಗಾಗಿಯೇ ಪಾಕಿಸ್ತಾನ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ ಕ್ರೀಡಾಂಗಣಗಳನ್ನ ಹೈಟೆಕ್ ಮಾಡ್ತಿದೆ. ಹಾಗೊಂದು ವೇಳೆ ಟೂರ್ನಿ ಇಲ್ಲಿಂದ ಎತ್ತಂಗಡಿಯಾದದ್ರೆ ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಲಿದೆ. 1996 ರ ಬಳಿಕ ಪಾಕಿಸ್ತಾನವು ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯನ್ನು ಆಯೋಜಿಸುತ್ತಿದೆ. ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಸುವ ಬಗ್ಗೆ ಯೋಜಿಸಲಾಗಿದೆ. ಬಟ್ ಈಗ ಪಾಕಿಸ್ತಾನ ಭಾರತದ ವಿಚಾರವಾಗಿ ಮೊಂಡುತನ ಮುಂದುವರಿಸಿದ್ರೆ ಐಸಿಸಿ ಟೂರ್ನಿ ಆಯೋಜನೆಯ ಹಕ್ಕು ಕಳೆದುಕೊಳ್ಳೋದ್ರ ಜೊತೆಗೆ ನಷ್ಟವನ್ನೂ ಅನುಭವಿಸಲಿದೆ.
ಭಾರತ ಆಡದೇ ಇದ್ರೆ ನಯಾಪಸೆ ಹಣವೂ ಸಿಗಲ್ಲ!
ಌಕ್ಚುಲಿ ಪಿಸಿಬಿ ಭಾರತಕ್ಕೆ ಇಷ್ಟೊಂದು ಇಂಪಾರ್ಟೆನ್ಸ್ ಕೊಡೋದಕ್ಕೆ ಕಾರಣ ಕೂಡ ಇದೆ. ಟೂರ್ನಿಯಲ್ಲಿ ಭಾರತ ಆಡದೇ ಇದ್ರೆ ಒಂದು ರೂಪಾಯಿಯೂ ಸಿಗಲ್ಲ. ಭಾರತ ತಂಡ ಇಲ್ಲದ ಐಸಿಸಿ ಟೂರ್ನಿಗೆ ಯಾವುದೇ ಪ್ರಸಾರಕರು ನಯಾ ಪೈಸೆಯೂ ಕಮರ್ಷಿಯಲ್ ಕೊಡಲ್ಲ. ಇದು ಪಾಕಿಸ್ತಾನಕ್ಕೂ ತಿಳಿದಿದೆ. ಮೊಹ್ಸಿನ್ ನಖ್ವಿ ಅವರು ಹೈಬ್ರಿಡ್ ಮಾದರಿಗೆ ಒಪ್ಪಿದರೆ ಮಾತ್ರ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಇಲ್ಲದೇ ಇದ್ರೆ ಸಂಪೂರ್ಣವಾಗಿ ಬೇರೆ ದೇಶಕ್ಕೆ ಸ್ಥಳಾಂತರಿಸಬೇಕಾಗಬಹುದು. ಬೇರೆ ದೇಶಕ್ಕೆ ಶಿಫ್ಟ್ ಆದ್ರೆ ಪಾಕಿಸ್ತಾನ ಟೂರ್ನಿಯಿಂದಲೇ ಹೊರಬೀಳಲಿದೆ.
ಒಮ್ಮತ ಮೂಡದ ಕಾರಣ ಟೂರ್ನಿಯೇ ಮುಂದೂಡಿಕೆ?
ಬಿಸಿಸಿಐ ಹಾಗೂ ಪಿಸಿಬಿ ನಡುವೆ ಒಮ್ಮತ ಮೂಡ್ತಿಲ್ಲ. ಹೀಗಾಗಿ ಐಸಿಸಿ ಟೂರ್ನಿಯನ್ನೇ ಮುಂದೂಡಿಕೆ ಮಾಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳುವ 8 ದೇಶಗಳಿಗೆ 2025ರ ಫೆಬ್ರವರಿ-ಮಾರ್ಚ್‌ನಲ್ಲಿ ಮಾತ್ರ ಫ್ರೀ ಇದೆ. ಉಳಿದಂತೆ ದ್ವಿಪಕ್ಷೀಯ ಸರಣಿಗಳಿಗೆ ಡೇಟ್ ಫಿಕ್ಸ್ ಮಾಡಿಕೊಂಡಿವೆ. ಹೀಗಾಗಿ ಸದ್ಯ ನಿಗದಿಯಾಗಿರುವ ಸಮಯದಲ್ಲೇ ಚಾಂಪಿಯನ್ಸ್ ಟ್ರೋಫಿ ಆಯೋಜಿಸಬೇಕಿದೆ. ಆದರೆ ಟೂರ್ನಿಗೆ ಇನ್ನು 80 ದಿನಗಳು ಮಾತ್ರ ಬಾಕಿಯಿದ್ದು, ಒಂದೆರಡು ದಿನದಲ್ಲೇ ಆತಿಥ್ಯದ ಬಗ್ಗೆ ಐಸಿಸಿ ನಿರ್ಧಾರ ಕೈಗೊಳ್ಳಬೇಕಿದೆ. ಇಲ್ಲದಿದ್ರೆ ಟೂರ್ನಿ ಅನಿರ್ದಿಷ್ಟಾವಧಿಗೆ ಮುಂದೂಡಕೆಯಾಗಲೂಬಹುದು.
ಇನ್ನು ಈ ಹಗ್ಗಜಗ್ಗಾಟದ ನಡುವೆಯೇ ಬಿಸಿಸಿಐ ಕಾರ್ಯದರ್ಶಿಯಾಗಿರುವ ಜಯ್ ಶಾ ಡಿಸೆಂಬರ್ 1ರಿಂದ ಐಸಿಸಿ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಸದ್ಯ ನ್ಯೂಜಿಲೆಂಡ್‌ನ ಕ್ರೆಗ್ ಬಾರ್ಕ್‌ಲೆ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ಅವರ ಅವಧಿ ಶನಿವಾರ ಕೊನೆಗೊಳ್ಳಲಿದೆ. ಚಾಂಪಿಯನ್ಸ್ ಟ್ರೋಫಿಯ ಆತಿಥ್ಯದ ಬಗ್ಗೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ಹೊತ್ತಲ್ಲೇ ಜಯ್ ಶಾ ಮುಖ್ಯಸ್ಥ ಸ್ಥಾನ ಸ್ವೀಕರಿಸುತ್ತಿರುವುದು ಕುತೂಹಲ ಹೆಚ್ಚಿಸಿದೆ. ಒಟ್ನಲ್ಲಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಿಚಾರದಲ್ಲಿ ಗೊಂದಲ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣ್ತಿಲ್ಲ. ಪಿಸಿಬಿ ಒಪ್ಪಿದ್ರೆ ಟೂರ್ನಿಯು ಪಾಕಿಸ್ತಾನ್ ಮತ್ತು ಯುಎಇ ನಲ್ಲಿ ನಡೆಯುವ ಸಾಧ್ಯತೆ ಇದೆ. ಟೂರ್ನಿಯ ಬಹುತೇಕ ಪಂದ್ಯಗಳು ಪಾಕಿಸ್ತಾನದಲ್ಲೇ ನಡೆಯಲಿದೆ. ಆದರೆ ಭಾರತದ ಪಂದ್ಯಗಳಿಗೆ ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ರತ ತಂಡ ಸೆಮಿಫೈನಲ್ ಮತ್ತು ಫೈನಲ್ಗೆ ಪ್ರವೇಶಿಸಿದ್ರೆ ಆ ಪಂದ್ಯಗಳನ್ನೂ ದುಬೈನಲ್ಲೇ ಆಯೋಜಿಸಬೇಕಾದ ಅನಿವಾರ್ಯತೆ ಪಿಸಿಬಿಗೆ ಬರಲಿದೆ.