‘ಗ್ಯಾರಂಟಿ’ಗಳ ಈಡೇರಿಕೆಯೇ ಸರ್ಕಾರಕ್ಕೆ ಸವಾಲು – ‘ಫ್ರೀ’ ಕರೆಂಟ್ ಕೊಟ್ರೆ ಇಷ್ಟೆಲ್ಲಾ ಹೊರೆಯಾಗುತ್ತಾ?

‘ಗ್ಯಾರಂಟಿ’ಗಳ ಈಡೇರಿಕೆಯೇ ಸರ್ಕಾರಕ್ಕೆ ಸವಾಲು – ‘ಫ್ರೀ’ ಕರೆಂಟ್ ಕೊಟ್ರೆ ಇಷ್ಟೆಲ್ಲಾ ಹೊರೆಯಾಗುತ್ತಾ?

ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳ ವಿಚಾರ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಯೋಜನೆ ಜಾರಿ ವೆಚ್ಚ ಸೇರಿದಂತೆ ಸರ್ಕಾರ ಹತ್ತಾರು ಲೆಕ್ಕಾಚಾರ ಹಾಕುತ್ತಾ ಭಾರೀ ಕಸರತ್ತು ನಡೆಸುತ್ತಿದೆ. ಇದೇ ವಿಚಾರವಾಗಿ ಇಂದು ಸಿಎಂ ಸಿದ್ದರಾಮಯ್ಯ ಐದು ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ್ರು.

ಆಹಾರ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ಇಂಧನ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ರು. ಅದರಲ್ಲೂ ಸಭೆಯಲ್ಲಿ ಪ್ರಮುಖವಾಗಿ 200 ಯೂನಿಟ್ ಉಚಿತ ವಿದ್ಯುತ್ (Free Electricity) ಜಾರಿ ಬಗ್ಗೆ ಅಧಿಕಾರಿಗಳಿಂದ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ವಿಸ್ತೃತವಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಸಿದ್ದು ಸಂಪುಟ ಸಚಿವರಲ್ಲೇ ಅತ್ಯಂತ ಶ್ರೀಮಂತರು ಯಾರು – ಮಂತ್ರಿಗಳ ವಿದ್ಯಾರ್ಹತೆ, ವಯಸ್ಸು, ಜಾತಿ ಏನು..?

ಉಚಿತ ವಿದ್ಯುತ್​ ಯೋಜನೆಯಿಂದ 2.14 ಕೋಟಿ ಕುಟುಂಬಗಳಿಗೆ ಅನುಕೂಲವಾಗಿದೆ. ವಾರ್ಷಿಕ ಬಳಕೆಗೆ ಅಂದಾಜು 13,575 ಮಿಲಿಯನ್ ಯೂನಿಟ್ ಬೇಕು. ಈ ಯೋಜನೆಗೆ ಇಂಧನ ಶುಲ್ಕ ಅಂದಾಜು 8,008 ಕೋಟಿ ರೂ. ತಗಲುತ್ತದೆ. ಯೋಜನೆಗೆ ಒಟ್ಟು 12,038 ಕೋಟಿ ರೂಪಾಯಿ ಅಗತ್ಯವಿದೆ ಎಂದು ಮಾಹಿತಿ ನೀಡಿದ್ದಾರೆ. ಕರ್ನಾಟಕದಲ್ಲಿ ಸುಮಾರು 50ರಷ್ಟು ಜನರು 100 ಯೂನಿಟ್ ಗಿಂತ ಕಡಿಮೆ ಬಳಸುವವರಿದ್ದಾರೆ. ಕೃಷಿ ಇಲಾಖೆಯ ಪಂಪ್‌ಸೆಟ್‌ಗೆ ವರ್ಷಕ್ಕೆ 14 ಸಾವಿರ ಕೋಟಿ ಬೇಕು. ಉಚಿತ ಹಿನ್ನೆಲೆಯಲ್ಲಿ ವಿದ್ಯುತ್ ಬಳಕೆದಾರರು ಇನ್ನಷ್ಟು ಹೆಚ್ಚಿಗೆ ಮಾಡಲಿದ್ದಾರೆ. ಗ್ಯಾಸ್ ಬದಲಾಗಿ ವಿದ್ಯುತ್ ಚಾಲಿತ ಒಲೆಗಳು ಹೆಚ್ಚಾಗಿ ಬಳಸಲಿದ್ದಾರೆ. ಇದರಿಂದ ಸರ್ಕಾರದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇರುತ್ತೆ. ಒಟ್ಟಾರೆಯಾಗಿ 5 ಗ್ಯಾರಂಟಿಗಳಿಗೆ ಕಮ್ಮಿ ಅಂತ ಇಟ್ಟಿಕೊಂಡರು 50 ಸಾವಿರ ಕೋಟಿ ರೂ. ಬೇಕು. 5 ವರ್ಷಕ್ಕೆ ಸುಮಾರು 4 ರಿಂದ 5 ಲಕ್ಷ ಕೋಟಿ ರೂ. ಅಗತ್ಯ ಇದೆ ಎನ್ನಲಾಗಿದೆ.

suddiyaana