ಬಾಲ್ ವೇಸ್ಟ್.. ಬ್ಯಾಟ್ ಸೈಲೆಂಟ್ – ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಾಯಕನೇ ದೊಡ್ಡ ಹೊರೆ..!

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋತಿದೆ. ಆದರೆ, ಈ ಸೋಲಿಗೆ ಕಾರಣ ನಾಯಕ ರುತುರಾಜ್ ಗಾಯಕ್ವಾಡ್ ಎಂಬ ಮಾತು ಕೇಳಿಬರುತ್ತಿದೆ. ನಾಯಕನ ನಿಧಾನಗತಿಯ ಇನ್ನಿಂಗ್ಸ್ ತಂಡದ ಸೋಲಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಧೋನಿ ಎದುರಲ್ಲೇ ನೆಲ ಕಚ್ಚಿದ CSK – ವಿಶಿಲ್ ಹಾಕಿ ಮನೆಗೆ ಕಳಿಸಿದ ಕಿಶನ್
ಚೆನ್ನೈ ಸೂಪರ್ ಕಿಂಗ್ಸ್ ತನ್ನ ತವರು ಮೈದಾನ ಚೆಪಾಕ್‌ನಲ್ಲಿ ಸೋತ ಅವಮಾನ ಎದುರಿಸಿದೆ. ಆದರೆ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೋಲಲು ಪ್ರಮುಖ ಕಾರಣ ನಾಯಕ ರುತುರಾಜ್ ಗಾಯಕ್ವಾಡ್ ಎಂಬ ಬೇಸರ ಹೊರಹಾಕಿದ್ದಾರೆ ಸಿಎಸ್‌ಕೆ ಫ್ಯಾನ್ಸ್. ಆ ಕಡೆ ರನ್ ಹೊಡೆಯಲಿಲ್ಲ. ಈ ಕಡೆ ಬಾಲ್ ಉಳಿಸಲಿಲ್ಲ. ರುತುರಾಜ್ ಆಡಿರುವ ಆಟ ಕಾದು ಕಾದು ತಂಡವನ್ನೇ ಬಲಿಕೊಟ್ಟಂತಿತ್ತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ನಾಯಕ ರುತುರಾಜ್ ಗಾಯಕ್ವಾಡ್ ಆರಂಭಿಕರಾಗಿ ಮೈದಾನಕ್ಕೆ ಇಳಿದರು. ಸಂಜು ಸ್ಯಾಮ್ಸನ್ ಜೊತೆ ಸೇರಿ ಇನ್ನಿಂಗ್ಸ್ ಪ್ರಾರಂಭಿಸಿದರು. ಚೆನ್ನೈ ತಂಡಕ್ಕೆ ಈ ಆರಂಭಿಕ ಜೋಡಿಯಿಂದ ಹೆಚ್ಚಿನ ನಿರೀಕ್ಷೆಯಿತ್ತು. ಚೆನ್ನೈ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಸಂಜು ಸ್ಯಾಮ್ಸನ್ ಬೇಗನೆ ಔಟ್ ಆದರು. ಸಂಜು ಸ್ಯಾಮ್ಸನ್ ಔಟಾದ ಬಳಿಕ ರುತುರಾಜ್ ಗಾಯಕ್ವಾಡ್ ಅವರಿಂದ ಬಿಗ್ ಇನ್ನಿಂಗ್ಸ್ ಅನ್ನು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, ಅವರ ಬ್ಯಾಟ್ ಈ ಪಂದ್ಯದಲ್ಲಿ ಸಂಪೂರ್ಣವಾಗಿ ಮೌನವಾಗಿತ್ತು. ಅವರ ಬ್ಯಾಟ್ ಯಾವುದೇ ವಿಶೇಷ ಪ್ರದರ್ಶನ ನೀಡಲಿಲ್ಲ. ಗಾಯಕ್ವಾಡ್ ಅವರ ಸ್ಟ್ರೈಕ್ ರೇಟ್ 100 ಕೂಡ ಇರಲಿಲ್ಲ. 21 ಎಸೆತಗಳನ್ನು ಎದುರಿಸಿದ ನಂತರ ಕೇವಲ 15 ರನ್ ಗಳಿಸಿ ಔಟಾದರು. ಗಾಯಕ್ವಾಡ್ ತಮ್ಮ ಇನ್ನಿಂಗ್ಸ್‌ನಲ್ಲಿ ಒಂದೇ ಒಂದು ಫೋರ್ ಅಥವಾ ಸಿಕ್ಸ್ ಬಾರಿಸಲಿಲ್ಲ. ಅವರ ಸ್ಟ್ರೈಕ್ ರೇಟ್ ಕೇವಲ 71.43 ಆಗಿತ್ತು.
ಗಾಯಕ್ವಾಡ್ ಔಟಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಆಗುತ್ತಿದ್ದಾರೆ. ಚೆನ್ನೈ ತಂಡಕ್ಕೆ ಗಾಯಕ್ವಾಡ್ ಶಾಪ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಐಪಿಎಲ್ 2026 ರಲ್ಲಿ ರುತುರಾಜ್ ಗಾಯಕ್ವಾಡ್ ಮಿಶ್ರ ಪ್ರದರ್ಶನ ನೀಡಿದ್ದಾರೆ. ಅವರು ಇಲ್ಲಿಯವರೆಗೆ 13 ಪಂದ್ಯಗಳಲ್ಲಿ 29.18 ರ ಸರಾಸರಿಯಲ್ಲಿ 321 ರನ್ ಗಳಿಸಿದ್ದಾರೆ. ಈ ಆವೃತ್ತಿಯಲ್ಲಿ ಅವರ ಸ್ಟ್ರೈಕ್ ರೇಟ್ ಕೇವಲ 120.67 ರ ಸ್ಟ್ರೈಕ್ ರೇಟ್. ಈ ಪ್ರದರ್ಶನ ಚೆನ್ನೈ ತಂಡದ ಮೇಲೆ ಭಾರೀ ಪರಿಣಾಮ ಬೀರಿದೆ. ರುತುರಾಜ್ ಗಾಯಕ್ವಾಡ್ 2020 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ ಸಿಎಸ್‌ಕೆ ತಂಡದ ಭಾಗವಾಗಿದ್ದಾರೆ. ಗಾಯಕ್ವಾಡ್ 84 ಐಪಿಎಲ್ ಪಂದ್ಯಗಳನ್ನು ಆಡಿದ್ದು, 135.33 ಸ್ಟ್ರೈಕ್ ರೇಟ್‌ನಲ್ಲಿ 2,823 ರನ್ ಗಳಿಸಿದ್ದಾರೆ. ಗಾಯಕ್ವಾಡ್ ಇದುವರೆಗೆ ಐಪಿಎಲ್‌ನಲ್ಲಿ ಎರಡು ಶತಕಗಳು ಮತ್ತು 22 ಅರ್ಧಶತಕಗಳನ್ನು ಬಾರಿಸಿದ್ದಾರೆ.

ನೋಡಿರಿ

