ಫ್ರಾಡ್ ಕಾಲ್‌ ಅಂತಾ ಕರೆ ಕಟ್‌ ಮಾಡ್ತಿದ್ದ – 6 ತಿಂಗಳ ನಂತರ ಕಾದಿತ್ತು ಅಚ್ಚರಿ!

ಫ್ರಾಡ್ ಕಾಲ್‌ ಅಂತಾ ಕರೆ ಕಟ್‌ ಮಾಡ್ತಿದ್ದ – 6 ತಿಂಗಳ ನಂತರ ಕಾದಿತ್ತು ಅಚ್ಚರಿ!

ದಿನದಿಂದ ದಿನಕ್ಕೆ ಸೈಬರ್‌ ಕ್ರೈಂ ಹೆಚ್ಚಾಗುತ್ತಿದೆ. ಫೇಕ್‌ ಮೆಸೆಜ್‌, ವಂಚನೆ ಪ್ರಕರಣ ವರದಿಯಾಗುತ್ತಲೇ ಇದೆ. ಈ ಬಗ್ಗೆ ಸರ್ಕಾರ ಪೊಲೀಸ್‌ ಇಲಾಖೆ ಎಚ್ಚರಿಕೆ ಕೊಡುತ್ತಲೇ ಇರುತ್ತೆ. ಹೀಗಾಗಿ ಈಗೀಗ ಜನರು ಕೂಡ ಹೆಚ್ಚು ಜಾಗರೂಕತೆಯಿಂದಲೇ ಇರುತ್ತಾರೆ.. ಇದೀಗ ಇಲ್ಲೊಬ್ಬ ವ್ಯಕ್ತಿಗೆ ಅದೃಷ್ಟ ಹುಡುಕಿಕೊಂಡು ಬಂದಿದ್ದು, ಫೇಕ್‌ ಮೆಸೆಜ್‌ ಅಂತಾ ನಿಲಕ್ಷ್ಯ ಮಾಡಿದ್ದಾನೆ. ಕೊನೆಗೆ ಪರಿಶೀಲಿಸಿದಾಗ ಜಾಕ್‌ ಪಾಟ್‌ ಹೊಡೆದಿದೆ.

ಇದನ್ನೂ ಓದಿ:‌ ಇಸ್ರೋದಿಂದ ಮತ್ತೊಂದು ಐತಿಹಾಸಿಕ ಮೈಲಿಗಲ್ಲು.. EOS-8 ಮಿಷನ್ ಉಡಾವಣೆ ಯಶಸ್ವಿ!

ಏನಿದು ಘಟನೆ?

ಈ ಘಟನೆ ಅಮೆರಿಕಾದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಫೆಬ್ರವರಿ ತಿಂಗಳಲ್ಲಿ ಮಳಿಗೆಯೊಂದರಲ್ಲಿ ಕೆಲ ವಸ್ತುಗಳನ್ನು ಖರೀದಿಸಲು ತೆರಳಿದ್ದಾನೆ. ಈ ವೇಳೆ ಕೆಲ ಶಾಪ್‌ಗಳಲ್ಲಿ ರಿಜಿಸ್ಟ್ರೇಶನ್ ಮಾಡಿದ್ದಾನೆ. ಅರೆನಾಕ್ ಕೌಂಟ್ ಪ್ಲೇಯರ್ ಆಗಿರುವ ಈತ, ಗೇಮ್ಸ್ ಹಾಗೂ ಇತರ ಕೆಲ ಕ್ರೀಡಗಳಿಗೆ ನೋಂದಣಿ ಮಾಡಿದ್ದಾನೆ. ಹೀಗಿರುವಾಗ ಮಿಚಿಗನ್ ಲಾಟರಿಗೂ ಹಣ ಪಾವತಿ ಮಾಡಿದ್ದಾನೆ. ಆದರೆ ಇದರ ಬಗ್ಗೆ ಈ ವ್ಯಕ್ತಿಗೆ ಅರಿವೇ ಇರಲಿಲ್ಲ.

ಫೆಬ್ರವರಿ ತಿಂಗಳಲ್ಲಿ ಈ ಲಾಟರಿ ಅದೃಷ್ಠಶಾಲಿಗಳನ್ನು ಪ್ರಕಟಿಸಿದೆ. ಈ ಪೈಕಿ ಅರೆನಾಕ್ ಕೌಂಟಿ ಪ್ಲೇಯರ್ 2ನೇ ಬಹುಮಾನ ಗೆದ್ದಿದ್ದಾರೆ. 2 ಕೋಟಿ ರೂಪಾಯಿ ಬಹುಮಾನ ಮೊತ್ತ ವಿತರಿಸಲು ಮಿಚಿಗನ್ ಲಾಟರಿ, ಮೊದಲು ಇಮೇಲ್ ಕಳುಹಿಸಿದೆ. ಆದರೆ ಈ ಇಮೇಲ್ ವಂಚನೆ ಇರಬಹದು ಎಂದು ಡಿಲೀಟ್ ಮಾಡಲಾಗಿದೆ.

ಇಮೇಲ್‌ಗೆ ಉತ್ತರವಿಲ್ಲದ ಕಾರಣ ಬಳಿಕ ಫೋನ್ ಕರೆ ಮಾಡಲಾಗಿದೆ. ಆದರೆ ಫೋನ್ ಮೂಲಕ ವಂಚನೆ ಹೆಚ್ಚಾಗಿರುವ ಕಾರಣ ನಿರ್ಲಕ್ಷಿಸಲಾಗಿದೆ. ಅದೆಷ್ಟೆ ಕರೆ ಮಾಡಿದರೂ ಈತ ಮಾತ್ರ ಸ್ಪಂದನೆ ನೀಡಲಿಲ್ಲ. ಬರೋಬ್ಬರಿ 6 ತಿಂಗಳು ಪದೇ ಪದೇ ಈ ಕರೆ ಬಂದಿದೆ. ಹೀಗಿರುವಾಗ ಈತನಿಗೆ ಅನುಮಾನ ಶುರುವಾಗಿದೆ. ಇಷ್ಟೊಂದು ಕರೆ ಮಾಡುತ್ತಿರುವುದೇಕೆ ಎಂದು ಪರಿಶೀಲಿಸಲು ಮಿಚಿಗನ್ ಲಾಟರಿ ಔಟ್‌ಲೆಟ್‌ಗೆ ತೆರಳಿದ್ದಾನೆ.

ಈ ವೇಳೆ ಅಚ್ಚರಿಯಾಗಿದೆ. ಇಮೇಲ್ ಹಾಗೂ ಕರೆಯಲ್ಲಿ ತಿಳಿಸಿರುವಂತೆ ಲಾಟರಿ ಬಹುಮಾನ ಬಂದಿದೆ. 2 ಕೋಟಿ ರೂಪಾಯಿ ಮೊತ್ತ ಸ್ವೀಕರಿಸಿದ್ದಾನೆ. ಈ ಕುರಿತು ಸಂತಸ ಹಂಚಿಕೊಂಡಿರುವ ಈತ, ನಾನು ಸ್ಪಾಮ್ ಕಾಲ್ ಎಂದು ಕಡೆಗಣಿಸಿದ್ದೆ. ಆದರೆ 2 ಕೋಟಿ ರೂಪಾಯಿ ಬಹುಮಾನ ಬಂದಿದೆ. ಇದು ನನ್ನ ಜೀವನವನ್ನೇ ಬದಲಿಸಿದೆ ಎಂದಿದ್ದಾನೆ.

Shwetha M