ನಾನು ನಿನ್ನನ್ನ ಬಿಟ್ಟಿರಲ್ಲ.. ಬೆಕ್ಕಣ್ಣನ ಜೊತೆ ಕರುವಿನ ಫ್ರೆಂಡ್‌ಶಿಪ್!

ಮನೆಯಲ್ಲಿ ಸಾಕು ಪ್ರಾಣಿಗಳು ಇದ್ರೆ ಟೈಮ್ ಹೋಗೋದೇ ಗೊತ್ತಾಗಲ್ಲ. ಅವುಗಳ ಆಟ, ತುಂಟಾಟ ನೋಡೋದೇ ಚೆಂದ. ಇದೀಗ ಇಲ್ಲೊಂದು ಕಡೆ ಬೆಕ್ಕು ಹಾಗೂ ಕರು ಫ್ರೆಂಡ್‌ಶಿಪ್ ನಡೆಸಿದೆ. ಇದ್ರ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಡಾರ್ಕ್ ಸರ್ಕಲ್ ನಿವಾರಿಸಲು ಮನೆಯಲ್ಲೇ ಇದೆ ಸಿಂಪಲ್ ಮದ್ದು! – ಅಡುಗೆ ಮನೆಯಲ್ಲಿರುವ ಈ ಸೌಂದರ್ಯವರ್ಧಕದ ಬಗ್ಗೆ ನಿಮಗೆ ಗೊತ್ತಾ?
ಮನೆಯಲ್ಲಿರುವ ಸಾಕು ಪ್ರಾಣಿಗಳು ಮನುಷ್ಯರೊಂದಿಗೆ ಅವಿನಾಭಾವ ಹೊಂದಿರುತ್ತವೆ. ಮನೆ ಯಜಮಾನನೊಂದಿಗೆ ಫ್ರೆಂಡ್‌ಶಿಪ್ ಬೆಳೆಸಿರುತ್ತವೆ. ಇನ್ನು ಮನುಷ್ಯರಷ್ಟೇ ಅಲ್ಲ, ಈ ಪ್ರಾಣಿಗಳು ಕೂಡ ಸ್ನೇಹ ಬೆಳೆಸಿಕೊಳ್ಳುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಹೌದು, ಕರು ಹಾಗೂ ಬೆಕ್ಕಿನ ಫ್ರೆಂಡ್ ಶಿಪ್ ಮಾಡಿದೆ. ಈ ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೆರ್ಡರ್ ಹೋಪ್ ಸ್ಟೇಡ್ (herderhopestead) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಕರು ಹಾಗೂ ಬೆಕ್ಕಿನ ಫ್ರೆಂಡ್ ಶಿಪ್ ನೋಡಬಹುದು. ಕರುವಿನ ಪಕ್ಕ ಬೆಕ್ಕು ಮಲಗಿದೆ. ತನ್ನ ಪಕ್ಕ ಮಲಗಿದ ಬೆಕ್ಕನ್ನು ಕರು ಕೂಡ ಮುದ್ದಾಡುತ್ತಿದೆ. ನಾನು ನಿನ್ನನ್ನ ಬಿಟ್ಟಿರಲ್ಲ. ನನ್ನ ಬಳಿಯೇ ಇರು ಎಂಬಂತಿದೆ ಈ ದೃಶ್ಯ. ಸದ್ಯ ಈ ವಿಡಿಯೋ ನೆಟ್ಟಿಗರ ಮನಗೆದ್ದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಇವರಿಬ್ಬರೂ ಬೆಸ್ಟ್ ಫ್ರೆಂಡ್ ಎಂದೆನಿಸುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಕ್ಯೂಟ್ ಪಾರ್ಟ್ನರ್ಸ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ತುಂಬಾನೇ ಮುದ್ದಾಗಿವೆ ಎಂದು ಕಾಮೆಂಟ್ ಮಾಡಿದ್ದಾರೆ.

ನೋಡಿರಿ

