ಮದುವೆ ಮಂಟಪದಲ್ಲಿ ಆಟದಲ್ಲಿ ಸೋತ ಸಿಟ್ಟು – ವಧುವಿಗೆ ಬಿತ್ತು ವರನಿಂದ ಏಟು..!
ಮದುವೆ ಅನ್ನೋದು ಸುಂದರ ಸಂಬಂಧ. ಮದುವೆ ಸಮಾರಂಭ ಅಂದರೆ ಬರೀ ಸಂಭ್ರಮ.. ಸಂಬಂಧಿಗಳ ಓಡಾಟ, ನಗು, ಹೊಟ್ಟೆತುಂಬಾ ಊಟ. ಆದರೆ, ಕೆಲವೊಂದು ಕಡೆ ಮದುವೆ ದಿನವೇ ಕೆಲವೊಂದು ಎಡವಟ್ಟು ಆಗುವುದು ಕೂಡಾ ಇದೆ. ಹೀಗೇ ಇಲ್ಲೂ ಒಂದು ಎಡವಟ್ಟು ಮದುವೆ ದಿನವೇ ಆಗಿದೆ. ಗಂಡನ ಜೊತೆ ನಗುತಾ ನಗುತಾ ನಿಂತಿದ್ದ ವಧುವಿಗೆ ಸ್ವತಃ ಗಂಡನೇ ಶಾಕ್ ನೀಡಿದ್ದಾನೆ.
ಇದನ್ನೂ ಓದಿ: ನೀ ಇರಲು ಜೊತೆಯಲ್ಲಿ ನಾ ಮಲಗುವೆ ನೆಮ್ಮದಿಯಲ್ಲಿ – ಆನೆ ಮರಿಯ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವೇ?
ಇಲ್ಲೊಂದು ವೀಡಿಯೋ ವೈರಲ್ ಆಗಿದೆ. ಉಜ್ಭೇಕಿಸ್ತಾನದಲ್ಲಿ ನಡೆದ ಘಟನೆಯಿದು. ಇಲ್ಲಿ ಮದುವೆ ಮಂಟಪದಲ್ಲಿ ವರ ಮತ್ತು ವಧು ಇದ್ದಾರೆ. ಮದುಮಕ್ಕಳಿಗೆ ಸಂಬಂಧಿಕರು ಒಂದು ಆಟವನ್ನು ಆಡಿಸಿದ್ದಾರೆ. ಇದರಲ್ಲಿ ವಧು ಆಟವನ್ನು ಬೇಗ ಆಡಿ ಮುಗಿಸುತ್ತಾಳೆ, ಪತಿ ಮಹಾಶಯ ತಡವಾಗಿ ಆಟವನ್ನು ಮುಗಿಸುತ್ತಾನೆ. ಪತ್ನಿ ಬೇಗ ಆಟ ಮುಗಿಸಿ ಗೆದ್ದಳು ಅನ್ನೋದನ್ನು ಸಹಿಸಿಕೊಳ್ಳಲು ವರನಿಗೆ ಸಾಧ್ಯವಾಗಲಿಲ್ಲ. ತಾನು ಸೋತೆ ಎನ್ನುವ ಕೋಪಕ್ಕೆ ಎಲ್ಲಾ ನೆಂಟರಿಷ್ಟರೆದುರು ವೇದಿಕೆಯಲ್ಲೇ ಆಕೆಯ ತಲೆಗೆ ಸರಿಯಾಗಿಯೇ ಬಾರಿಸುತ್ತಾನೆ.
In Uzbekistan, groom hit the bride right at the wedding in front if guests, relatives, families from both sides. Noone stopped him, noone to defend her.
Footage shows the couple participated in game, after which he hit her.
We need an @WomanTreaty urgently pic.twitter.com/rgjtc4qM2W— Leila Nazgul Seiitbek💙💛🇰🇬🌻 (@l_seiitbek) June 12, 2022
ಆ ಒಂದು ಕ್ಷಣ ವಧು ಆಘಾತದಿಂದ ನಿಲ್ಲುತ್ತಾಳೆ. ವಿಪರ್ಯಾಸವೆಂದರೆ, ವರ ಮಾಡಿದ್ದನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ. ವಧುವಿನ ಸಹಾಯಕ್ಕೂ ಯಾರೂ ಬರುವುದಿಲ್ಲ. ಮದುವೆ ಮಂಟಪದಲ್ಲಿ ಪತ್ನಿಗೆ ಹೊಡೆದ ಭೂಪ ತಾನೂ ಏನೂ ಮಾಡಿಯೇ ಇಲ್ಲ ಎಂಬಂತೆ ನಿಂತುಕೊಳ್ತಾನೆ. ಕೊನೆಗೂ ವೇದಿಕೆಯಿಂದ ವಧುವನ್ನು ಮಹಿಳೆಯೊಬ್ಬರು ಕೆಳಗೆ ಕರೆದುಕೊಂಡು ಹೋಗುತ್ತಾರೆ.