ಮದುವೆಯಲ್ಲಿ ಹುಚ್ಚೆದ್ದು ಕುಣಿದ್ರು! – ಮಂಟಪದಿಂದಲೇ ನವದಂಪತಿ ಸೇರಿ 37 ಅತಿಥಿಗಳು ಆಸ್ಪತ್ರೆಗೆ ದಾಖಲಾದ್ರು!

ಮದುವೆ ಮನೆ ಅಂದಾಗ ಅಲ್ಲಿ ಡಿಜೆ, ಡ್ಯಾನ್ಸ್ ಇದ್ದೇ ಇರುತ್ತೆ. ಮದುವೆ ಬಂದವರೆಲ್ಲಾ ಹುಚ್ಚೆದ್ದು ಕುಣಿದು ಕುಪ್ಪಳಿಸುತ್ತಾರೆ. ಆದ್ರೆ, ಇದೀಗ ಇಲ್ಲೊಂದು ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಹಾಲ್‌ನಲ್ಲಿ ಮನಬಂದಂತೆ ಡ್ಯಾನ್ಸ್ ಮಾಡಿ, ಮದುವೆ ಮಂಟಪದಿಂದಲೇ ನವದಂಪತಿಗಳು ಸೇರಿ 37 ಅತಿಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಕ್ಕೆ ಸಂಬಂಧಿಸಿ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಕೊಲೆ ಮಾಡಲೇಬೇಕು ಎಂದು ಗುಂಡಿ ತೋಡಿ ಇಟ್ಟಿದ್ದ ಪಾತಕಿ – ಶಿಕ್ಷಕಿಯನ್ನು ಕ್ರೂರವಾಗಿ ಕೊಂದವನು ಹೇಳಿದ್ದೇನು?
ಅಷ್ಟಕ್ಕೂ ಆಗಿದ್ದೇನು?
ಈ ಘಟನೆ ಇಟಲಿಯಲ್ಲಿ ನಡೆದಿದೆ. ಪಾವೊಲೊ ಮುಗ್ನೈನಿ ಮತ್ತು ವಲೇರಿಯಾ ಯಬಾರಾ ಎಂಬುವವರು ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಟಲಿಯ ಪಿಸ್ಟೋಯಾದಲ್ಲಿನ ಕಾನ್ವೆಂಟ್‌ನಲ್ಲಿ ಮದುವೆಯಾಗಿದ್ದಾರೆ. ತಮ್ಮ ವಿವಾಹ ಸಮಾರಂಭಕ್ಕೆ ಸುಮಾರು 150 ಜನರನ್ನು ಆಹ್ವಾನಿಸಿದರು. ಮದುವೆಯ ರಾತ್ರಿ ಡ್ಯಾನ್ಸ್ ಮಾಡುತ್ತಿರುವಾಗ ಡ್ಯಾನ್ಸ್ ಫ್ಲೋರ್ ಕುಸಿದ ಪರಿಣಾಮ ವಧು, ವರ ಸೇರಿ 37 ಮಂದಿ ಅತಿಥಿಗಳು 25 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆ ದಾಖಲಿಸಲಾಗಿದ್ದು, ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ವರದಿಗಳ ಪ್ರಕಾರ, ಆರು ಜನರಿಗೆ ತೀವ್ರ ಗಾಯಗಳಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲಾ ಗಾಯಾಳುಗಳನ್ನು ತಕ್ಷಣವೇ ಇಟಲಿಯ ಪಿಸ್ಟೋಯಾದಲ್ಲಿರುವ ಸ್ಯಾನ್ ಜಾಕೋಪೋ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಪ್ರಸ್ತುತ ಚಿಕಿತ್ಸೆ ನೀಡಲಾಗುತ್ತಿದೆ.
ನವವಿವಾಹಿತರ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಇದರಲ್ಲಿ ಪಾವೊಲೊ ಮತ್ತು ವಲೇರಿಯಾ ಪ್ರತ್ಯೇಕ ಆಸ್ಪತ್ರೆಯ ಬೆಡ್‌ಗಳಲ್ಲಿ ಅಕ್ಕಪಕ್ಕದಲ್ಲಿ ಡ್ರಿಪ್ಸ್ ಹಾಕಿ ಮಲಗಿರುವುದನ್ನು ಕಾಣಬಹುದು. ದುರಂತ ಘಟನೆಯ ಬಗ್ಗೆ ತ್ವರಿತ ಕ್ರಮ ಕೈಗೊಂಡು, ದಂಪತಿಗಳು ಮದುವೆ ಹಾಲ್ನ ಸಂಬಂಧಪಟ್ಟವರ ವಿರುದ್ಧ ದೂರು ದಾಖಲಿಸಿದ್ದಾರೆ ಮತ್ತು ಪ್ರಕರಣವನ್ನು ಪರಿಶೀಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.