ಕಾವೇರಿ ನದಿಯಲ್ಲಿ ಕಾಲು ಜಾರಿ ಬಿದ್ದ ವ್ಯಕ್ತಿ – ಮುಳುಗುತ್ತಿದ್ದವನನ್ನು ಬಕೆಟ್ ಹಿಡಿದು ರಕ್ಷಿಸಿದ ಧೈರ್ಯವಂತ

ಬದುಕುವ ಅದೃಷ್ಟ ಇದ್ದರೆ ನೀರಲ್ಲಿ ಮುಳುಗುತ್ತಿದ್ದವರು ಬದುಕುತ್ತಾರೆ ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಇದೆ. ಇಲ್ಲೊಬ್ಬರು ಕಾವೇರಿ ನದಿಯಲ್ಲಿ ಮುಳುಗುತ್ತಿದ್ದರು. ಇನ್ನೇನು ಉಸಿರು ನಿಲ್ಲುವ ಭಯ. ಆಗಲೇ ನೋಡಿ ಒಬ್ಬ ಆಪತ್ಭಾಂಧವನ ಎಂಟ್ರಿ. ನಂತರ ನಡೆದಿದ್ದು ರೋಚಕ ಘಟನೆ.
ಇದನ್ನೂ ಓದಿ:ಬೆಂಗಳೂರಲ್ಲಿ ಗಾಳಿಯ ಗುಣಮಟ್ಟ ಕಳಪೆ – ಉಡುಪಿ, ಮಂಗಳೂರಲ್ಲಿ ಆರಾಮಾಗಿ ಉಸಿರಾಡಬಹುದು
ಮೈಸೂರು ಜಿಲ್ಲೆಯ ಕೆ.ಅರ್ ನಗರ ತಾಲೂಕಿನ ಕಪ್ಪಡಿ ದೇವಸ್ಥಾನದ ಬಳಿಯಲ್ಲಿರುವ ಕಾವೇರಿ ನದಿಗೆ ಅರಸನ ಕೊಪ್ಪಲು ಗ್ರಾಮದ ಮಂಜು ಎನ್ನುವವರು ಸ್ನಾನ ಮಾಡುವುದಕ್ಕೆ ತೆರಳಿದ್ದರು. ನದಿಯಲ್ಲಿ ಸ್ನಾನ ಮಾಡುವ ಸಮಯದಲ್ಲಿ ಕಾಲುಜಾರಿ ಬಿದ್ದರು. ನಂತರ ಮಂಜು ನದಿಯ ನೀರಿನಿಂದ ಮೇಲೆ ಬರುವುದಕ್ಕೆ ಆಗದೇ ನೀರಿನಲ್ಲಿ ಮುಳುಗುತ್ತಿದ್ದರು. ನೀರಿನಲ್ಲಿ ಮುಳಗುತ್ತಿದ್ದ ಮಂಜುವನ್ನು ನೋಡಿದ ಹೆಬ್ಬಾಳು ಗ್ರಾಮದ ಮಧು ಎನ್ನುವವರು ಹಿಂದೆ ಮುಂದೆ ನೋಡದೆ ರಕ್ಷಣೆ ಮಾಡುವುದಕ್ಕೆ ಮುಂದಾಗಿದ್ದಾರೆ. ಕೈಯಲ್ಲಿ ಎರಡು ಖಾಲಿ ಪ್ಲಾಸಿಕ್ ಬಕೆಟ್ ಗಳನ್ನು ಎತ್ತಿಕೊಂಡು ಒಂದನ್ನು ಮಂಜು ಕೈಗೆ ನೀಡಿ ಪ್ಲಾಸಿಕ್ ಬಕೆಟ್ ನ ಸಹಾಯದಿಂದ ಮಂಜುವನ್ನು ನೀರಿನಿಂದ ಮೇಲಕ್ಕೆ ಎತ್ತಿದ್ದಾರೆ.
ಮಂಜು ಸುರಕ್ಷಿತವಾಗಿ ದಡ ಸೇರಿದರು. ಮಧು ಅವರು ತನ್ನ ಪ್ರಾಣವನ್ನು ಲೆಕ್ಕಿಸದೇ ಮಂಜುವನ್ನು ಕಾಪಾಡಿದ್ದಾರೆ. ಅದು ಕೂಡಾ ಆ ಕ್ಷಣದಲ್ಲಿ ಬುದ್ಧಿವಂತಿಕೆ ತೋರಿ ಪ್ಲಾಸ್ಟಿಕ್ ಬಕೆಟ್ ಹಿಡಿದು ರಕ್ಷಣೆಗಿಳಿದಿದ್ದರು. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ನೋಡಿರಿ

