ಶಾಲೆಯ ರೇಸ್​​ನಲ್ಲಿ ಓಡುತ್ತಿದ್ದ ಬಾಲಕ ಹೃದಯಸ್ತಂಭನದಿಂದ ಸಾವು!

ಶಾಲೆಯ ರೇಸ್​​ನಲ್ಲಿ ಓಡುತ್ತಿದ್ದ ಬಾಲಕ ಹೃದಯಸ್ತಂಭನದಿಂದ ಸಾವು!

ಕಳೆದ ಮೂರ್ನಾಲ್ಕು ವರ್ಷಗಳಿಂದ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಿದೆ. ಸೆಲೆಬ್ರಿಟಿಗಳು, ಸಿನಿಮಾ ನಟರು, ವೈದ್ಯರು ಕೂಡ ಹೃದಯಾಘಾತದಿಂದ ಮರಣ ಹೊಂದುತ್ತಿದ್ದಾರೆ. ಹೃದಯಾಘಾತ ಮಕ್ಕಳನ್ನೂ ಕೂಡ ಬಿಟ್ಟಿಲ್ಲ. ಕಳೆದ ಒಂದು ವರ್ಷದಿಂದ ಮಕ್ಕಳು ಕೂಡ ಹೃದಯಘಾತಕ್ಕೆ ಬಲಿಯಾಗುತ್ತಿದ್ದಾರೆ. ಇದೀಗ 14 ವರ್ಷದ ಬಾಲಕನೊಬ್ಬ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾನೆ.

ಈ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.  14 ವರ್ಷದ ಬಾಲಕನೊಬ್ಬ ಶಾಲೆಯ ರೇಸ್​​ನಲ್ಲಿ ಭಾಗವಹಿಸಿದ್ದ ವೇಳೆ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾನೆ. ಮೃತ ಬಾಲಕನ್ನು ನಾಕ್ಸ್ ಮ್ಯಾಕ್ ವೆನ್‌ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಹಲ್ಲು ನೋವೆಂದು ರೂಟ್‌ ಕೆನಾಲ್‌ ಮಾಡಿದ್ರು! – ವೈದ್ಯನ ನಿರ್ಲಕ್ಷ್ಯಕ್ಕೆ 4 ವರ್ಷದ ಬಾಲಕ ಸಾವು!

ಮೃತ ಬಾಲಕ ಡೇವಿಸ್ ವೆಸ್ಟರ್ನ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದ. ಶಾಲೆಯಲ್ಲಿ ಜೂನಿಯರ್ ರಿಸರ್ವ್ ಆಫೀಸರ್ಸ್ ಟ್ರೈನಿಂಗ್ ಕಾರ್ಪ್ಸ್ ಡ್ರಿಲ್‌ ಅನ್ನು ಆಯೋಜಿಸಲಾಗಿತ್ತುಇದರಲ್ಲಿ 5ಕೆ ರೇಸ್ ನಲ್ಲಿ ಭಾಗವಹಿಸುವಾಗ ನಾಕ್ಸ್ ಮ್ಯಾಕ್ ವೆನ್  ಹೃದಯಸ್ತಂಭನದಿಂದ ಕುಸಿದು ಬಿದ್ದಿದ್ದಾನೆ. ತಕ್ಷಣ ಶಾಲೆಗೆ ಬಂದ ತುರ್ತು ತಂಡ ಬಾಲಕನನ್ನು ರಕ್ಷಿಸಲು ಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಬಾಲಕ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಬಾಲಕನ ಸಾವಿಗೆ ಶಾಲಾ ಮುಖ್ಯಸ್ಥರು ಸಂತಾಪ ಸೂಚಿಸಿದ್ದಾರೆ.  ಬಾಲಕನ ತಾಯಿ ಜೂಲಿ ಕಳೆದ ವರ್ಷ ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದು, ಇದೀಗ ಮಗ ಹೃದಯಾಘಾತದಿಂದ ಸಾವನ್ನಪ್ಪಿರುವುದು ಎಲ್ಲರ ಹೃದಯವನ್ನು ಕದಡುತ್ತಿದೆ.

ಕೆಲವು ತಿಂಗಳ ಹಿಂದೆ, ಅಮೆರಿಕದಲ್ಲಿ 17 ವರ್ಷದ ಬಾಸ್ಕೆಟ್‌ಬಾಲ್ ಆಟಗಾರನೊಬ್ಬ ತನ್ನ ತಂಡದೊಂದಿಗೆ ವರ್ಕ್‌ಔಟ್ ಸೆಷನ್‌ನಲ್ಲಿ ಭಾಗವಹಿಸುತ್ತಿದ್ದಾಗ ಕುಸಿದು ಬಿದ್ದ. ಮತ್ತು ಜಿಮ್‌ಗಳಲ್ಲಿ ವ್ಯಾಯಾಮ ಮಾಡುವಾಗ ಅನೇಕ ಜನರು ಹೃದಯಾಘಾತದಿಂದ ಸಾವನ್ನಪ್ಪಿದ ಅನೇಕ ಘಟನೆಗಳಿವೆ.

Shwetha M