ಇದು ಜಗತ್ತಿನ ಏಕೈಕ ನೀಲಿ ನಗರ! ಪ್ರತಿ ಮನೆಯೂ ರಂಗಿನ ಬಣ್ಣ
ಭಾರತದಲ್ಲಿರೋ ಈ ಸಿಟಿ ಎಲ್ಲಿದೆ?
ರಾಜಸ್ತಾನದ ಜೋಧಪುರ ಎಂಬ ಊರಿನ ಬಗ್ಗೆ ಕೇಳಿದ್ದೀರಾ?. ಕೇಳಿಲ್ಲ ಅಂದ್ರೆ ನೀವು ಭರಾಟೆ ಸಿನಿಮಾ ನೋಡಿದ್ರೆ ಗೊತ್ತಾಗುತ್ತೆ.. ಒಂದು ಸಾಂಗ್ನಲ್ಲಿ ಒಂದೇ ಬಣ್ಣವನ್ನು ಊರಿನ ಎಲ್ಲಾ ಮನೆಗಳಿಗೆ ಬಳಿದಿರುವನ್ನ ನೋಡಿ ಇರ್ತಿರಾ.. ಅದು ಸಿನಿಮಾಗಾಗಿ ಆ ರೀತಿ ಸೆಟ್ ಹಾಕಿದ್ದು ಅಲ್ಲ.. ಅಲ್ಲಿರೋದು ಎಲ್ಲಾ ರಿಯಲ್ ಮನೆಗಳೇ..ಹೌದು ರಾಜಸ್ಥಾನದಲ್ಲಿ ಕೆಲವೊಂದು ನಗರಗಳನ್ನು ಅಲ್ಲಿನ ವಿಶೇಷತೆಯನ್ನು ಆಧರಿಸಿಕೊಂಡು ಗುರತಿಸಲಾಗುತ್ತದೆ. ಉದಾಹರಣೆಗೆ ಜೈಪುರವನ್ನು ಪಿಂಕ್ ಸಿಟಿ ಎಂದು, ಜೈಸರ್ ಅನ್ನು ಚಿನ್ನದ ನಗರ ಹಾಗೆಯೇ ಉದಯಪುರವನ್ನು ಬಿಳಿ ನಗರ ಎಂದು ಗುರುತಿಸುತ್ತಾರೆ. ಈ ನಗರಗಳಂತೆಯೇ ಜೋಧಪುರ ನಗರವೂ ಒಂದು. ಜೈಪುರದ ಪಿಂಕ್ ಸಿಟಿಯಂತೆ ಈ ಊರಿನ ಪ್ರತಿಯೊಂದು ಕಟ್ಟಡವೂ ನೀಲಿಮಯ. ಜೋಧಪುರ ನಗರವು ರಾಜಸ್ಥಾನದ ಪ್ರಮುಖ ನಗರಗಳಲ್ಲೊಂದಾಗಿದೆ. ಇಲ್ಲಿನ ಕಟ್ಟಡಗಳಿಗೆ ಬಳಿದ ನೀಲಿ ಬಣ್ಣದಿಂದಾಗಿಯೇ ಪ್ರಸಿದ್ದಿ ಹೊಂದಿದ ಈ ನಗರಕ್ಕೆ ದೇಶ ವಿದೇಶಗಳಿಂದ ಪ್ರವಾಸಿಗರ ಹಿಂಡೇ ಬರುತ್ತೆ.
ಬ್ಲೂ ಸಿಟಿ ಎಂದು ಕರೆಯಲ್ಪಡುವ ಈ ನಗರವು ಸುಮಾರು 650 ವರ್ಷಗಳ ಹಿಂದೆಯೇ ಸೃಷ್ಟಿಯಾಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. 1459 ರಲ್ಲಿ ರಾಥೋಡ್ ವಂಶದ ರಾವ್ ಜೋಧಾ ರಜಪೂತ್ ಅವರು ಜೋಧಪುರದ ಬೆಟ್ಟದ ಮೇಲೆ ಭಾರತದ ಅತಿ ದೊಡ್ಡ ಕೋಟೆಗಳಲ್ಲೊಂದಾದ ಮೆಹ್ರಾನ್ ಗಡ್ ಕೋಟೆಯನ್ನು, ಈ ನಗರವನ್ನೂ ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಾದಂತೆ ತಗ್ಗು ಪ್ರದೇಶಗಳಲ್ಲಿಯೂ ಮನೆಗಳನ್ನು ನಿರ್ಮಿಸಲಾಯಿತು. ಮಧ್ಯಯುಗದಲ್ಲಿ ಈ ನಗರವನ್ನು ‘ಮಾರ್ವಾರ್’ ಎಂದೂ ಕರೆಯಲಾಗುತ್ತಿತ್ತು ಎಂದೂ ಹೇಳಲಾಗುತ್ತದೆ.
ನೀಲಿ ಬಣ್ಣ ಬಳಿಯಲು ಕಾರಣವೇನು?
ಜೋಧಪುರದ ಮನೆಗಳಿಗೆ ನೀಲಿ ಬಣ್ಣವನ್ನು ಬಳಿಯಲು ಕಾರಣವನ್ನು ಹುಡುಕಿದಾಗ ಅಲ್ಲಿ ಬಹಳಷ್ಟು ಕಾರಣಗಳು ದೊರೆಯುತ್ತದೆ. ಕೆಲವೊಂದು ನಂಬಬಹುದು ಎಂದೆನಿಸಿದರೆ ಇನ್ನೂ ಕೆಲವು ನಂಬಲು ಸೂಕ್ತವಾಗಿಲ್ಲವೆಂದೆನಿಸುತ್ತದೆ.
ಪುರೋಹಿತಶಾಹಿ ಸಮುದಾಯಗಳ ಗುರುತಿಸುವಿಕೆ
ಹಿಂದಿನ ಕಾಲದಲ್ಲಿ ಜಾತಿವ್ಯವಸ್ಥೆಯನ್ನು ಆಧರಿಸಿ ಮೇಲು ಕೀಳು ಎಂಬ ತಾರತಮ್ಯ ಮಾಡಲಾಗುತ್ತಿತ್ತು. ಹಾಗಾಗಿ ನಗರದ ಪುರೋಹಿತಶಾಹಿ ವರ್ಗದ ನಿವಾಸಿಗಳು ಇತರ ವರ್ಗದ ನಿವಾಸಿಗಳಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ನಗರದಲ್ಲಿ ಅವರವರ ಮನೆಗಳಿಗೆ ನೀಲಿ ಬಣ್ಣವನ್ನು ಬಳಿದರು ಅಂತ ಹೇಳಲಾಗುತ್ತೆ. ಆದ್ರೆ ಕಾರಣವು ನಂಬಲು ಕಷ್ಟ. ಯಾಕಂದ್ರೆ ಇತರ ವರ್ಗದ ಜನರಿಗೆ ಸೇರಿದ ಮನೆಗಳೂ ಕೂಡ ನೀಲಿ ಬಣ್ಣದಿಂದ ಕೂಡಿರುವುದು ಈ ಪ್ರದೇಶದಲ್ಲಿ ಕಂಡುಬರುತ್ತದೆ. ಆದರೆ ಇಲ್ಲಿ ನೆಲೆಸಿರುವ ಹೆಚ್ಚಿನವರ ಮನೆಗಳು ಪುರೋಹಿತಶಾಹಿ ಸಮೂದಾಯಕ್ಕೆ ಸೇರಿದೆ.
ಗೆದ್ದಲು ಸಮಸ್ಯೆ ನಿವಾರಣೆಗಾಗಿ
ಈ ಪ್ರದೇಶದಲ್ಲಿ ನೆಲೆಸುವವರಿಂದ ಕೇಳಲ್ಪಡುವ ಮತ್ತೊಂದು ಕಾರಣವೆಂದರೆ ಹಿಂದಿನ ಕಾಲದಲ್ಲಿ ಅತಿಯಾದ ಗೆದ್ದಲು ಸಮಸ್ಯೆಗಳಿತ್ತುಪ. ಗೆದ್ದಲುಗಳು ಗೋಡೆಯನ್ನೇರಿ ಗೋಡೆಗಳ ಜೊತೆಗೆ ಮನೆಗಳನ್ನು ಹಾಳು ಮಾಡುತ್ತಿದ್ದವು. ಇಂತಹ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ಇಂಡಿಗೋ, ಕಾಪರ್ ಸಲ್ವೇಟ್ ಮತ್ತು ಇತರ ಕೆಲವು ರಾಸಾಯನಿಕಗಳನ್ನು ಬಳಸಿ ಮನೆಗಳಿಗೆ ಬಣ್ಣ ಬಳೆಯುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಿದರು. ಹಾಗಾಗಿ ಇದೇ ಈಗ ಸಂಪ್ರದಾಯವಾಗಿ ಮೂಡಿ ಬಂದಿದೆ ಎನ್ನುವ ಮಾತಿದೆ.
Full Gfx: ಸೂರ್ಯನ ಅತಿಯಾದ ಶಾಖದಿಂದ ತಪ್ಪಿಸಿಕೊಳ್ಳಲು
ರಾಜಸ್ಥಾನದಲ್ಲಿ ಬಿಸಿಲಿಗೇನು ಬರ ಇಲ್ಲ. ಅಗತ್ಯಕ್ಕಿಂತ ಅಧಿಕವಾಗಿಯೇ ಸುಡುತ್ತದೆ. ಅಲ್ಲಿನ ಸುಡುವ ಬಿಸಿಲಿಗೆ ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಮನೆಗಳಿಗೆ ನೀಲಿ ಬಣ್ಣವನ್ನು ಬಳಿಯಲಾಗುತ್ತಂತೆ. ನೀಲಿ ಬಣ್ಣವು ಬಿಸಿಲಿನ ತಾಪವನ್ನು ಕಡಿಮೆ ಮಾಡುತ್ತದೆ, ಜೊತೆಗೆ ಬಿಸಿಲಿನ ಉರಿಯನ್ನು ತಣಿಸಲು ಸಹಾಯ ಮಾಡುತ್ತದೆ ಎನ್ನುವುದು ಅಲ್ಲಿನ ಹೆಚ್ಚಿನ ನಿವಾಸಿಗಳ ಅಭಿಪ್ರಾಯ. ಆದುದರಿಂದಲೇ ಅವರ ಹಿರಿಯರು ಇಲ್ಲಿ ನೀಲಿ ಬಣ್ಣವನ್ನು ಬಳಿಯುತ್ತಿದ್ದರು ಎಂದೂ ಅದೇ ಈಗ ಸಂಪ್ರದಾಯವಾಗಿ ಮುಂದುವರದಿದೆ ಎಂದು ಅಲ್ಲಿಯವರ ಮಾತು. ಆದರೆ ಇದೇ ಸತ್ಯ ಕಾರಣವಾಗಿದ್ದರೆ ರಾಜಸ್ಥಾನದಲ್ಲಿ ಬಿಸಿಲ ಶಾಖ ಅಧಿಕವಾಗಿರುವ ಇತರ ನಗರಗಳು ಈ ಪ್ಲ್ಯಾನ್ ಯಾಕೆ ಅಳವಡಿಸಿಕೊಳ್ಳಲಿಲ್ಲ? ಅದೂ ಅಲ್ಲದೆ ಈ ನೀಲಿ ನಗರದಲ್ಲಿನ ಮನೆಗಳ ಕೆಲವು ಭಾಗಗಳಿಗೆ ಮಾತ್ರ ಯಾಕೆ ನೀಲಿ ಬಣ್ಣವನ್ನು ಬಳಿಯಲಾಗುತ್ತದೆ? ಪೂರ್ತಿಯಾಗಿ ಯಾಕಿಲ್ಲಾ? ಎಂಬುದು ಕೆಲವರ ಪ್ರಶ್ನೆ. ಅದಕ್ಕೆ ಸರಿಯಾದ ಉತ್ತರ ಇನ್ನೂ ಸಿಕ್ಕಿಲ್ಲ. ಜೋಧಪುರವನ್ನು ನೀಲಿ ಬಣ್ಣದಿಂದ ಅಲಂಕರಿಸಿದುದು ಯಾವ ಕಾರಣಕ್ಕಾಗಿ ಎಂಬ ಪ್ರಶ್ನೆಗೆ ಉತ್ತರವಿಲ್ಲ.. ಆದ್ರೆ ಎಲ್ಲಾ ಮನೆಗಳಿಗೆ ನೀಲಿ ಬಣ್ಣ ಬಳಿದಿರೋವುದು ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತೆ ಮಾಡಿದೆ. ಜಗತ್ತಿನ ಏಕೈಕ ನೀಲಿ ನಗರವೆಂದು ಪ್ರಸಿದ್ಧಿ ಹೊಂದಿದೆ.