ಗುಲಾಬಿ ಎಂದರೆ ಕೇವಲ ಸೌಂದರ್ಯವಷ್ಟೇ ಅಲ್ಲ.. ಆರೋಗ್ಯಕ್ಕೂ ಉತ್ತಮ – ಹಲವು ಸಮಸ್ಯೆಗಳಿಗೆ ರಾಮಬಾಣ ರೋಸ್

ಗುಲಾಬಿ ಎಂದರೆ ಕೇವಲ ಸೌಂದರ್ಯವಷ್ಟೇ ಅಲ್ಲ.. ಆರೋಗ್ಯಕ್ಕೂ ಉತ್ತಮ – ಹಲವು ಸಮಸ್ಯೆಗಳಿಗೆ ರಾಮಬಾಣ ರೋಸ್

ಗುಲಾಬಿ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹೂಗಳ ರಾಣಿ ಅಂತಾನೇ ಕರೆಸಿಕೊಳ್ಳುವ ಗುಲಾಬಿಯನ್ನ ಪ್ರೀತಿ, ಸ್ನೇಹ ವ್ಯಕ್ತಪಡಿಸಲು ಬಳಸುತ್ತಾರೆ.  ಗುಲಾಬಿ ಹೂ ಹೂದೋಟದಲ್ಲಿ ಇದ್ದರೆ ಹೂದೋಟದ ಸೌಂದರ್ಯವೇ ಹೆಚ್ಚಾಗುತ್ತದೆ. ಸೌಂದರ್ಯಕ್ಕಾಗಿ ಗುಲಾಬಿಯನ್ನು ಮುಡಿಗೆ ಇಟ್ಟುಕೊಳ್ಳುವ ಜನರು ಇದನ್ನು ಹಲವಾರು ರೀತಿಯ ಸೌಂದರ್ಯವರ್ಧಕವಾಗಿಯೂ ಬಳಕೆ ಮಾಡಿಕೊಂಡು ಬಂದಿರುವರು. ಗುಲಾಬಿ ಎಸಳುಗಳನ್ನು ಬಳಸಿಕೊಂಡು ಹಲವಾರು ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು.

ಗುಲಾಬಿ ಕೇವಲ ಸೌಂದರ್ಯದ ಸಂಕೇತವಾಗಿಲ್ಲ. ಹಲವು ಉಪಯೋಗಗಳೂ ಇವೆ. ಮುಖ್ಯವಾಗಿ ಇದು ಲೈಂಗಿಕ ಜೀವನ ಸುಧಾರಿಸುವುದು, ಒತ್ತಡ ತಗ್ಗಿಸುವುದು ಮತ್ತು ತೂಕ ಇಳಿಸಲು ಕೂಡ ಸಹಕಾರಿ ಆಗಿದೆ. ಗುಲಾಬಿಯು ಚಯಾಪಚಯ ವೃದ್ಧಿಸುವುದು ಹಾಗೂ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವುದು. ಇದರಿಂದ ತೂಕ ಇಳಿಸಲು ತುಂಬಾ ಸಹಕಾರಿ ಆಗಿರುವುದು. ಗುಲಾಬಿ ಎಸಳುಗಳನ್ನು ತಿಂದರೆ ಅದರಿಂದ ಹೊಟ್ಟೆಯು ತುಂಬಿದಂತೆ ಆಗುವುದು ಮತ್ತು ನೈಸರ್ಗಿಕವಾಗಿ ತೂಕ ಇಳಿಸಲು ಇದು ಸಹಕಾರಿ. ಇದು ಪ್ರೀತಿಯ ಸಂಕೇತ ಮಾತ್ರವಲ್ಲದೆ, ಇದು ನೈಸರ್ಗಿಕ ಕಾಮೋತ್ತೇಜಕವಾಗಿ ಕೆಲಸ ಮಾಡುವುದು. ಗುಲಾಬಿ ಎಸಳುಗಳನ್ನು ಬಳಸಿದರೆ ಆಗ ಲೈಂಗಿಕ ಚಟುವಟಿಕೆಯು ಉತ್ತಮವಾಗುವುದು. ಆಯುರ್ವೇದದ ಪ್ರಕಾರ ಗುಲಾಬಿ ದೇಹದಲ್ಲಿ ಎರಡು ದೋಷಗಳಂತೆ ಕೆಲಸ ಮಾಡುವುದು, ಇದರಿಂದ ಹೃದಯ, ಮನಸ್ಸು ಮತ್ತು ನರ ವ್ಯವಸ್ಥೆಯು ಉತ್ತಮವಾಗುವುದು.

ಇನ್ನು ಗುಲಾಬಿ ಎಸಳುಗಳನ್ನ ಸೇವಿಸುವ ಮುನ್ನ ಸರಿಯಾಗಿ ತೊಳೆಯಿರಿ ಮತ್ತು ಪ್ರತಿನಿತ್ಯವೂ ಇದನ್ನು ಸೇವಿಸಿ. ಇದರಿಂದ ದೇಹಕ್ಕೆ ಶಕ್ತಿ ಹಾಗೂ ಉಲ್ಲಾಸ ಬರುವುದು. ಲೈಂಗಿಕವಾಗಿಯೂ ಇದರಿಂದ ಬಲ ಸಿಗುವುದು. ಗುಲಾಬಿಯು ದೇಹವನ್ನು ತಂಪುಗೊಳಿಸುವ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಾತ, ಪಿತ್ತ ಮತ್ತು ಕಫಗಳಿಗೆ ಗುಲಾಬಿಯಿಂದ ಅನೇಕ ಪ್ರಯೋಜನಗಳಿವೆ. ಗುಲಾಬಿ ಹೂವನ್ನು ಒಣಗಿಸಿ, ಸಂರಕ್ಷಿಸಿಟ್ಟುಕೊಂಡು ಕೂಡ ಬಳಸಬಹುದು. ಅಥವಾ ಅದನ್ನು ಜ್ಯೂಸ್ ಮಾಡಿ, ಭಟ್ಟಿ ಇಳಿಸಿ ಕೂಡ ಬಳಸಬಹುದು. ಗುಲಾಬಿ ಹೂವನ್ನು ಒಣಗಿಸಿ, ಸಂರಕ್ಷಿಸಿಟ್ಟುಕೊಂಡು ಕೂಡ ಬಳಸಬಹುದು. ಅಥವಾ ಅದನ್ನು ಜ್ಯೂಸ್ ಮಾಡಿ, ಭಟ್ಟಿ ಇಳಿಸಿ ಕೂಡ ಬಳಸಬಹುದು. ರೋಸ್ ವಾಟರ್ ಔಷಧಿಯಲ್ಲಿ ಮತ್ತು ಸೌಂದರ್ಯ ಪರಿಕರಗಳಲ್ಲಿ ಹೆಚ್ಚು ಬಳಕೆಯಾಗುತ್ತದೆ. ಆಯುರ್ವೇದದ ಪ್ರಕಾರ, ಗುಲಾಬಿ ನಮ್ಮ ದೇಹದ ಪಿತ್ತವನ್ನು ಸಮತೋಲನಗೊಳಿಸುತ್ತದೆ, ಭಾವನೆಗಳನ್ನು ನಿಯಂತ್ರಿಸುತ್ತದೆ. ಹೃದಯದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಇದು ಪಿತ್ತ ಮತ್ತು ವಾತ, ಮನಸ್ಸು, ಉಸಿರಾಟ, ಶ್ವಾಸಕೋಶ ಮತ್ತು ಗಂಟಲನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಗುಲಾಬಿ ಹೃದಯ ಮತ್ತು ಭಾವನೆಗಳನ್ನು ನಿಯಂತ್ರಿಸುತ್ತದೆ.

ಗುಲಾಬಿಯಿಂದ ನಮ್ಮ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ಹೀಗಿವೆ:

ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ.

ಕಣ್ಣುಗಳು ಮತ್ತು ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತದೆ.

ನೋಯುತ್ತಿರುವ ಗಂಟಲು ಮತ್ತು ಕೆಮ್ಮನ್ನು ಶಮನಗೊಳಿಸುತ್ತದೆ.

ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ.

ಜೀರ್ಣಾಂಗವನ್ನು ಸರಿಯಾಗಿಸುತ್ತದೆ.

ನರ, ಕೋಪ ಮತ್ತು ದುಃಖದ ಭಾವನೆಗಳನ್ನು ಶಮನಗೊಳಿಸುತ್ತದೆ.

ಮುಖದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.

ನೋವು ನಿವಾರಕವಾಗಿದೆ.

ನಂಜುನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ.

ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ನ್ಯೂರೋಪ್ರೊಟೆಕ್ಟಿವ್ ಗುಣಲಕ್ಷಣಗಳನ್ನು ಹೊಂದಿದೆ.

ಉತ್ಕರ್ಷಣ ನಿರೋಧಕ ಚಟುವಟಿಕೆಯನ್ನು ಹೊಂದಿದೆ.

ಹೀಗೆ ಗುಲಾಬಿ ಹೂ ಹಲವಾರು ಪ್ರಯೋಜನಗಳನ್ನ ಹೊಂದಿದೆ.

Shantha Kumari