ಜಗತ್ತಿನ ಅತಿದೊಡ್ಡ ಹೂವು ಯಾವುದು ಗೊತ್ತಾ? – 7 ದಿನಗಳ ಕಾಲ ಅರಳಿರುತ್ತದೆ ಈ ಬೃಹತ್ ಹೂ!
ಪ್ರಕೃತಿ ವೈಚಿತ್ರ್ಯವೇ ಹಾಗೇ. ಹುಡುಕಿದಷ್ಟೂ ಅಚ್ಚರಿಗಳು ಎದುರಾಗುತ್ತವೆ. ನಮಗೆ ಗೊತ್ತಿಲ್ಲದೇ ಇರುವ ಎಷ್ಟೋ ಸಂಗತಿಗಳು ನಿಸರ್ಗದಲ್ಲಿವೆ. ಅದ್ರಲ್ಲಿ ಜಗತ್ತಿನ ಅತಿದೊಡ್ಡ ಹೂ ಕೂಡ ಒಂದು. ಇಂಡೋನೇಷ್ಯಾದ ಕಾಡಿನಲ್ಲಿ ಅರಳುವ ಈ ಹೂ ಜಗತ್ತಿನಲ್ಲೇ ಅತಿದೊಡ್ಡ ಫ್ಲವರ್ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ : ಚಳಿ ಇದೆ ಅಂತಾ ಪದೇ ಪದೆ ಕಾಫಿ ಕುಡಿಯುವುದು ಡೇಂಜರ್?
ಜಗತ್ತಿನ ಅದೆಷ್ಟೋ ವಿಸ್ಮಯಗಳ ಬಗ್ಗೆ ನಮಗೆ ಗೊತ್ತೇ ಇರೋದಿಲ್ಲ. ಅದ್ರಲ್ಲಿ ಈ ಹೂ ಕೂಡ ಒಂದು. ಕೆಂಬಣ್ಣ, ಬೃಹತ್ ದಳ, ದಳಗಳ ಮೇಲೆ ಬಿಳಿ ಬಿಳಿಯ ಗುಳ್ಳೆಯ ರೀತಿಯ ಚುಕ್ಕಿಗಳು. ನೋಡಿದ ತಕ್ಷಣ ಸೆಳೆಯುವ ನೋಟ. ಇಂತಹ ಸುಂದರ ಹೂವು ಈಗ ಇಂಡೋನೇಷ್ಯಾದಲ್ಲಿ. ತನ್ನ ಬೃಹತ್ ರೂಪದಿಂದಲೇ ಈ ಹೂ ಈಗ ಎಲ್ಲರನ್ನೂ ಸೆಳೆಯುತ್ತಿದೆ. ಇಂಡೋನೇಷ್ಯಾದ ಪರಿಸರ ಸಂರಕ್ಷಣಾವಾದಿಗಳ ಪ್ರಕಾರ ಈ ಹೂ ವಿಶ್ವದ ಅತೀ ದೊಡ್ಡ ಹೂವೆಂದು ಪರಿಗಣಿಸಲಾಗಿದೆ. ಈ ಹೂವಿನ ಹೆಸರು ರಾಫ್ಲೆಸಿಯಾ ತುವಾನ್ ಮುಡೆ. ಅಗಾಧವಾದ ದಳಗಳನ್ನು ಹೊಂದಿರುವ ಈ ಹೂವು 3.6 ಅಡಿ ಅಂದರೆ 111 ಸೆಂಟಿಮೀಟರ್ ವ್ಯಾಸವನ್ನು ಹೊಂದಿದೆ.
ಪಶ್ಚಿಮ ಸುಮಾತ್ರದ ಕಾಡುಗಳನ್ನು ಹೆಚ್ಚಾಗಿ ಈ ಹೂವುಗಳು ಕಾಣಸಿಗುತ್ತವೆ. ಈ ಹೂವು ಮೊದಲು ಜನರ ಕಣ್ಣಿಗೆ ಬಿದ್ದದ್ದು 19ನೇ ಶತಮಾನದಲ್ಲಿ. ಆಗ ಬ್ರಿಟಿಷ್ ಅಧಿಕಾರಿ ಸರ್ ಸ್ಟ್ಯಾಮ್‌ಫೋರ್ಡ್ ರಾಫೆಲ್ಸ್ ಇಂಡೋನೇಷ್ಯಾದಲ್ಲಿ ಈ ಹೂವನ್ನು ಗುರುತಿಸಿದ್ದರು. ಹೀಗಾಗಿ, ಇದಕ್ಕೆ ರಾಫ್ಲೆಸಿಯಾ ಎಂದೇ ಹೆಸರಿಡಲಾಗಿದೆ. ಈ ಪ್ರಭೇದದ ಹೂವುಗಳು ಆಗ್ನೇಯ ಏಷ್ಯಾದ ಫಿಲಿಪೈನ್ಸ್ ಸೇರಿದಂತೆ ಹಲವು ದೇಶಗಳಲ್ಲೂ ಕಾಣಸಿಗುತ್ತದೆ. ಇಲ್ಲಿ 100 ಸೆಂಟಿಮೀಟರ್ ವ್ಯಾಸದ ಹೂವುಗಳು ಇಷ್ಟರವರೆಗೆ ದಾಖಲಾಗಿವೆ. ಈ ಹೂವುಗಳು ಒಟ್ಟು ಏಳು ದಿನಗಳ ಕಾಲ ಅರಳಿರುತ್ತವೆ.