ಫೋನ್ ನೋಡೋದ್ರಲ್ಲೂ ಒಂಥರಾ ಖುಷಿ ಇದೆ! – ಮೊಬೈಲ್ ನೋಡುತ್ತಾ ಮಾಲೀಕನ ಬೆನ್ನ ಮೇಲೆ ಒರಗಿದ ಮರಿಯಾನೆ

ಆನೆಮರಿಗಳ ಆಟ, ತುಂಟಾಟ, ಮುಗ್ಧತೆ ಎಲ್ಲವೂ ಚೆನ್ನ. ಆನೆ ಮರಿಗಳು ತಾಯಾನೆ, ಮಾವುತರ ಜೊತೆ ಆಟವಾಡುತ್ತಲೇ ಇರುತ್ತೆ. ಇದೀಗ ಇಲ್ಲೊಂದು ಕಡೆ ಆನೆಮರಿ ಮಾವುತನ ಜೊತೆ ಫೋನ್ ನೋಡುತ್ತಾ ಕುಳಿತಿದೆ. ಈ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಬಾಳೆಹಣ್ಣು ತಿನ್ನೋದು ಡೇಂಜರ್? – ಯಾವಾಗ ಹಣ್ಣು ತಿನ್ನಬಹುದು?
ಮರಿಯಾನೆಗಳು ಮಾಲೀಕನ ಜತೆಗೆ ಮಗುವಾಗುತ್ತವೆ. ನೀವು ಪುಟಾಣಿ ಆನೆಗಳು ಹಾಗೂ ಕೇರ್ ಟೇಕರ್‌ನ ಆಟ ತುಂಟಾದ ದೃಶ್ಯಗಳನ್ನು ನೋಡಿರುತ್ತೀರಿ. ಇದೀಗ ಕೇರ್ ಟೇಕರ್ ಜತೆಗೆ ಮರಿಯಾನೆ ಆಟ ಆಡಿದೆ. ಓಡೋಡಿ ಬಂದ ಮರಿಯಾನೆಯು ಮೊಬೈಲ್ ನೋಡುತ್ತಾ ಮಲಗಿದ್ದ ಮಾಲೀಕನ ಬೆನ್ನ ಮೇಲೆ ಮಲಗಿಕೊಂಡಿದೆ. ಈ ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ದೃಶ್ಯ ನೋಡಿ ಫುಲ್ ಫಿದಾ ಆಗಿದ್ದಾರೆ.
ವಿವಿನ್ ಚೆಂಪಕ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಕೇರ್ ಟೇಕರ್ ಮೊಬೈಲ್ ನೋಡುತ್ತಾ ಮಲಗಿದ್ದಾನೆ. ಓಡುತ್ತಾ ಬಂದ ಮರಿಯಾನೆ ಯುವಕ ಬೆನ್ನ ಮೇಲೆ ಒರಗಿಕೊಂಡು ತುಂಟಾಟ ಆಡಿರುವುದನ್ನು ಕಾಣಬಹುದು. ಈ ವಿಡಿಯೋ ಅಧಿಕ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕ್ಯೂಟ್ ಎಲಿಫೆಂಟ್ ಎಂದಿದ್ದಾರೆ. ಇನ್ನೊಬ್ಬರು, ಎಷ್ಟು ನೋಡಿದ್ರೂ ಸಾಲಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಎಷ್ಟು ಮುದ್ದಾಗಿದೆ ಈ ಪುಟಾಣಿ ಆನೆ ಎಂದು ಕಾಮೆಂಟ್ ಮಾಡಿದ್ದಾರೆ.

ನೋಡಿರಿ

