ದಿಢೀರನೇ ಮಾರ್ಗ ಬದಲಾಯಿಸಿದ ಆಟೋ ಚಾಲಕ – ಭಯದಲ್ಲಿ ಸಂಚರಿಸುತ್ತಿದ್ದ ರಿಕ್ಷಾದಿಂದ ಜಿಗಿದು ಕೈ ಮುರಿದುಕೊಂಡ ಮಹಿಳೆ!

 ದಿಢೀರನೇ ಮಾರ್ಗ ಬದಲಾಯಿಸಿದ ಆಟೋ ಚಾಲಕ – ಭಯದಲ್ಲಿ ಸಂಚರಿಸುತ್ತಿದ್ದ ರಿಕ್ಷಾದಿಂದ ಜಿಗಿದು ಕೈ ಮುರಿದುಕೊಂಡ ಮಹಿಳೆ!

ಬೆಂಗಳೂರು: ಮಹಿಳೆಯರು ಒಂಟಿಯಾಗಿ ಆಟೋಗಳಲ್ಲಿ ಸವಾರಿ ಮಾಡುವ ಮುನ್ನ ಎಚ್ಚರ. ನಗರಕ್ಕೆ ನಾವು ಹೊಸ ಜನ ಅಂತಾ ಗೊತ್ತಾದ್ರೆ ಕೆಲ ಆಟೋ ಚಾಲಕರು ತನ್ನ ದುಷ್ಟ ಬುದ್ದಿಯನ್ನು ತೋರಿಸುತ್ತಾರೆ. ಬೆಂಗಳೂರಿನಲ್ಲಿ ಕೇರಳದ ಯುವತಿಯೊಬ್ಬಳು ಆಟೋದಲ್ಲಿ ಸಂಚರಿಸುತ್ತಿದ್ದ ವೇಳೆ ಅವಘಡವೊಂದು ಸಂಭವಿಸಿದೆ. ಆಟೋ ಚಾಲಕ ಬೇರೆ ಮಾರ್ಗದಲ್ಲಿ ಹೋಗುತ್ತಿದ್ದ ಮಹಿಳೆ ಆಟೋದಿಂದ ಹಾರಿ ಬಚಾವ್‌ ಆಗಿದ್ದಾಳೆ.

ಈ ಘಟನೆ ಮಹದೇವಪುರ ಪೊಲೀಸ್ ವ್ಯಾಪ್ತಿಯ ಪೈ ಲೇಔಟ್‌ನಲ್ಲಿ ನಡೆದಿದೆ. ಕೇರಳ ಮೂಲದ ರೋಶಿನಿ ಎಂಬಾಕೆ ತನ್ನ ತಾಯಿ ನಗರದಲ್ಲಿ ಇರಲು ಬಯಸಿದ್ದರು. ಹೀಗಾಗಿ ಆಕೆ ಮನೆಯನ್ನು ಹುಡುಕುತ್ತಿದ್ದರು. ಅಂದು ಮಹದೇವಪುರದ ಮನೆಗಳನ್ನು ನೋಡಲು ಒಬ್ಬರನ್ನು ಭೇಟಿಯಾಗಬೇಕಿತ್ತು. ಹೀಗಾಗಿ ಆಕೆ ಆಟೋದಲ್ಲಿ ಮಹದೇವಪುರಕ್ಕೆ ತೆರಳಿದ್ದಾಳೆ. ಈ ವೇಳೆ ಆಟೋ ಚಾಲಕ ಬೇರೆ ಮಾರ್ಗದಲ್ಲಿ ತೆರಳಿದ್ದಾನೆ. ಇದನ್ನು ಗಮನಿಸಿದ ಆಕೆ ಆಟೋ ಚಾಲಕನಿಗೆ ತಿಳಿಸಿದ್ದಾರೆ. ಆದರೆ ಆಟೋ ಚಾಲಕ ಇನ್ನೂ ವೇಗವಾಗಿ ಆಟೋ ಓಡಿಸಿದ್ದಾನೆ. ಇದರಿಂದ ಭಯಗೊಂಡ ಆಕೆ ಆಟೋದಿಂದ ಹಾರಿದ್ದಾರೆ. ಪರಿಣಾಮ ಆಕೆಯ ಬಲಗೈ ಮುರಿದು ಹೋಗಿದೆ.

ಇದನ್ನೂ ಓದಿ: ಕಳ್ಳತನ ಮಾಡುವಾಗ 22 ವರ್ಷ.. ಅರೆಸ್ಟ್ ಆದಾಗ 80 ವರ್ಷ ವಯಸ್ಸು – ಎಮ್ಮೆ ಕಳ್ಳತನದ ಆರೋಪಿ 58 ವರ್ಷಗಳ ಬಳಿಕ ಬಂಧನ

ಈ ಬಗ್ಗೆ ಮಾತನಾಡಿದ ರೋಶಿನಿ, ಮ್ಯಾಪ್ ನಲ್ಲಿ, ಪ್ರಯಾಣದ ಸಮಯವು ಕೇವಲ ಒಂಬತ್ತು ನಿಮಿಷಗಳನ್ನು ತೋರಿಸುತ್ತಿತ್ತು. ಆದರೆ ಆಟೋ ಚಾಲಕ ಸುಮಾರು 15 ನಿಮಿಷಗಳ ಕಾಲ ಬೇರೆ ದಿಕ್ಕಿನಲ್ಲಿ ಸಂಚರಿಸಿದ್ದಾನೆ. ರಸ್ತೆಯಲ್ಲಿ ವಾಹನಗಳಾಗಲಿ, ಜನರಾಗಲಿ ಇರಲಿಲ್ಲ. ನಾನು ಆಟೋದಿಂದ ಜಿಗಿದ ನಂತರ, ಚಾಲಕ ವೇಗವಾಗಿ ಓಡಿಸಿದ್ದ. ಚಾಲಕ ಹಿಂದಿ ಮಾತನಾಡುತ್ತಿದ್ದನು ಎಂದು  ಆಕೆ ವಿವರಿಸಿದ್ದಾರೆ.

ಘಟನೆ ಸಂಬಂಧ ರೋಶಿನಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ದೂರಿನ ಮೇರೆಗೆ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಆದರೆ ಮೂಲಗಳ ಪ್ರಕಾರ ಆಟೋರಿಕ್ಷಾದ ನೋಂದಣಿ ಸಂಖ್ಯೆಯನ್ನು ಸರಿಯಾಗಿ ನೋಡಲಾಗಲಿಲ್ಲ. “ಚಾಲಕನನ್ನು ಇನ್ನೂ ಬಂಧಿಸಲಾಗಿಲ್ಲ. ಆಟೋ ಚಾಲಕನ ವಿರುದ್ಧ ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ  ಅಪಾಯವನ್ನುಂಟುಮಾಡುವ ಕೃತ್ಯದಿಂದ ನೋವುಂಟುಮಾಡುವ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

suddiyaana