‘ಏನು ಮಾಡಿದ್ರೂ ತಪ್ಪು.. ಹೆಜ್ಜೆ ಹೆಜ್ಜೆಗೂ ಹೆಣ್ಣನ್ನೇ ದೂಷಿಸುತ್ತಾರೆ’ – ಅಮೃತಧಾರೆಯ ಭೂಮಿಕಾ ಕಣ್ಣೀರಿಗೆ ಪ್ರೇಕ್ಷಕರು ಭಾವುಕ
ಖಾಸಗಿ ವಾಹಿನಿಗಳಲ್ಲಿ ಹತ್ತಾರು ಕಥಾ ಹಂದರವಿರುವ ಧಾರಾವಾಹಿಗಳು ಮೂಡಿಬರುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಧ್ಯವಯಸ್ಕರ ಮದುವೆ ಸ್ಟೋರಿ ಇರುವ ಸೀರಿಯಲ್ ಗಳೇ ಹೆಚ್ಚಾಗಿ ಮೂಡಿ ಬರುತ್ತಿವೆ. ಅದರಲ್ಲೂ ಈಗ ಜೀ ಕನ್ನಡದಲ್ಲಿ ಅಮೃತಧಾರೆ ಧಾರಾವಾಹಿ ಶುರುವಾಗಿದ್ದು ಕೆಲವೇ ದಿನಗಳಲ್ಲಿ ಸಾಕಷ್ಟು ಜನಮನ್ನಣೆ ಪಡೆದಿದೆ. ಇದೀಗ ಮದುವೆ ವಿಚಾರವಾಗಿ ಭೂಮಿಕಾ ಹೇಳಿರುವ ಮಾತು ಹೆಣ್ಮಕ್ಕಳ ಮನ ಗೆದ್ದಿದೆ.
ಇದನ್ನೂ ಓದಿ : ‘ಧೂಮಂ’ ಸಿನಿಮಾ ರಿಲೀಸ್ – ಸಿಗರೇಟ್ ಸೇದುವ ಪ್ರತಿ ವ್ಯಕ್ತಿಗೂ ಕನೆಕ್ಟ್ ಆಗುತ್ತಿದೆ ಈ ಸಿನಿಮಾ..!
ಮದುವೆ ಆಗದೇ ಇರುವ ಹೆಣ್ಣನ್ನು ಅನೇಕರು ದೂಷಿಸುತ್ತಾರೆ. ಆ ರೀತಿ ದೂಷಿಸಬಾರದು ಎಂಬ ಥೀಮ್ ಇಟ್ಟುಕೊಂಡು ‘ಅಮೃತಧಾರೆ’ ಎಪಿಸೋಡ್ ಮೂಡಿಬಂದಿತ್ತು. ಇದಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಜೂನ್ 23ರಂದು ಪ್ರಸಾರವಾದ ಎಪಿಸೋಡ್ ವೀಕ್ಷಕರ ಗಮನ ಸೆಳೆದಿದೆ. ಮದುವೆ ಆಗದೇ ಇರುವ ಹೆಣ್ಣನ್ನು ಅನೇಕರು ದೂಷಿಸುತ್ತಾರೆ. ಆ ರೀತಿ ದೂಷಿಸಬಾರದು ಎಂಬ ಥೀಮ್ ಇಟ್ಟುಕೊಂಡು ಶುಕ್ರವಾರದ ಎಪಿಸೋಡ್ ಮೂಡಿಬಂದಿತ್ತು. ಇದಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಛಾಯಾ ಸಿಂಗ್ ನಟನೆಯನ್ನು ಫ್ಯಾನ್ಸ್ ಕೊಂಡಾಡಿದ್ದಾರೆ. ಭೂಮಿಕಾಗೆ (ಛಾಯಾ ಸಿಂಗ್) ಈಗ ವಯಸ್ಸು 35 ವರ್ಷ. ಎಷ್ಟೇ ಪ್ರಯತ್ನ ಮಾಡಿದರೂ ಆಕೆಗೆ ಮದುವೆ ಆಗಿರುವುದಿಲ್ಲ. ಕೊನೆಗೂ ಒಂದು ಹುಡಗನನ್ನು ಗೌತಮ್ ದಿವಾನ್ (ರಾಜೇಶ್ ನಟರಂಗ) ಕರೆದು ತರುತ್ತಾನೆ. ಎಂಗೇಜ್ಮೆಂಟ್ ದಿನ ಆ ಹುಡುಗ ಫ್ರಾಡ್ ಅನ್ನೋದು ಗೊತ್ತಾಗುತ್ತದೆ. ಮದುವೆಯ ಕನಸು ಕಂಡ ಭೂಮಿಕಾಗೆ ಮತ್ತದೇ ನೋವು. ಆ ನೋವಿನಲ್ಲಿ ಆಕೆ ಆಡುವ ಮಾತುಗಳು ಎಲ್ಲರ ಗಮನ ಸೆಳೆದಿದೆ. ಅನೇಕ ಹೆಣ್ಣುಮಕ್ಕಳು ಗಂಡನ ಮನೆಗೆ ತೆರಳಿ ಕಷ್ಟ ಪಟ್ಟವರಿದ್ದಾರೆ. ಅಲ್ಲಿ ಟಾರ್ಚರ್ ಪಡೆದು ವಿಚ್ಛೇದನ ಪಡೆದವರಿದ್ದಾರೆ. ಮದುವೆ ಆಗದೇ ಇದ್ದವರಿಗೆ ಮದುವೆ ಆಗಿಲ್ಲ ಎನ್ನುವ ಚಿಂತೆ. ಮದುವೆ ಆಗಿ ಗಂಡನ ಮನೆಗೆ ತೆರಳಿದವರಿಗೆ ಬೇರೆಯದೇ ಚಿಂತೆ. ಈ ಎಲ್ಲಾ ವಿಚಾರಗಳನ್ನು ಕಣ್ಣೀರು ಹಾಕುತ್ತಲೇ ಹೇಳುತ್ತಾರೆ ಛಾಯಾ ಸಿಂಗ್. ಅವರ ಕಣ್ಣೀರಿಗೆ ಪ್ರೇಕ್ಷಕರ ಮನ ಕರಗಿದೆ. ಈ ಕ್ಲಿಪ್ನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ.
‘ಇಷ್ಟು ದಿನ ಧಾರಾವಾಹಿ ನೋಡಿ ನಗುತ್ತಿದ್ದೆ. ಆದರೆ, ಈ ಧಾರಾವಾಹಿಯ ದೃಶ್ಯ ನೋಡಿ ನಿಜಕ್ಕೂ ಕಣ್ಣೀರು ಇಟ್ಟೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಛಾಯಾ ಸಿಂಗ್ ಹೇಳುವ ‘ನಾವು ಪೂಜೆ ಮಾಡೋ ಯಾವ್ ದೇವರಿಗೂ ಹೆಣ್ಣುಮಕ್ಕಳೇ ಹುಟ್ಟಿಲ್ಲ’ ಎಂಬ ಮಾತು ಎಲ್ಲರ ಗಮನ ಸೆಳೆದಿದೆ. ಛಾಯಾ ಸಿಂಗ್ ಮಾತ್ರವಲ್ಲದೆ, ರಾಜೇಶ್ ನಟರಂಗ, ಸಿಹಿ ಕಹಿ ಚಂದ್ರು, ಸಾರಾ ಅಣ್ಣಯ್ಯ ಮೊದಲಾದವರ ನಟನೆ ಗಮನ ಸೆಳೆಯುತ್ತಿದೆ.