ಆದಿಪುರುಷ್ ಸಿನಿಮಾ ನೋಡಲು ಪ್ರೇಕ್ಷಕರ ಕಾತರ – ಬರೋಬ್ಬರಿ 1.50 ಲಕ್ಷ ಟಿಕೆಟ್ ​ಗಳ ಬುಕ್ಕಿಂಗ್!

ಆದಿಪುರುಷ್ ಸಿನಿಮಾ ನೋಡಲು ಪ್ರೇಕ್ಷಕರ ಕಾತರ – ಬರೋಬ್ಬರಿ 1.50 ಲಕ್ಷ ಟಿಕೆಟ್ ​ಗಳ ಬುಕ್ಕಿಂಗ್!

ಬಾಹುಬಲಿ ಸರಣಿ ಚಿತ್ರಗಳ ಮೂಲಕ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಟಾಲಿವುಡ್​ ನ ಖ್ಯಾತ ನಟ ಪ್ರಭಾಸ್. ಇದೇ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ ಭಾರತ ಸಿನಿ ದುನಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದಿಪುರುಷ್ ಸಿನಿಮಾ ಜೂನ್ 16ರಂದು ತೆರೆಗೆ ಬರಲಿದ್ದು, ಸಿನಿಮಾ ಬಿಡುಗಡೆ ಇನ್ನೂ ಮೂರು ದಿನ ಇರುವಂತೆಯೇ 1.50 ಲಕ್ಷ ಟಿಕೆಟ್​ಗಳು ಮುಂಗಡವಾಗಿ ಬುಕ್ ಆಗಿವೆ.

ಭಾರತ ಸಿನಿ ದುನಿಯಾದಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಆದಿಪುರುಷ್ ಸಿನಿಮಾ ಜೂನ್ 16 ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ. ಪ್ರಭಾಸ್ ಹೊಸ ಲುಕ್ ನೋಡಿ ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬಿದ್ದು ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ (Pan India) ಸಿನಿಮಾ ಆಗಿರುವ ಆದಿಪುರುಷ್, ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದ್ದು. ಹಿಂದಿ ಅವತರಣಿಕೆಗಂತೂ ಭಾರಿ ಬೇಡಿಕೆ ಕಂಡು ಬರುತ್ತಿದೆ. ಇತರೆ ಭಾಷೆಗಳಿಗೆ ಹೋಲಿಸಿದರೆ ಹಿಂದಿ ಭಾಷೆಯ ಆದಿಪುರುಷ್​ ಟಿಕೆಟ್​ಗಳು ಅತಿ ಹೆಚ್ಚು ಸಂಖ್ಯೆಯಲ್ಲ ಮುಂಗಡವಾಗಿ ಬುಕ್ ಆಗಿವೆ.

ಇದನ್ನೂ ಓದಿ : “ಮಾರಿ.. ಮಾರಿ.. ಮಾರಿಗೆ ದಾರಿ” – ರಾಜ್‌ ಬಿ ಶೆಟ್ಟಿಯ“ಟೋಬಿ “ ಚಿತ್ರ ರಿಲೀಸ್‌ ಗೆ ಡೇಟ್ ಫಿಕ್ಸ್‌

ಜೂನ್ 11 ರಂದು ಆದಿಪುರುಷ್ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಆರಂಭವಾಗಿದ್ದು ಕೇವಲ ಎರಡು ದಿನಗಳಲ್ಲಿ 1.50 ಲಕ್ಷ ಟಿಕೆಟ್​ಗಳು ಮುಂಗಡವಾಗಿ ಮಾರಾಟವಾಗಿವೆ. ಅದರಲ್ಲಿಯೂ ಸಿನಿಮಾ ಬಿಡುಗಡೆ ಆದ ಮೊದಲ ವೀಕೆಂಡ್​ಗೆ ಹೆಚ್ಚಿನ ಸಂಖ್ಯೆಯ ಟಿಕೆಟ್​ಗಳು ಬುಕ್ ಆಗಿವೆ. ಈಗ ಬುಕ್ ಆಗಿರುವ 1.50 ಲಕ್ಷ ಟಿಕೆಟ್​ಗಳಲ್ಲಿ ಮುಕ್ಕಾಲು ಪಾಲು ಟಿಕೆಟ್​ಗಳು ಟಿಕೆಟ್​ ಬುಕ್ ಆಗಿರುವುದು ಹಿಂದಿ ಆದಿಪುರುಷ್ ಸಿನಿಮಾಕ್ಕೆ ಎಂಬುದು ವಿಶೇಷ. 1.10 ಲಕ್ಷ ಟಿಕೆಟ್​ಗಳು ಅಡ್ವಾನ್ಸ್ ಬುಕಿಂಗ್ ಹಿಂದಿ ಆವೃತ್ತಿಗೆ ಮಾತ್ರವೇ ಬುಕ್ ಆಗಿವೆ. ಇನ್ನುಳಿದ ಆವೃತ್ತಿಗೆ ಈ ವರೆಗೆ ಸುಮಾರು 40,000 ಟಿಕೆಟ್​ಗಳಷ್ಟೆ ಬುಕ್ ಆಗಿವೆ ಎನ್ನಲಾಗುತ್ತಿದೆ. ಅಡ್ವಾನ್ಸ್ ಬುಕಿಂಗ್ ಆಧರಿಸಿ ಆದಿಪುರುಷ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಪಾಗಬಹುದು ಎಂಬ ಅಂದಾಜನ್ನು ಟ್ರೇಡ್ ಅನಲಿಸ್ಟ್​ಗಳು ಹಾಕಿದ್ದು, ಮೊದಲ ದಿನ ದಾಖಲೆ ಮೊತ್ತದ ಹಣವನ್ನು ಭಾರತದಲ್ಲಿ ಆದಿಪುರುಷ್ ಗಳಿಸಬಹುದು ಎಂದು ಹೇಳಲಾಗುತ್ತಿದೆ. ವಿಶ್ಲೇಷಕರ ಪ್ರಕಾರ ಆದಿಪುರುಷ್ ಸಿನಿಮಾದ ಹಿಂದಿ ಆವೃತ್ತಿಯೊಂದೇ ಮೊದಲ ದಿನ 30 ಕೋಟಿಗೂ ಹೆಚ್ಚು ಹಣ ಕಲೆ ಹಾಕಲಿದೆಯಂತೆ. ಇನ್ನು ದಕ್ಷಿಣ ಭಾರತದ ರಾಜ್ಯಗಳಿಂದ ಸುಮಾರು 50 ಕೋಟಿ ಹಣವನ್ನು ಗಳಿಕೆ ಮಾಡಬಹುದು ಅಲ್ಲಿಗೆ ಒಟ್ಟಾರೆ ಮೊದಲ ದಿನವೇ ಸುಮಾರು 80 ಕೋಟಿ ಗಳಿಕೆಯನ್ನು ಆದಿಪುರುಷ್ ಮಾಡಬಹುದು ಎನ್ನಲಾಗುತ್ತಿದೆ.

ಕೆಜಿಎಫ್ 2, ಬಾಹುಬಲಿ 2, ಆರ್​ಆರ್​ಆರ್ ಸಿನಿಮಾಗಳ ಮೊದಲ ದಿನದ ಕಲೆಕ್ಷನ್ ದಾಖಲೆಯನ್ನು ಆದಿಪುರುಷ್ ಸಿನಿಮಾ ಹಿಂದಿಕ್ಕಿ ಹೊಸ ದಾಖಲೆ ಸೃಷ್ಟಿಸಲಿದೆ ಎನ್ನಲಾಗುತ್ತಿದೆ. ಭಾರತದಲ್ಲಿ ಸುಮಾರು 6200ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಆದಿಪುರುಷ್ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದ್ದು, ಮೊದಲ ಮೂರು ದಿನಗಳಲ್ಲಿಯೇ ಬಂಡವಾಳ ಹಿಂಪಡೆಯಲೆಂದೇ ಭಾರಿ ಸಂಖ್ಯೆಯ ಸ್ಕ್ರೀನ್​ಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ ನಿರ್ಮಾಪಕರು. ವಿದೇಶಗಳಲ್ಲಿಯೂ ಹೆಚ್ಚು ಸಂಖ್ಯೆಯ ಸ್ಕ್ರೀನ್​ಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದ್ದು ಜೂನ್ 16ಕ್ಕೆ ಸುಮಾರು 13,000 ಸ್ಕ್ರೀನ್​ಗಳಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ.

ಇನ್ನು ಆದಿಪುರುಷ್ ಸಿನಿಮಾವು ರಾಮಾಯಣದ ಕತೆಯನ್ನು ಆಧರಿಸಿದ ಸಿನಿಮಾ ಆಗಿದ್ದು, ರಾಮಾಯಣದ ಅರಣ್ಯಕಾಂಡ, ಉತ್ತರಕಾಂಡವನ್ನು ಸಿನಿಮಾ ಮಾಡಲಾಗಿದೆ. ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್, ಸೀತಾಮಾತೆಯ ಪಾತ್ರದಲ್ಲಿ ಕೃತಿ ಸೆನನ್, ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್, ಹನುಮಂತನ ಪಾತ್ರದಲ್ಲಿ ದೇವದತ್ತ ನಾಗರೆ ಹಾಗೂ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ.

suddiyaana