ನಾಳೆ ತೆರೆ ಮೇಲೆ “ಪಠಾಣ್” ಅಬ್ಬರ – ಶಾರುಖ್ ಖಾನ್ ಭರ್ಜರಿ ಕಮ್ ಬ್ಯಾಕ್

ನಾಳೆ ತೆರೆ ಮೇಲೆ “ಪಠಾಣ್” ಅಬ್ಬರ – ಶಾರುಖ್ ಖಾನ್ ಭರ್ಜರಿ ಕಮ್ ಬ್ಯಾಕ್

ಬಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾ “ಪಠಾಣ್” ಸಾಕಷ್ಟು ವಿವಾದಗಳಿಂದಲೇ ಸುದ್ದಿಯಾಗಿತ್ತು. ಇದೀಗ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ  ಅಭಿನಯದ ಚಿತ್ರ “ಪಠಾಣ್” ಚಿತ್ರ ನಾಳೆ ಚಿತ್ರ ಮಂದಿರಗಳಲ್ಲಿ ರಿಲೀಸ್ ಆಗಲು ಕ್ಷಣಗಣನೆ ಆರಂಭವಾಗಿದೆ.

ಇದನ್ನೂ ಓದಿ: ಥಿಯೇಟರ್ ಗಳನ್ನು “ಕಬ್ಜ” ಮಾಡಲು ಮುಹೂರ್ತ ಫಿಕ್ಸ್ – ಅಪ್ಪು ಬರ್ತಡೇಯಂದೇ ಪರಾಕ್!

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್, ಬಹು ಬೇಡಿಕೆ ನಟಿ ದೀಪಿಕಾ ಪಡುಕೋಣೆ, ನಟ ಜಾನ್ ಅಬ್ರಹಾಂ ಪ್ರಮುಖ ಪಾತ್ರಗಳಲ್ಲಿ  ನಟಿಸಿರುವ ಈ ಚಿತ್ರ ನಾಳೆ (ಜ.25) ರಂದು ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ದೇಶದಾದ್ಯಂತ  5,000 ಪರದೆಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಮುಂಗಡ ಟಿಕೆಟ್ ಬುಕ್ಕಿಂಗ್ ಜೋರಾಗಿ ನಡೆದಿದ್ದು, ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಬಾಚುವ ಮುನ್ಸೂಚನೆ ನೀಡಿದೆ.

ಹೌದು, ಈ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ನಿಂದ ಗಲ್ಲಾಪೆಟ್ಟಿಗೆಯಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿ ಜಮೆಯಾಗಿದೆ. ಆ ಮೂಲಕ ‘ಬ್ರಹ್ಮಾಸ್ತ್ರ’ ಬರೆದಿದ್ದ ದಾಖಲೆಯನ್ನು ‘ಪಠಾಣ್’ ಸಿನಿಮಾ ಅಳಿಸಿ ಹಾಕಿದೆ. ಅಲ್ಲದೇ ಕೆಜಿಎಫ್ ಚಾಪ್ಟರ್  2 ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

‘ಪಠಾಣ್’ ಸಿನಿಮಾದ ‘ಬೇಷರಂ ರಂಗ್..’ ಹಾಡು ವಿವಾದಕ್ಕೆ ಕಾರಣವಾಗಿತ್ತು. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ, ಕೇಸರಿ ಬಣ್ಣದ ಬಿಕಿನಿ ಹಾಕಿ ಡ್ಯಾನ್ಸ್ ಮಾಡಿದ್ದು ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದಾದ ಬಳಿಕ ‘ಬೇಷರಂ ರಂಗ್..’ ಸಾಂಗ್‌ನ ವಿವಾದಕ್ಕೀಡಾದ ಕೆಲ ದೃಶ್ಯಗಳಿಗೆ ಚಿತ್ರತಂಡ ಕತ್ತರಿ ಹಾಕಿದೆ. ಹಾಗಾಗಿ ಚಿತ್ರ ಬಿಡುಗಡೆಗೆ ಇದ್ದ ಕಂಟಕ ದೂರವಾಗಿದೆ.

suddiyaana