ಗೂಗ್ಲಿಗೆ ಬೋಲ್ಡ್ ಆದ ಪೃಥಿ – ಬಾಲ್ಯದ ಗೆಳತಿಯೇ ಆರ್. ಅಶ್ವಿನ್ ಸಂಗಾತಿ!
ಸಿನಿಮಾಗೂ ಕಮ್ಮಿಯಿಲ್ಲ ಈ ಲವ್ ಸ್ಟೋರಿ!
ರವಿಚಂದ್ರನ್ ಅಶ್ವಿನ್.. ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್.. ಚೆನ್ನೈನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಅದ್ಬುತ ಪ್ರದರ್ಶನ ನೀಡಿದ್ರು.. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಹೊಡೆದು ತಂಡಕ್ಕೆ ಆಸರೆಯಾದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗಳನ್ನು ಕಬಳಿಸಿ ಟೀಮ್ ಇಂಡಿಯಾ ಗೆಲುವಿಗೆ ಆಸರೆಯಾದ್ರು.. ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿರುವ ಆರ್ ಅಶ್ವಿನ್ ಅವರ ಲೈಫ್ ಸ್ಟೋರಿ ಕೂಡ ಬಲು ಇಂಟ್ರೆಸ್ಟಿಂಗ್ ಆಗಿದೆ.. ಆಟದಲ್ಲಿ ಮಾತ್ರವಲ್ಲದೇ ಪ್ರೀತಿಯಲ್ಲೂ ಗೆಲುವು ಸಾಧಿಸಿದ್ದಾರೆ. ಅಷ್ಟಕ್ಕೂ ಆರ್ ಅಶ್ವಿನ್ ಮಡದಿ ಯಾರು? ಅವರಿಬ್ಬರ ಮಧ್ಯೆ ಪ್ರೀತಿ ಚಿಗುರಿದ್ದು ಯಾವಾಗ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮುಡಾ ಹಗರಣ ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯಗೆ ಹಿನ್ನಡೆ – ರಿಟ್ ಅರ್ಜಿ ವಜಾ ಮಾಡಿದ ಹೈಕೋರ್ಟ್
ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ರವಿಚಂದ್ರನ್ ಅಶ್ವಿನ್ ತಂಡದ ಅವಿಭಾಜ್ಯ ಅಂಗ. ಸ್ಪಿನ್ನರ್ ಆಗಿ ಸಾಕಷ್ಟು ದಾಖಲೆ ಬರೆದಿರುವ ಆರ್ ಅಶ್ವಿನ್ ಸಾಕಷ್ಟು ವಿಕೆಟ್ ಸಂಪಾದಿಸಿ ಅನೇಕ ಬಾರಿ ತಂಡಕ್ಕೆ ಮ್ಯಾಚ್ ವಿನ್ನರ್ ಆಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.. ಮೈದಾನದಲ್ಲಿ ತಮ್ಮ ಚಾಣಾಕ್ಷ ಆಟದ ಮೂಲಕ ಎದುರಾಳಿಯ ಎದೆಯಲ್ಲಿ ನಡುಕ ಹುಟ್ಟಿಸುವ ಈ ಚಾಣಾಕ್ಷ ಆಟಗಾರನ ಲವ್ ಸ್ಟೋರಿ ಬಲು ಇಂಟ್ರೆಸ್ಟಿಂಗ್ ಆಗಿದೆ. ಯಾವ ಸಿನಿಮಾ ಸ್ಟೋರಿಗೂ ಕಡಿಮೆಯಿಲ್ಲ..
ಹೌದು.. ಆರ್ ಅಶ್ವಿನ್ ಅವರ ಮುದ್ದಿನ ಮಡದಿ ಹೆಸ್ರು ಪೃಥಿ.. ಇವರು ಹಾಗೂ ಅಶ್ವಿನ್ ಬಾಲ್ಯ ಸ್ನೇಹಿತರು. 7 ನೇ ಕ್ಲಾಸ್ ನಲ್ಲಿ ಇರುವಾಗ್ಲೇ ಆರ್ ಅಶ್ವಿನ್ ಹಾಗೂ ಪೃಥಿ ಪರಿಚಯವಾಗಿದ್ದಾರೆ.. ಅಂದಿನಿಂದಲೇ ಈ ಜೋಡಿ ತುಂಬಾ ಕ್ಲೋಸ್ ಆಗಿದ್ರು.. ಹೀಗಾಗಿ ಇವರಿಬ್ಬರು ಶಾಲಾ ಶಿಕ್ಷಣದ ಬಳಿಕ ಒಂದೇ ಕಾಲೇಜ್ ಗೆ ಸೇರ್ತಾರೆ.. ಚೆನ್ನೈನ SSN ಕಾಲೇಜ್‌ನಲ್ಲಿ ಇಂಜಿನಿಯರಿಂಗ್ ಮಾಡಿದರು. ಈ ಸಂದರ್ಭದಲ್ಲಿ ಇಬ್ಬರ ನಡುವಿನ ಗೆಳೆತನ ಪ್ರೀತಿಗೆ ತಿರುಗಿತ್ತು. ಇಬ್ಬರ ಮನೆಯಲ್ಲೂ ಇವರಿಬ್ಬರ ಬಗ್ಗೆ ತುಂಬಾ ಚೆನ್ನಾಗಿ ಗೊತ್ತಿರೋದ್ರಿಂದ ಪ್ರೀತಿಗೆ ಯಾವುದೇ ಅಡ್ಡಿ ಬರಲ್ಲ ಅನ್ನೋ ನಂಬಿಕೆ ಅವರಿಗಿತ್ತು. ಹೀಗಾಗಿ ಅವರಿಬ್ಬರು ಮದುವೆ ಬಗ್ಗೆ ಅಷ್ಟೊಂದಾಗಿ ತಲೆಕೆಡಿಸಿಕೊಂಡಿರ್ಲಿಲ್ಲ..
ಕಾಲ ಕಳಿತಾ ಇದ್ದಂತೆ ಆರ್ ಅಶ್ವಿನ್ ಅವರು ಕ್ರಿಕೆಟ್ ನತ್ತ ಹೆಚ್ಚು ಗಮನ ಕೊಡೋದಿಕ್ಕೆ ಶುರುಮಾಡಿದ್ರು.. ಹೋಗ್ತಾ ಹೋಗ್ತಾ ಅಶ್ವಿನ್ ಕ್ರಿಕೆಟ್ ಜೀವನದಲ್ಲಿ ಏಳಿಗೆ ಸಾಧಿಸುತ್ತಾ ಬಂದ್ರು. ರಾಷ್ಟ್ರೀಯ ತಂಡದಲ್ಲಿಯೂ ಅವಕಾಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ್ರು.. ಅಷ್ಟೇ ಅಲ್ಲ ಆರ್ ಅಶ್ವಿನ್ ನಂತರ ಭಾರತ ತಂಡದ ಪ್ರಮುಖ ಆಟಗಾರನಾದರು. ಈ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಜೀವನಕ್ಕೆ ನೀಡುವ ಸಮಯ ಕಡಿಮೆಯಾಗುತ್ತಾ ಬಂತು.. ಪರಸ್ಪರ ಮಾತುಕತೆಗೆ ಹೆಚ್ಚಿನ ಸಮಯ ಸಿಗ್ತಿರ್ಲಿಲ್ಲ.. ಹಾಗಿದ್ದರೂ ಅಶ್ವಿನ್ ಹಾಗೂ ಪೃಥಿ ನಡುವಿನ ಪ್ರೇಮಕ್ಕೆ ಯಾವುದೇ ಅಡ್ಡಿ ಬಾರ್ಲಿಲ್ಲ. ಅಶ್ವಿನ್ ತಮ್ಮೊಂದಿಗೆ ಹೆಚ್ಚು ಕಾಲ ಕಳೆಯಲು ಸಾಧ್ಯವಾಗದಿದ್ದರೂ, ಆವರಿಗಿದ್ದ ಬದ್ಧತೆಯ ಬಗ್ಗೆ ಅರ್ಥ ಮಾಡಿಕೊಂಡು ಗೌರವಿಸುತ್ತಿದ್ದರು ಪೃಥಿ. ಹೀಗಾಗಿ ಅಶ್ವಿನ್ ಹಾಗೂ ಪ್ರೀತಿ ನಡುವಿನ ಪ್ರೇಮದಲ್ಲಿ ಯಾವುದೇ, ಜಗಳ ಮನಸ್ತಾಪಕ್ಕೆ ಜಾಗ ಇರ್ಲಿಲ್ಲ.. ಒಟ್ಟಿಗೆ ಸಿಕ್ಕಾಗ ಖುಷಿ ಖುಷಿಯಿಂದ ಕಾಲ ಕಳಿತಾ ಇದ್ರು..
ಒಂದು ದಿನ ಅಶ್ವಿನ್ ಕ್ರಿಕೆಟ್ ಮೈದಾನಕ್ಕೆ ಕರೆದುಕೊಂಡು ಹೋಗಿ, ಎಲ್ಲರ ಮುಂದೆ ಪ್ರಪೋಸ್ ಮಾಡ್ತಾರೆ.. ಪೃಥಿ ಕೈ ಹಿಡಿದು ನನ್ನ ಜೀವನದಲ್ಲಿ ನಿನ್ನನ್ನು ಮಾತ್ರ ಬಯಸುತ್ತೇನೆ.. ಅಂತಾ ಹೇಳಿ ಮದುವೆಯಾಗು ಎಂದು ಕೇಳಿಕೊಂಡ್ರು ಅಂತಾ ಪೃಥಿ ಸಂದರ್ಶನವೊಂದ್ರಲ್ಲಿ ಹೇಳಿಕೊಂಡಿದ್ದಾರೆ.. ಬಳಿಕ 2011ರಲ್ಲಿ ಆರ್ ಅಶ್ವಿನ್ ಹಾಗೂ ಪೃಥಿ ನಾರಾಯಣನ್ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ದರಿಸಿದ್ದರು. 2011ರ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಇವರು ಅದೇ ವರ್ಷ ನವೆಂಬರ್‌ನಲ್ಲಿ ಅದ್ದೂರಿಯಾಗಿ ವಿವಾಹವಾದರು. ತಮಿಳು ಸಂಪ್ರದಾಯದಂತೆ ಇಬ್ಬರು ಸತಿಪತಿಗಳಾಗಿ ಹೊಸ ಜೀವನ ಆರಂಭಿಸಿದರು. ಈಗ ಈ ಜೋಡಿ ಇಬ್ಬರು ಮುದ್ದಾದ ಹೆಣ್ಣು ಮಕ್ಕಳ ಹೆತ್ತವರಾಗಿ ಸುಖ ಜೀವನ ನಡೆಸುತ್ತಿದ್ದಾರೆ. ಅವರ ಮೊದಲ ಮಗಳ ಹೆಸರು ಅಕಿರಾ ಎರಡನೇ ಮಗಳ ಹೆಸರು ಆದ್ಯ. ಪೃಥಿ ಮಕ್ಕಳ ಜೊತೆಗೆ ಮೈದಾನಕ್ಕೆ ಪಂದ್ಯ ನೋಡಲು ಆಗಾಗ ಬರ್ತಾ ಇರ್ತಾರೆ.. ಮುದ್ದಿನ ಪತ್ನಿ ಹಾಗೂ ಕುಟುಂಬದವರ ಪ್ರೋತ್ಸಾಹದಿಂದಲೇ ಆರ್ ಅಶ್ವಿನ್ ಇಷ್ಟರ ಮಟ್ಟಿಗೆ ಯಶಸ್ಸು ಸಾಧಿಸಿದ್ದಾರೆ.