ಲಾಲ್‌ಬಾಗ್ ಕಾರ್ಮಿಕನಿಗೆ ಗುದ್ದಿದ ನಟಿ ಕಾರು – ಮಾನವೀಯತೆಗೂ ಕಾರ್ಮಿಕನ ಮಾತನಾಡಿಸದ ನಟಿ ರಚಿತಾರಾಮ್

ಲಾಲ್‌ಬಾಗ್ ಕಾರ್ಮಿಕನಿಗೆ ಗುದ್ದಿದ ನಟಿ ಕಾರು – ಮಾನವೀಯತೆಗೂ ಕಾರ್ಮಿಕನ ಮಾತನಾಡಿಸದ ನಟಿ ರಚಿತಾರಾಮ್

ಸೆಲೆಬ್ರಿಟಿಯೇ ಆಗಲಿ, ಯಾರೇ ಆಗಲಿ, ಮನುಷ್ಯ ಅಂದ ಮೇಲೆ ಮಾನವೀಯತೆ ಇರಲೇಬೇಕು. ಆದರೆ, ಇಲ್ಲಿ ಖ್ಯಾತ ನಟಿ ರಚಿತಾರಾಮ್ ಪ್ರಯಾಣ ಮಾಡುತ್ತಿದ್ದ ಕಾರು ಕಾರ್ಮಿಕನಿಗೆ ತಾಗಿದೆ. ತಾನಿದ್ದ ಕಾರು ಕಾರ್ಮಿಕನಿಗೆ ಗುದ್ದಿದರೂ ಕೂಡಾ ಕ್ಷಮೆ ಕೇಳುವುದು ಬಿಡಿ, ಕನಿಷ್ಠ ಸೌಜನ್ಯಕ್ಕಾದರೂ ಕಾರ್ಮಿಕನನ್ನು ಮಾತನಾಡಿಸದೇ ನಟಿ ದರ್ಪ ಮೆರೆದಿರುವುದು ಅಲ್ಲಿ ನೆರೆದಿದ್ದ ಜನರಲ್ಲಿ ಅಸಮಾಧಾನ ಮೂಡಿಸಿದೆ.

ಇದನ್ನೂ ಓದಿ: ತಾನು ಆಡಿದ ಮಾತೇ ಉಪೇಂದ್ರಗೆ ಮುಳುವಾಯ್ತು –  ನಟನ ವಿರುದ್ಧ ಎಫ್‌ಐಆರ್‌ ದಾಖಲು

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಫ್ಲವರ್ ಶೋ ನಡೆಯುತ್ತಿದೆ. ಸಸ್ಯಕಾಶಿಯಲ್ಲಿ ಸೋಮವಾರ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಅತಿಥಿಯಾಗಿ ನಟಿ ರಚಿತಾ ರಾಮ್ ಕಾರಿನಲ್ಲಿ ಆಗಮಿಸುತ್ತಿದ್ದರು. ಈ ಸಂದರ್ಭದಲ್ಲಿ ರಚಿತಾರಾಮ್ ಕಾರು ಲಾಲ್‌ಬಾಗ್‌ನ ಕಾರ್ಮಿಕನಿಗೆ ಗುದ್ದಿದೆ. ಜಾಸ್ತಿಯೇನು ಅನಾಹುತ ಆಗಿಲ್ಲ. ಆದರೆ, ಕಾರಲ್ಲೇ ಇದ್ದ ನಟಿ ರಚಿತಾ ರಾಮ್ ಮಾತ್ರ ಏನೋ ಆಗಿಯೇ ಇಲ್ಲ ಎಂಬಂತೆ ಕಾರನ್ನೂ ನಿಲ್ಲಿಸದೇ ಸೀದಾ ಹೋಗಿದ್ದಾರೆ. ಕ್ಷಮೆ ಯಾಚಿಸಲೂ ಇಲ್ಲ, ಕಾರ್ಮಿಕನನ್ನು ಮಾತಾನಾಡಿಸುವ ಸೌಜನ್ಯವನ್ನೂ ತೋರಲಿಲ್ಲ. ಕಾರು ಕಾರ್ಮಿಕನಿಗೆ ಗುದ್ದಿರುವುದನ್ನು ನೋಡಿದ ಜನ ನಟಿ ರಚಿತಾರಾಮ್ ಬಗ್ಗೆ ಬೇಸರ ಹೊರ ಹಾಕಿದ್ದಾರೆ. ಘಟನೆ ನಡೆದಿದ್ದು ಆಕಸ್ಮಿಕವೇ ಆದರೂ, ಕನಿಷ್ಠ ಮಾನವೀಯತೆ ದೃಷ್ಟಿಯಿಂದಾರೂ ಕಾರ್ಮಿಕನನ್ನು ಮಾತನಾಡಿಸಬೇಕಿತ್ತು ಎನ್ನುವುದು ಅಲ್ಲಿದ್ದವರ ಪ್ರತಿಕ್ರಿಯೆಯಾಗಿತ್ತು.

suddiyaana