ವಿದೇಶದಲ್ಲಿ ನಟ ಹೃತಿಕ್ ರೋಶನ್ ಜಾಲಿ ಮೂಡ್‌ – ಹೊಸ ಪ್ರೇಯಸಿ ಸಬಾ ಆಜಾದ್ ಜೊತೆ ನಟನ ಸುತ್ತಾಟ

ವಿದೇಶದಲ್ಲಿ ನಟ ಹೃತಿಕ್ ರೋಶನ್ ಜಾಲಿ ಮೂಡ್‌ – ಹೊಸ ಪ್ರೇಯಸಿ ಸಬಾ ಆಜಾದ್ ಜೊತೆ ನಟನ ಸುತ್ತಾಟ

ಬಾಲಿವುಡ್ ನಟ ಹೃತಿಕ್ ರೋಶನ್ ಜಾಲಿ ಮೂಡ್‌ನಲ್ಲಿದ್ದಾರೆ. ಸಿನಿಮಾ ಕೆಲಸಗಳಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿರುವ ಹೃತಿಕ್ ರೋಶನ್ ವಿದೇಶದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಈಗಾಗಲೇ ಪತ್ನಿ ಸುಸಾನೆ ಖಾನ್ ಜೊತೆ ಡೈವೋರ್ಸ್ ತೆಗೆದುಕೊಂಡಿದ್ದ ಹೃತಿಕ್ ಈಗ ಒಂಟಿಯಾಗಿ ಫಾರಿನ್ ಟ್ರಿಪ್ ಮಾಡಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಆದರೆ, ಹೃತಿಕ್ ಈಗ ಜೋಡಿಯಾಗಿಯೇ ಸುತ್ತಾಡುತ್ತಿದ್ದಾರೆ. ಅದು ಕೂಡಾ ತನ್ನ ಪ್ರೇಯಸಿ ಜೊತೆ.

ಇದನ್ನೂ ಓದಿ: ಸಿನಿಮಾದಲ್ಲಿ ಹೀರೋ ಆಗಲು ಕ್ಯಾಪ್ಟನ್ ಕೂಲ್ ರೆಡಿ -‘ಆ್ಯಕ್ಷನ್’ ಸಿನಿಮಾ ಓಕೆ ಎಂದ ಧೋನಿ ಪತ್ನಿ ಸಾಕ್ಷಿ

ಸಬಾ ಆಜಾದ್ ಜೊತೆ ಹೃತಿಕ್ ರೋಷನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವಿಚಾರ ಮೊದಲೆಲ್ಲ ಗಾಸಿಪ್ ರೂಪದಲ್ಲಿ ಇತ್ತು. ಆದರೆ ಈಗ ಅವರಿಬ್ಬರು ಯಾವುದೇ ಹಿಂಜರಿಕೆ ಇಲ್ಲದೇ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈಗ ಅವರಿಬ್ಬರ ಪ್ರೀತಿಯ ವಿಚಾರ ಗುಟ್ಟಾಗಿ ಉಳಿದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಹಲವಾರು ಫೋಟೋಗಳು ಇಬರಿಬ್ಬರ ಸಂಬಂಧಕ್ಕೆ ಸಾಕ್ಷಿ ಒದಗಿಸುತ್ತಿವೆ.

ಹೃತಿಕ್ ರೋಷನ್ ಅವರು ಸುಸಾನೆ ಖಾನ್ ಜೊತೆ ಮದುವೆ ಆಗಿದ್ದರು. ಆ ದಂಪತಿಗೆ ಇಬ್ಬರು ಗಂಡು ಮಕ್ಕಳು. ಹೃತಿಕ್ ರೋಷನ್ ಮತ್ತು ಸುಸಾನೆ ಖಾನ್ ದಾಂಪತ್ಯ ಮುರಿದು ಬಿದ್ದ ಮೇಲೆ ಹೊಸ ಪ್ರೇಯಸಿ ಸಬಾ ಆಜಾದ್ ಜೊತೆ ಸುತ್ತಾಡುತ್ತಿದ್ದಾರೆ. ಸದ್ಯ ಹೃತಿಕ್ ರೋಷನ್ ಮತ್ತು ಸಬಾ ಅಜಾದ್ ಅವರು ಅರ್ಜೆಂಟಿನಾಗೆ ತೆರೆಳಿದ್ದಾರೆ. ಅಲ್ಲಿನ ಸುಂದರವಾದ ಸ್ಥಳಗಳಲ್ಲಿ ರಜೆಯ ಮಜಾ ಸವಿಯುತ್ತಿದ್ದಾರೆ. ಸಿನಿಮಾ ರಂಗದಿಂದ ಸಣ್ಣ ಬ್ರೇಕ್ ತೆೆಗೆದುಕೊಂಡಿರುವ ಹೃತಿಕ್ ರೋಷನ್ ಬಾಲಿವುಡ್‌ನಲ್ಲಿ ಸದಾ ಬೇಡಿಕೆಯ ನಟ. ಅವರ ಕೈಯಲ್ಲಿ ‘ಫೈಟರ್’ ಮತ್ತು ‘ವಾರ್ 2’ ಚಿತ್ರಗಳು ಇವೆ. ‘ಫೈಟರ್’ ಸಿನಿಮಾಗೆ ದೀಪಿಕಾ ಪಡುಕೋಣೆ ನಾಯಕಿ. ಇನ್ನು, ‘ವಾರ್ 2’ ಚಿತ್ರದಲ್ಲಿ ಹೃತಿಕ್ ರೋಷನ್ ಅವರು ಜೂನಿಯರ್ ಎನ್‌ಟಿಆರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

suddiyaana