ಪೊಲೀಸರನ್ನು ಕಂಡು ಎಸ್ಕೇಪ್‌ ಆಗಲು ಯತ್ನ! – ಓಡುತ್ತಾ.. ಓಡುತ್ತಾ ನದಿಗೆ ಹಾರಿಯೇ ಬಿಟ್ಟ!

ಪೊಲೀಸರನ್ನು ಕಂಡು ಎಸ್ಕೇಪ್‌ ಆಗಲು ಯತ್ನ! – ಓಡುತ್ತಾ.. ಓಡುತ್ತಾ ನದಿಗೆ ಹಾರಿಯೇ ಬಿಟ್ಟ!

ಯಾವುದಾದರೂ ತಪ್ಪು ಮಾಡಿದ್ರೆ ಪೊಲೀಸರಿಂದ ಹೇಗೆ ತಪ್ಪಿಸಿಕೊಳ್ಳುವುದು ಅಂತಾ ಆರೋಪಿಗಳು ಯೋಚಿಸುತ್ತಿರುತ್ತಾರೆ. ಪೊಲೀಸರ ಕೈಗೆ ಸಿಗಬಾರದು ಅಂತಾ ತಲೆಮರೆಸಿಕೊಂಡು ಓಡಾಡುತ್ತಿರುತ್ತಾರೆ. ಒಂದು ವೇಳೆ ಪೊಲೀಸರು ಆರೋಪಿಗಳು ಅಡಗಿರವ ಪ್ರದೇಶವನ್ನು ಪತ್ತೆ ಹಚ್ಚಿದ್ರೆ ಅಲ್ಲಿಂದ ಎಸ್ಕೇಪ್‌ ಆಗಲು ಪ್ರಯತ್ನಿಸುತ್ತಾರೆ. ಪೊಲೀಸರ ಕೈ ಸಿಗಬಾರದೆಂದು ಏನೂ ಮಾಡಲೂ ತಯಾರಿರುತ್ತಾರೆ. ಇಲ್ಲೊಬ್ಬ ಆರೋಪಿ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಈ ವೇಳೆ ಆತ ನದಿಗೆ ಹಾರಿದ್ದಾನೆ.

ಈ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಆರೋಪಿಯೊಬ್ಬ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಶಿಯೋಪುರ್ ಪ್ರದೇಶದಲ್ಲಿ ನದಿ ಹಾರಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆರೋಪಿಯನ್ನು ಖಾನ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಉದ್ಯಮಿ ಮುಕೇಶ್ ಅಂಬಾನಿಗೆ ಮತ್ತೆ ಜೀವ ಬೆದರಿಕೆ – 400 ಕೋಟಿ ರೂ.ಗೆ ಬೇಡಿಕೆ ಇಟ್ಟ ದುಷ್ಕರ್ಮಿಗಳು!

ಖಾನ್ ಡ್ರಗ್ಸ್ ಮಾರಾಟ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಲೆಂದು ಆತ ಇದ್ದ ಸ್ಥಳಕ್ಕೆ  ತೆರಳಿದ್ದಾರೆ. ಪೊಲೀಸರು ಬರುತ್ತಿರುವುದನ್ನು ಕಂಡ ಆತ ಅಲ್ಲಿ ಎಸ್ಕೇಪ್‌ ಆಗಲು ಮುಂದಾಗಿದ್ದಾನೆ. ಪೊಲೀಸರು ಆತನ ಹತ್ತಿರ ಬರುತ್ತಿದ್ದಂತೆ ಓಡಲು ಶುರುಮಾಡಿದ್ದಾನೆ. ಈ ವೇಳೆ ಆತನನ್ನು ಪೊಲೀಸರು ಬೆನ್ನುಹತ್ತಿದ್ದಾರೆ.  ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಖಾನ್ ನೇರವಾಗಿ ನದಿಗೆ ಜಿಗಿದಿದ್ದಾನೆ. ಅಲ್ಲದೆ ಬೇರೆಕಡೆ ಈಜುತ್ತಾ ತೆರಳಿದ್ದಾನೆ. ಈ ಮೂಲಕ ಅಧಿಕಾರಿಗಳ ಕೈಯಿಂದ ತಪ್ಪಿಸಿಕೊಂಡಿದ್ದಾನೆ.

ಸದ್ಯ ಆರೋಪಿ ನದಿಗೆ ಜಿಗಿದು ಈಜುತ್ತಾ ತಪ್ಪಿಸಿಕೊಳ್ಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪೊಲೀಸರು ಪದೇ ಪದೇ ಮನವಿ ಮಾಡಿದರೂ ಆರೋಪಿ ನದಿಯಿಂದ ಹೊರಬರಲು ನಿರಾಕರಿಸಿದ್ದಾನೆ.

ಖಾನ್, ಮಾದಕವಸ್ತು ಮಾರಾಟದ ಆರೋಪ ಹೊತ್ತಿದ್ದಾನೆ. ಅಲ್ಲದೆ ಈತನ ಮೇಲೆ ಸೆಕ್ಷನ್ 110 (ಪ್ರಚೋದನೆಯ ಶಿಕ್ಷೆ) ಸೇರಿದಂತೆ ಹಲವಾರು ಇತರ ಕೆಸ್‍ಗಳು ದಾಖಲಾಗಿವೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕ್ರಿಮಿನಲ್‍ಗಳನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ. ಸದ್ಯ ಖಾನ್‍ಗಾಗಿ ಹುಡುಕಾಟ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Shwetha M