ಪಾಕಿಸ್ತಾನ ಹಿಂದಿಕ್ಕಿದ ಐಪಿಎಲ್!  – ಪಾಕ್‌ ಗಿಂತ ಐಪಿಎಲ್ 13 ಪಟ್ಟು ಮೌಲ್ಯಯುತವಾಗಿದೆಯೇ..?

ಪಾಕಿಸ್ತಾನ ಹಿಂದಿಕ್ಕಿದ ಐಪಿಎಲ್!  – ಪಾಕ್‌ ಗಿಂತ ಐಪಿಎಲ್ 13 ಪಟ್ಟು ಮೌಲ್ಯಯುತವಾಗಿದೆಯೇ..?

ಕ್ರಿಕೆಟ್ ಜಗತ್ತಿಗೆ 2 ತಿಂಗಳು ಭರ್ಜರಿ ರಸದೌತಣ ಬಡಿಸಿದ್ದ ಐಪಿಎಲ್ ಟೂರ್ನಿ ಮುಗಿದು ತಿಂಗಳಾಗ್ತಾ ಬಂತು.  ಬಟ್ ಐಪಿಎಲ್ ಬಗೆಗಿನ ಟಾಕ್ ಮಾತ್ರ ಕಮ್ಮಿ ಆಗಿಲ್ಲ. ಇತ್ತೀಚೆಗಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್​ನ ಮೌಲ್ಯ ಹೊರಬಿದ್ದಿದ್ದು ಇಡೀ ಜಗತ್ತೇ ಶೇಕ್ ಆಗ್ತಿದೆ. ಅದ್ರಲ್ಲೂ ನೆರೆಯ ಪಾಕಿಸ್ತಾನವಂತೂ ಬಾಯ್ಮೇಲೆ ಬೆರಳಿಟ್ಟುಕೊಂಡಿದೆ. ಅದಕ್ಕೆ ಕಾರಣವೂ ಇದೆ. ಪಾಕಿಸ್ತಾನ ಈಗಾಗ್ಲೇ ದಿವಾಳಿ ಅಂಚಿನಲ್ಲಿದೆ ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರನೇ. ಬಟ್ ನಮ್ಮ ಐಪಿಎಲ್​ನ ಆರ್ಥಿಕತೆ ಮೌಲ್ಯ ಪಾಕಿಸ್ತಾನದ ಆರ್ಥಿಕತೆಯ ಮೌಲ್ಯಕ್ಕಿಂತ 13 ಪಟ್ಟು ಹೆಚ್ಚಾಗಿದೆ ಅನ್ನೋ ಅಚ್ಚರಿಯ ವಿಚಾರ ಹೊರಬಿದ್ದಿದೆ. 17ನೇ ಸೀಸನ್​ ಅಂತ್ಯಕ್ಕೆ ಐಪಿಎಲ್​ನ ಮೌಲ್ಯ ನಂತರ 16.4 ಬಿಲಿಯನ್ ಡಾಲರ್ ಅಥವಾ ಸುಮಾರು 1.3 ಲಕ್ಷ ಕೋಟಿ ರೂ.ಗಳಾಗಿದೆ. ಇದು ಕಳೆದ ವರ್ಷ 15.4 ಬಿಲಿಯನ್ ಡಾಲರ್​ ಇದ್ದ ಮೌಲ್ಯ ಈ ವರ್ಷ ಶೇ. 6.5 ರಷ್ಟು ಹೆಚ್ಚಾಗಿದೆ ಎಂದು ಸ್ವತಂತ್ರ ಜಾಗತಿಕ ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕಿ ತಿಳಿಸಿದೆ. ಹೀಗೆ ಐಪಿಎಲ್ ಮೌಲ್ಯ ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ರೆ ಅತ್ತ ಪಾಕಿಸ್ತಾನದ ಪರಿಸ್ಥಿತಿ ಮಾತ್ರ ಪಾತಾಳಕ್ಕೆ ಕುಸಿಯುತ್ತಿದೆ.

ಪಾಕಿಸ್ತಾನ ಹಿಂದಿಕ್ಕಿದ ಐಪಿಎಲ್!   

2024ರ ಐಪಿಎಲ್ ಆವೃತ್ತಿ ಬಳಿಕ ಸುಮಾರು 16.4 ಬಿಲಿಯನ್‌ ಡಾಲರ್‌ ಅಂದ್ರೆ ಭಾರತೀಯ ಕರೆನ್ಸಿ ಪ್ರಕಾರ ಸುಮಾರು 1.36 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಕಳೆದ ವರ್ಷ ಐಪಿಎಲ್ ಮೌಲ್ಯ 15.4 ಬಿಲಿಯನ್‌ ಡಾಲರ್‌ ಅಂದ್ರೆ 1.28 ಲಕ್ಷ ಕೋಟಿ ರೂಪಾಯಿ ಇತ್ತು. ಇನ್ನು ಈ ವರದಿ ಪ್ರಕಟವಾದ ಬೆನ್ನಲ್ಲೇ, ಐಪಿಎಲ್‌ ಬ್ರ್ಯಾಂಡ್‌ ವ್ಯಾಲ್ಯೂ ಪಾಕಿಸ್ತಾನದ ಆರ್ಥಿಕತೆಗಿಂತ 13 ಪಟ್ಟು ಹೆಚ್ಚಿದೆ ಎನ್ನುವ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಹರಿಡಾಡುತ್ತಿವೆ. ಸದ್ಯ ಆನ್‌ಲೈನ್‌ನಲ್ಲಿ ಲಭ್ಯವಿರುವ ವರದಿಗಳ ಪ್ರಕಾರ ಪಾಕಿಸ್ತಾನದ ಜಿಡಿಪಿ 1.27 ಬಿಲಿಯನ್ ಡಾಲರ್ ಆಗಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ 10,414 ಕೋಟಿ ರುಪಾಯಿಗಳು. ಈ ಲೆಕ್ಕಾಚಾರದ ಪ್ರಕಾರ ಐಪಿಎಲ್ ಬ್ರ್ಯಾಂಡ್‌ ವ್ಯಾಲ್ಯೂ, ಪಾಕಿಸ್ತಾನದ ಜಿಡಿಪಿಗಿಂತ 13 ಪಟ್ಟು ನಿಜಕ್ಕೂ ಹೆಚ್ಚಾಗಿದೆ. ಇಡೀ ಪಾಕಿಸ್ತಾನದ ಜಿಡಿಪಿಗಿಂತ ಐಪಿಎಲ್‌ನ ವಹಿವಾಟಿನ ಆರ್ಥಿಕತೆ 13 ಪಟ್ಟು ಹೆಚ್ಚಿದೆ. ಅದ್ರಲ್ಲೂ ಕೇವಲ ಐಪಿಎಲ್‌ನ ಬ್ರ್ಯಾಂಡ್‌ ವ್ಯಾಲ್ಯೂ, ಇಡೀ ಪಾಕಿಸ್ತಾನದ ಆರ್ಥಿಕತೆಯ ಮೂರು ಪಟ್ಟು ಹೆಚ್ಚಿದೆ ಎನ್ನುವುದು ಅಚ್ಚರಿ ಎನಿಸಿದರೂ ಸತ್ಯ. ಇದೇ ಕಾರಣಕ್ಕಾಗಿಯೇ ಹಣದ ಹೊಳೆಯೇ ಹರಿಯುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಜಗತ್ತಿನ ನಾನಾ ದೇಶಗಳ ಟಿ20 ಸ್ಪೆಷಲಿಸ್ಟ್ ಆಟಗಾರರು ಪಾಲ್ಗೊಳ್ಳಲು ಹಾತೊರೆಯುತ್ತಿರುತ್ತಾರೆ.  )

ಇನ್ನು ಈ ಬಾರಿಯ ಟೂರ್ನಿಯ ಎಲ್ಲಾ ತಂಡಗಳ ಪೈಕಿ ಅತ್ಯಂತ ಹೆಚ್ಚು ಬ್ರ್ಯಾಂಡ್‌ ವ್ಯಾಲ್ಯೂ ಹೊಂದಿದ ತಂಡವೆಂದರೆ ಅದು ಐದು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್. ಸಿಎಸ್​ಕೆ ಈ ವರ್ಷ 9% ಬೆಳವಣಿಯೊಂದಿಗೆ 230 ಮಿಲಿಯನ್ ಡಾಲರ್ ಬ್ರ್ಯಾಂಡ್ ಮೌಲ್ಯವನ್ನು ಹೊಂದಿರುವ ತಂಡವಾಗಿದೆ. ಅಂದರೆ ತಂಡದ ಮೌಲ್ಯ ಸುಮಾರು 1930 ಕೋಟಿಯಾಗಿದೆ. ಅಚ್ಚರಿಯೆಂದರೆ ಒಂದೂ ಟ್ರೋಫಿ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್​ನ ಗರಿಷ್ಠ ಬ್ರ್ಯಾಂಡ್ ಮೌಲ್ಯ ಹೊಂದಿರುವ ತಂಡಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಆರ್​ಸಿಬಿ 2024ರಲ್ಲಿ 16.4 % ಬೆಳವಣೆಗೆಯೊಂದಿಗೆ 1896 ಕೋಟಿ ಬ್ರ್ಯಾಂಡ್ ಮೌಲ್ಯ ಹೊಂದಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಬ್ರ್ಯಾಂಡ್ ಮೌಲ್ಯದಲ್ಲಿ ಶೇ.19.30ರಷ್ಟು ಏರಿಕೆ ಕಂಡಿದೆ. ಕೆಕೆಆರ್ $216 ಮಿಲಿಯನ್ ಅಂದ್ರೆ 1,805 ಕೋಟಿಯೊಂದಿಗೆ ಮೂರನೇ ಸ್ಥಾನದಲ್ಲಿದೆ. ಒಟ್ನಲ್ಲಿ ಐಪಿಎಲ್ ಅಂದ್ರೆ ಆಟದಿಂದ ಹಿಡಿದು ವಹಿವಾಟಿನವರೆಗೂ ಸುದ್ದಿಯಲ್ಲಿರುತ್ತೆ. ಇದೀಗ ಮೌಲ್ಯದ ವಿಚಾರವಾಗಿಯೂ ಜಗತ್ತಿನಾದ್ಯಂತ ಬಾರೀ ಸದ್ದು ಮಾಡುತ್ತಿದೆ.

Shwetha M

Leave a Reply

Your email address will not be published. Required fields are marked *