ಕ್ರಿಕೆಟ್ ಮರ್ಯಾದೆ ಮರೆತರಾ ಸ್ಟೋಕ್ಸ್.. ಜಡೇಜಾ, ಸುಂದರ್ ಶತಕ ತಪ್ಪಿಸಲು ಸ್ಟೋಕ್ಸ್ ಕುತಂತ್ರ – ಇಂಗ್ಲೆಂಡ್ ಕ್ಯಾಪ್ಟನ್ಗೆ ಜಡ್ಡು ಸೆಡ್ಡು ಹೊಡೆದಿದ್ದು ಹೇಗೆ?
ಡ್ರಾ ಮಾಡಿಕೊಂಡ ಟೀಮ್ ಇಂಡಿಯಾಕ್ಕೆ ಮುಂದಿನ ಸರಣಿ ಗೆಲ್ಲುವ ಗುರಿ

ದಿಟ್ಟ ಹೋರಾಟದ ಮುಂದೆ ಮೋಸದಾಟ ನಡೆಯೋದಿಲ್ಲ. ಯೆಸ್.. ಹಂಡ್ರಡ್ ಪರ್ಸಂಟ್.. ಇದನ್ನ ಮಾಡಿ ತೋರಿಸಿದ್ದಾರೆ ನಮ್ಮ ಟೀಮ್ ಇಂಡಿಯಾ ಕ್ರಿಕೆಟರ್ಸ್. ಆಂಗ್ಲರು ಯಾವ ರೀತಿಯೆಲ್ಲಾ ಕಾಟ ಕೊಟ್ಟರೂ ಕೂಡಾ ಎದೆಯುಬ್ಬಿಸಿ ಸೆಂಚುರಿ ಮಾಡಿಯೇ ಬಿಟ್ಟಿದ್ರು ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್. ಈ ಸರ್ಪ್ರೈಸ್ ಆಟದಿಂದಾಗಿಯೇ ಇಂಗ್ಲೆಂಡ್ ಒಂಥರಾ ಗೆದ್ದು ಸೋತಿತ್ತು. ಇಂಡಿಯಾ ಸೋತು ಗೆದ್ದಿತ್ತು. ಇದನ್ನೇ ಅಲ್ವಾ ಕ್ರಿಕೆಟ್ ಅನ್ನೋದು. ಒಂದೊಳ್ಳೇ ಮ್ಯಾಚ್ನನ್ನ ಸದಾಕಾಲ ನೆನಪಿಟ್ಟುಕೊಳ್ಳುವಂತೆ ವಿಶ್ವಕ್ರಿಕೆಟ್ಗೆ ಟೀಮ್ ಇಂಡಿಯಾ ತೋರಿಸಿಕೊಟ್ಟಿದ್ದು ಹೇಗೆ?, ಸೋಲಿನ ಭೀತಿಯ ನಡುವೆಯೂ ಕ್ಲಾಸ್ ಬ್ಯಾಟಿಂಗ್ ಮಾಡಲು ಹೇಗೆ ಸಾಧ್ಯವಾಯ್ತು? ಸೆಂಚುರಿ ತಪ್ಪಿಸಲು ಸ್ಟೋಕ್ಸ್ ಪ್ರಯತ್ನ ವ್ಯರ್ಥವಾಗಿದ್ದು ಹೇಗೆ ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಭಾರತಕ್ಕೆ ಮಾಸ್ಟರ್ ‘ಸ್ಟೋಕ್ಸ್’ – ಖಾತೆ ತೆರೆಯದೇ ಜೈಸ್ವಾಲ್, ಸಾಯಿ ಔಟ್
ಮ್ಯಾಂಚೆಸ್ಟರ್ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯವನ್ನ ವಿಶ್ವಕ್ರಿಕೆಟ್ ಮರೆಯೋಕೆ ಸಾಧ್ಯವಿಲ್ಲ ಬಿಡಿ. ಇಡೀ ಪಂದ್ಯದಲ್ಲಿ ಮೇಲುಗೈ ಸಾಧಿಸಿತ್ತು ಇಂಗ್ಲೆಂಡ್ ತಂಡ. ನಿಜ ಹೇಳ್ಬೇಕು ಅಂದ್ರೆ ಕೊನೇ ದಿನ ಕೆ.ಎಲ್ ರಾಹುಲ್ ಔಟಾಗ್ತಿದ್ದಂತೆ ಮ್ಯಾಚ್ ಇಂಗ್ಲೆಂಡ್ ಕಡೆ ಅಂತಾ ಅನ್ಸೋಕೆ ಶುರುವಾಗಿತ್ತು. ಟೋಟಲಿ ಒನ್ ಸೈಡ್ ಮ್ಯಾಚ್ ಅಂತಾ ಫ್ಯಾನ್ಸ್ ಕೂಡಾ ಬೇಸರದಲ್ಲಿದ್ರು. ಕ್ರಿಕೆಟ್ ಈಸ್ ಕ್ರಿಕೆಟ್.. ಇಲ್ಲಿ ಎಲ್ಲವೂ ಸಾಧ್ಯ ಅಂತಾ ತೋರಿಸಿಕೊಟ್ರು ನಮ್ಮ ಗ್ರೇಟ್ ಆಲ್ರೌಂಡರ್ಸ್.
ಟೀಮ್ ಇಂಡಿಯಾ, ಬ್ರಿಟಿಷ್ ಪಡೆ ಎದುರು ಸೋಲೋದು ಗ್ಯಾರಂಟಿ ಅಂತಾ ಕ್ರಿಕೆಟ್ ಜಗತ್ತು ನಿರ್ಧರಿಸಿಬಿಟ್ಟಿತ್ತು. ನಾಲ್ಕನೇ ದಿನದಂದು, ನಾಯಕ ಗಿಲ್ ಮತ್ತು ರಾಹುಲ್ 174 ರನ್ಗಳ ಅದ್ಭುತ ಜೊತೆಯಾಟವನ್ನಾಡುವ ಮೂಲಕ ಟೀಂ ಇಂಡಿಯಾದ ಡ್ರಾ ಭರವಸೆಯನ್ನು ಹೆಚ್ಚಿಸಿದ್ದರು. ಆದರೆ ಕೊನೆಯ ದಿನದಂದು ತಂಡಕ್ಕೆ ಮೊದಲ ಸೆಷನ್ನಲ್ಲಿಯೇ ಶಾಕ್ ಆಗಿತ್ತು. ರೆಸ್ಟ್ನಲ್ಲಿದ್ದ ಇಂಗ್ಲೆಂಡ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಕೊನೇ ದಿನ ಆಕ್ರಮಣಕಾರಿಯಾಗಿಯೇ ಫೀಲ್ಡಿಗಿಳಿದಿದ್ರು. ಸ್ಟೋಕ್ಸ್ ಬಾಲ್ಗೆ ರಾಹುಲ್ ವಿಕೆಟ್ ಉರುಳಿತ್ತು. ಆಗ ಆಂಗ್ಲರ ಖುಷಿ ನೋಡ್ಬೇಕಿತ್ತು. ಪಂದ್ಯ ಗೆದ್ದಷ್ಟೇ ಜೋಶ್ನಲ್ಲಿದ್ರು. ರಾಹುಲ್ ವಿಕೆಟ್ ನಂತರ ಕೈ ನೋವಾದ್ರೂ ಗಿಲ್ ತಮ್ಮ ಹೋರಾಟ ಬಿಡಲಿಲ್ಲ. ಈ ಸರಣಿಯಲ್ಲಿ ತಮ್ಮ ನಾಲ್ಕನೇ ಶತಕವನ್ನು ಪೂರೈಸಿದರು. ಶತಕ ಸಿಡಿಸಿದ ಬೆನ್ನಲ್ಲೇ ಶುಭ್ಮನ್ ಗಿಲ್ ಇಂಜುರಿ ಕಾಡಿತು. ನಂತ್ರ ಏಕಾಗ್ರತೆ ಕಳೆದುಕೊಂಡ ಗಿಲ್, ಜೋಫ್ರಾ ಆರ್ಚರ್ಗೆ ವಿಕೆಟ್ ಒಪ್ಪಿಸಿದ್ರು.
ಆದಾಗ್ಯೂ, ಮೊದಲ ಸೆಷನ್ ಮುಗಿಯುವ ಸ್ವಲ್ಪ ಮೊದಲು, ಜೋಫ್ರಾ ಆರ್ಚರ್ ಗಿಲ್ ಅವರನ್ನು ಔಟ್ ಮಾಡಿದ್ರು. ಆಗ ಮ್ಯಾಚ್ ಕ್ಲೀನಾಗಿ ಇಂಗ್ಲೆಂಡ್ ಕಡೆ ವಾಲಿತ್ತು. ಕ್ರೀಸ್ಗೆ ಬಂದ ರವೀಂದ್ರ ಜಡೇಜಾ ಕೂಡ ಮೊದಲ ಎಸೆತದಲ್ಲೇ ಸ್ಲಿಪ್ನಲ್ಲಿ ಕ್ಯಾಚ್ ನೀಡಿದರು. ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ಗಳನ್ನು ಪಡೆದ ಫೀಲ್ಡರ್ ಜೋ ರೂಟ್ ಈ ಕ್ಯಾಚ್ ಹಿಡಿಯುವಲ್ಲಿ ಎಡವಿದರು. ಮೊದಲ ಎಸೆತದಲ್ಲೇ ಜಡೇಜಾಗೆ ಜೀವದಾನ ಸಿಕ್ತು. ಆಮೇಲೆಯೇ ಶುರುವಾಗಿದ್ದು ರಿಯಲ್ ಗೇಮ್.
ಜಡೇಜಾ, ಸುಂದರ್ ಜೊತೆಗೂಡಿ ಆಂಗ್ಲರನ್ನ ಕಾಡೋಕೆ ಶುರುಮಾಡಿದ್ರು. ಇಂಗ್ಲೆಂಡ್ರ ಗೆಲುವಿನ ಕನಸನ್ನು ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ ಧ್ವಂಸ ಮಾಡಿದ್ರು. 5ನೇ ವಿಕೆಟ್ ನಲ್ಲಿ ಜಡೇಜಾ-ಸುಂದರ್ ಬೊಂಬಾಟ್ ಪಾರ್ಟನರ್ಶಿಪ್ ಬಿಲ್ಡ್ ಮಾಡಿದರು. ಸುಂದರ್-ಜಡೇಜಾ ಜೋಡಿ ಯಾವ ಕ್ಷಣದಲ್ಲೂ ತಾಳ್ಮೆ ಕಳೆದುಕೊಳ್ಳಲಿಲ್ಲ. ಬ್ಯಾಡ್ ಬಾಲ್ಗಳನ್ನ ಮಾತ್ರ ಫನಿಶ್ ಮಾಡಿದ ಈ ಜೋಡಿ ರನ್ಗಳಿಕೆಗಿಂತ ವಿಕೆಟ್ ಕಾಯ್ದುಕೊಳ್ಳುವತ್ತಲೇ ಗಮನ ಹರಿಸಿತು. 2ನೇ ಸೆಷನ್ ಪೂರ್ತಿ ವಿಕೆಟ್ ಬಿಟ್ಟುಕೊಡದ ಜಡೇಜಾ-ಸುಂದರ್, 3ನೇ ಸೆಷನ್ನಲ್ಲೂ ಇಂಗ್ಲೆಂಡ್ ಬೌಲರ್ಗಳನ್ನ ಸತಾಯಿಸಿದ್ರು. ಇಬ್ಬರ ಆಟಕ್ಕೆ ಆಂಗ್ಲ ಪಡೆ ಬಳಲಿ ಬೆಂಡಾಗಿತ್ತು.
ಇಲ್ಲಿಯೇ ನೋಡಿ ಇಂಗ್ಲೆಂಡ್ ಕ್ಯಾಪ್ಟನ್ ಕುತಂತ್ರ ಶುರುಮಾಡಿದ್ದು. ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳಲಿದೆ ಎಂಬುದು ಖಚಿತವಾಗುತ್ತಿದ್ದಂತೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮ್ಯಾಚ್ ನಿಲ್ಲಿಸಲು ಮುಂದಾದ್ರು. ಈ ಬಗ್ಗೆ ಅಂಪೈರ್ ಜೊತೆ ಚರ್ಚಿಸಿದ್ರು. ಅಂಪೈರ್ ಟೀಮ್ ಇಂಡಿಯಾ ಬ್ಯಾಟರ್ ಗಳ ಜೊತೆ ಕೇಳಬೇಕೆಂದು ಸೂಚಿಸಿದ್ದಾರೆ. ಆಗ ಭಾರತೀಯ ಬ್ಯಾಟರ್ ಗಳಿಗೆ ಶೇಕ್ ಹ್ಯಾಂಡ್ ನೀಡಲು ಬೆನ್ ಸ್ಟೋಕ್ಸ್ ಮುಂದಾದರು. ಆದರೆ ಹಸ್ತಲಾಘವ ನೀಡಿ ಪಂದ್ಯ ನಿಲ್ಲಿಸಲು ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ನಿರಾಕರಿಸಿದರು. ಏಕೆಂದರೆ ಈ ಹಂತದಲ್ಲಿ ರವೀಂದ್ರ ಜಡೇಜಾ 89 ರನ್ ಗಳಿಸಿದ್ದರೆ, ವಾಷಿಂಗ್ಟನ್ ಸುಂದರ್ 80 ರನ್ ಬಾರಿಸಿದ್ದರು. ಇತ್ತ ಟೀಮ್ ಇಂಡಿಯಾ ಬ್ಯಾಟರ್ ಗಳು ಶತಕ ತಪ್ಪಿಸಲು ಬೆನ್ ಸ್ಟೋಕ್ಸ್ ಮುಂದಾಗಿದ್ದರು. ಆಂಗ್ಲ ನಾಯಕನ ಮೋಸದ ತಂತ್ರಕ್ಕೆ ನಮ್ಮ ಬ್ಯಾಟರ್ಗಳು ಡೋಂಟ್ ಕೇರ್ ಮಾಡಿದ್ರು. ಇಂಗ್ಲೆಂಡ್ ನಾಯಕನ ಕೋರಿಕೆಯನ್ನು ತಿರಸ್ಕರಿಸಿದ ಜಡೇಜಾ ಸೆಂಚುರಿ ಸಿಡಿಸಿಯೇ ಬಿಟ್ರು. ವಾಷಿಂಗ್ಟನ್ ಸುಂದರ್ ಕೂಡಾ ತನ್ನ ಚೊಚ್ಚಲ ಶತಕ ಪೂರೈಸಿದ್ರು.
ಶತಕ ತಪ್ಪಿಸಲು ಮುಂದಾದ ಇಂಗ್ಲೆಂಡ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ಗೆ ಉರ್ಸೋಕೆ ಇಷ್ಟು ಸಾಕಲ್ವಾ. ಟೀಮ್ ಇಂಡಿಯಾದ ಗ್ರೇಟ್ ಆಲ್ ರೌಂಡರ್ಸ್ ತಮ್ಮ ಶತಕ ಪೂರೈಸಿ ಆಂಗ್ಲರ ಮೋಸಕ್ಕೆ ತಕ್ಕ ಪಾಠ ಕಲಿಸಿದ್ರು. ಕೊನೆಗೂ ವಾಷಿಂಗ್ಟನ್ ಸುಂದರ್ ಶತಕ ಪೂರೈಸುತ್ತಿದ್ದಂತೆ ಬೆನ್ ಸ್ಟೋಕ್ಸ್ ಮ್ಯಾಚ್ ಕಾಲ್ ಆಫ್ ಗೆ ಮನವಿ ಮಾಡಿದ್ದಾರೆ. ಈ ವೇಳೆ ಇಂಗ್ಲೆಂಡ್ ನಾಯಕನ ಮನವಿಯನ್ನು ಅಂಗೀಕರಿಸಿದ ಟೀಮ್ ಇಂಡಿಯಾ ಬ್ಯಾಟರ್ಗಳು ದ್ವಿತೀಯ ಇನಿಂಗ್ಸ್ ಅನ್ನು ಅಂತ್ಯಗೊಳಿಸಿದರು. ಇದರೊಂದಿಗೆ ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿತು. ರಣರೋಚಕ ಡ್ರಾ ಸಾಧಿಸುವಲ್ಲಿ ಟೀಮ್ ಇಂಡಿಯಾ ಸಕ್ಸಸ್ ಆಯ್ತು. ಜೊತೆಗೆ ಸರಣಿಯನ್ನ ಜೀವಂತವಾಗಿರಿಸಿಕೊಳ್ಳುವಲ್ಲಿ ಇಂಡಿಯಾ ಯಶಸ್ವಿಯಾಯ್ತು.

ನೋಡಿರಿ

