ತಮಿಳುನಾಡಲ್ಲಿ ಸರ್ಕಾರ ರಚನೆಗೆ ದಳಪತಿ ವಿಜಯ್ ಕಸರತ್ತು – ಸೆಲೆಬ್ರಿಟಿಗಳ ರಾಜಕೀಯ ದರ್ಬಾರ್ ಹೇಗಿದೆ?

ರಾಷ್ಟ್ರರಾಜಕಾರಣದಲ್ಲಿ ಈಗ ತಮಿಳುನಾಡು ಸರ್ಕಾರ ರಚನೆಯ ಸರ್ಕಸ್ ಎಲ್ಲರ ಗಮನ ಸೆಳೆದಿದೆ. ದಳಪತಿ ವಿಜಯ್ ಹೆಚ್ಚಿನ ಸ್ಥಾನ ಪಡೆದ್ರೂ ಸ್ಪಷ್ಟ ಬಹುಮತ ಇಲ್ಲದಿರುವುದೇ ದೊಡ್ಡ ತಲೆನೋವಾಗಿದೆ. ಬೇರೆಯವರ ಸಹಾಯ ಪಡೆದು ಪಟ್ಟಕ್ಕೇರಲು ಮುಂದಾಗುತ್ತಿದ್ದಾರೆ. ಹಾಗೇ ಬೆಂಬಲ ನೀಡಲು ಬೇರೆ ಪಕ್ಷಗಳ ನಾಯಕರ ಡಿಮ್ಯಾಂಡ್ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೆಲ್ಲದರ ನಡುವೆ ತಮಿಳುನಾಡಿನಲ್ಲಿ ಸಿನಿಮಾನಟರಿಗೆ ಇಷ್ಟು ದೊಡ್ಡ ಮಟ್ಟದ ಸಕ್ಸಸ್ ಬಗ್ಗೆಯೂ ಚರ್ಚೆಯಾಗುತ್ತಿದೆ.
ಇದನ್ನೂ ಓದಿ : RCBಗಿಲ್ಲ ಜೋಶ್.. DCಗಿಲ್ಲ ಸ್ಟಾರ್ಕ್ – ಪ್ಲೇ ಆಫ್ಸ್ ಟೈಮಲ್ಲೇ ಕೈಕೊಡ್ತಾರಾ?
ತಮಿಳುನಾಡು ರಾಜಕಾರಣದಲ್ಲಿ ಸಿನಿಮಾ ತಾರೆಯರು ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ ದೊಡ್ಡ ಇತಿಹಾಸವೇ ಇದೆ. ಈ ಹಿಂದೆ ನಟ ಮತ್ತು ನಿರ್ದೇಶಕರಾಗಿದ್ದ ಎಂ.ಜಿ. ರಾಮಚಂದ್ರನ್ (MGR) ಅವರು ಎಐಎಡಿಎಂಕ ಪಕ್ಷವನ್ನು ಸ್ಥಾಪಿಸಿ ಹತ್ತು ವರ್ಷಗಳ ಕಾಲ ರಾಜ್ಯವನ್ನು ಆಳುವ ಮೂಲಕ ಸಿನಿಮಾ ತಾರೆಯರಿಗೆ ರಾಜಕೀಯ ಹಾದಿ ನಿರ್ಮಿಸಿಕೊಟ್ಟಿದ್ದರು. ಅವರನ್ನು ಅನುಸರಿಸಿದ ಜಯಲಲಿತಾ ಅವರು ಚಿತ್ರರಂಗದ ಖ್ಯಾತ ನಟಿಯಾಗಿ ಮಿಂಚಿ, ನಂತರ 14 ವರ್ಷಗಳಿಗೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ದೇಶದ ಪ್ರಭಾವಿ ನಾಯಕಿಯಾಗಿ ಹೊರಹೊಮ್ಮಿದ್ದರು. ಕೇವಲ ನಟರಷ್ಟೇ ಅಲ್ಲದೆ, ಚಿತ್ರಕಥೆಗಾರರಾಗಿದ್ದ ಎಂ. ಕರುಣಾನಿಧಿ ಅವರು ಕೂಡ ಐದು ಬಾರಿ ಮುಖ್ಯಮಂತ್ರಿಯಾಗಿ ತಮಿಳುನಾಡಿನ ಮೇಲೆ ಸಿನಿಮಾ ಪ್ರಭಾವ ಎಷ್ಟಿದೆ ಎಂಬುದನ್ನು ಸಾಬೀತುಪಡಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಕಮಲ್ ಹಾಸನ್ ಅವರು 2018ರಲ್ಲಿ ಮಕ್ಕಳ್ ನೀಧಿ ಮೈಯಂ ಪಕ್ಷವನ್ನು ಸ್ಥಾಪಿಸಿ, 2024ರಲ್ಲಿ ಡಿಎಂಕೆ ಮೈತ್ರಿಕೂಟದ ಬೆಂಬಲದೊಂದಿಗೆ 2025ರಲ್ಲಿ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಈಗ ಅದೇ ಹಾದಿಯಲ್ಲಿ ದಳಪತಿ ವಿಜಯ್ ಅವರು ಹೆಜ್ಜೆ ಇಟ್ಟಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟ ಮುಂದಿನ ಮುಖ್ಯಮಂತ್ರಿಯಾಗುವುದದನ್ನ ನೋಡಲು ಕಾಯುತ್ತಿದ್ದಾರೆ. ತಮಿಳುನಾಡು ರಾಜಕಾರಣದಲ್ಲಿ ಸಿನಿಮಾ ಸಂಸ್ಕೃತಿ ಮತ್ತು ರಾಜಕೀಯ ಅಸ್ಮಿತೆ ಅಷ್ಟೊಂದು ಆಳವಾಗಿ ಬೆಸೆದುಕೊಂಡಿದೆ.

ನೋಡಿರಿ

