ಪ್ರಚಾರದ ವೇಳೆ ಅಭಿಮಾನಿ ಹೂವು ಎಸೆಯುತ್ತಿದ್ದಂತೆ ಬಾಂಬ್ ಎಂದು ಭಾವಿಸಿ ಓಡಿದ ದಳಪತಿ ವಿಜಯ್!

ಖ್ಯಾತ ನಟ, ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ದಳಪತಿ ವಿಜಯ್ ಅವರು ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ ಹಲವು ಕಡೆಗಳಲ್ಲಿ ರ್ಯಾಲಿ ನಡೆಸುತ್ತಿದ್ದಾರೆ. ಇದೀಗ ದಳಪತಿ ಸೈಕಲ್ನಲ್ಲಿ ರ್ಯಾಲಿ ನಡೆಸುತ್ತಿದ್ದ ವೇಳೆ ಅಭಿಮಾನಿಯೊಬ್ಬರು ಹೂವುಗಳನ್ನ ಎಸೆದಿದ್ದಾರೆ. ಆದ್ರೆ ಹೂವನ್ನು ಬಾಂಬ್ ಅಂತ ಅಂದುಕೊಂಡ ವಿಜಯ್ ಸೈಕಲ್ನ ಅಲ್ಲೇ ಬಿಟ್ಟು ಓಡಿ ಹೋಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಅವರಿಂದ ನನಗೆ ಸಮಸ್ಯೆ ಎದುರಾಯಿತು.. ಜೀ ಕನ್ನಡದಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ರಕ್ಷಿತಾ ಪ್ರೇಮ್!
ಏ. 23 ರಂದು ನಡೆಯಲಿರುವ ಚುನಾವಣೆಗೆ ಟಿವಿಕೆ ಪಕ್ಷದ ನಾಯಕ ದಳಪತಿ ವಿಜಯ್ ಎಲ್ಲೆಡೆ ಯಾರ್ಲಿಗಳನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಕನ್ಯಾಕುಮಾರಿಯಲ್ಲಿ ನಡೆದ ಪ್ರಾಚಾರ ಕಾರ್ಯಕ್ರಮದಲ್ಲಿ ವಿಜಯ್ ಭಾಗವಹಿಸಿದ್ದರು. ಈ ವೇಳೆ ಅವರು ಹೈವೇನಲ್ಲಿ ಸೈಕಲ್ ರೈಡ್ ಮಾಡಿದ್ದಾರೆ. . ಈ ವೇಳೆ ಅಭಿಮಾನಿ ಎಸೆದ ಹೂವಿನ ಮಾಲೆಯನ್ನು ಬಾಂಬ್ ಎಂದು ಭಾವಿಸಿ ದಳಪತಿ ವಿಜಯ್ ಅವರು ಗಾಬರಿಗೊಂಡ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆದ ವಿಡಿಯೋದಲ್ಲಿ ಹೈವೇನಲ್ಲಿ ಸೈಕಲ್ ಓಡಿಸುತ್ತಿರುವಾಗ ವಿಜಯ್ ಬಳಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಅಭಿಮಾನಿಯೋರ್ವ ಹೂವಿನ ಮಾಲೆಯನ್ನು ತೆಗೆದುಕೊಂಡುಬಂದು ಎಸೆಯುವ ಪ್ರಯತ್ನ ಮಾಡಿದ್ದಾನೆ. ಇದನ್ನು ನೋಡಿ ದಳಪತಿ ವಿಜಯ್ ಗಾಬರಿಗೊಂಡಿದ್ದಾರೆ. ಅದು ಬಾಂಬ್ ಎಂದು ಭಾವಿಸಿ ಸೈಕಲ್ ಬಿಟ್ಟು ಓಡಿ ನೇರವಾಗಿ ಕಾರನ್ನು ಏರಿದ್ದಾರೆ. ಕೆಲ ಕಾಲ ಗೊಂದಲ ಉಂಟಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಿಜಯ್ ಆ ವಸ್ತುವನ್ನು ಬೆದರಿಕೆ ಎಂದು ತಪ್ಪಾಗಿ ಭಾವಿಸಿದ್ದಾರೆಯೇ ಎಂದು ಹಲವರು ಪ್ರಶ್ನಿಸಿದರು. ವಿಜಯ್ ಅದನ್ನು ಬಾಂಬ್ ಎಂದು ಭಾವಿಸಿ ಓಡಿಹೋದರೆ? ಎಂದು ಹೇಳಲಾಗುತ್ತಿದೆ.
Bomb anenu karuthi annan oodi 🥲#ThalapathyVijay #TVKVijay #Vijay#Thalapathy pic.twitter.com/WQQnryEHnn
— Cinema Pursuit (@CinemaPursuit) April 12, 2026

ನೋಡಿರಿ

