REAL ಗೇಮ್ ಚೇಂಜರ್ ಸಿರಾಜ್ – ಟೆಸ್ಟ್ ಕ್ರಿಕೆಟ್ ನಲ್ಲಿ ಹೇಗಿದೆ POWER?
WTC ನಂಬರ್ 1 ಬೌಲರ್ DSP

REAL ಗೇಮ್ ಚೇಂಜರ್ ಸಿರಾಜ್ – ಟೆಸ್ಟ್ ಕ್ರಿಕೆಟ್ ನಲ್ಲಿ ಹೇಗಿದೆ POWER?WTC ನಂಬರ್ 1 ಬೌಲರ್ DSP

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಮ್ಯಾಚ್ ಕೊಲ್ಕತ್ತಾದಲ್ಲಿ ಸ್ಟಾರ್ಟ್ ಆಗಿದೆ. ಌಂಡ್ ಈ ಪಂದ್ಯವನ್ನ ಗೆಲ್ಲೋಕೆ ಫಸ್ಟ್ ಡೇಯಿಂದಲೇ ಎರಡೂ ತಂಡಗಳು ಟಫ್ ಫೈಟ್ ಕೊಡುತ್ವೆ. ಅದ್ರಲ್ಲೂ ಭಾರತದ ಬ್ಯಾಟಿಂಗ್ ಆರ್ಡರ್ ಅಂತಾ ಬಂದಾಗ ಟೆಸ್ಟ್ ಟೀಂ ತುಂಬಾನೇ ಸ್ಟ್ರಾಂಗ್ ಆಗಿದೆ. ಌಂಡ್ ಬೌಲಿಂಗ್ ಕಾಂಬಿನೇಷನ್ ಕೂಡ ಸೂಪರ್ ಆಗಿದೆ. ಅದ್ರಲ್ಲೂ ರೆಡ್ ಬಾಲ್ ಫಾರ್ಮೆಟ್​​ನಲ್ಲಿ ಭಾರತದ ಬ್ರಹ್ಮಾಸ್ತ್ರ ಅಂದ್ರೆ ಅದು ಡಿಎಸ್​ಪಿ ಮೊಹಮ್ಮದ್ ಸಿರಾಜ್.

ಇದನ್ನೂ ಓದಿ : ರಾಂಗ್‌ ರೂಟ್‌ನಲ್ಲಿ ಬಂದು ಆಟೋ ಚಾಲಕನ ಮೇಲೆ ದರ್ಪ ತೋರಿದ ಮಹಿಳೆ! – ಈಕೆ ಎಡವಟ್ಟಿನಿಂದ 1 ಕಿ.ಮೀ. ಟ್ರಾಫಿಕ್‌ ಜಾಮ್!

ಭಾರತ ಮತ್ತು ಸೌತ್ ಆಫ್ರಿಕಾ ಸರಣಿಯಲ್ಲೂ ಮೊಹಮ್ಮದ್ ಸಿರಾಜ್ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ಕೊಡೋದ್ರಲ್ಲಿ ಡೌಟೇ ಇಲ್ಲ. ಪೇಸ್ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಜೊತೆ ಟೀಂ ಇಂಡಿಯಾದ ಬ್ಯಾಕ್ ಬೋನ್ ಆಗಿದ್ದಾರೆ. ಌಂಡ್ ಬುಮ್ರಾ ಇಲ್ಲದ ಎಷ್ಟೋ ಪಂದ್ಯಗಳಲ್ಲಿ ಒನ್ ಮ್ಯಾನ್ ಶೋ ಥರ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಅವ್ರ ಲೈನ್ ಌಂಡ್ ಲೆಂಗ್ತ್, ಅಕ್ಯುರೆಸಿ, ಅಗ್ರೆಸ್ಸಿವ್​ನೆಸ್ ಎಲ್ಲದ್ರಲ್ಲೂ ದಿ ಬೆಸ್ಟ್ ಪರ್ಫಾಮೆನ್ಸ್ ಬರ್ತಿದೆ. ನ್ಯೂಬಾಲ್​ನಲ್ಲೇ ಬಿಗ್ ಬ್ರೇಕ್ ಥ್ರ್ಯೂಗಳನ್ನ ತಂದುಕೊಡೋ ಸಿರಾಜ್ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡ್ತಿದ್ದಾರೆ.

ರಿಯಲ್ ಹೀರೋ ಸಿರಾಜ್!

ಬಾರ್ಡರ್ ಗವಾಸ್ಕರ್ ಕೊನೇ ಪಂದ್ಯ ಜ.3ರಿಂದ7ರವರೆಗೆ ಸಿಡ್ನಿ

ಸಿರಾಜ್ ಭಾರತದ ಪರ ಎರಡು ಇನ್ನಿಂಗ್ಸ್ ​ಗಳಿಂದ ನಾಲ್ಕು ವಿಕೆಟ್

ಭಾರತ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ

5 ಪಂದ್ಯಗಳ 10 ಇನ್ನಿಂಗ್ಸ್​ಗಳಿಂದ ಬರೋಬ್ಬರಿ 23 ವಿಕೆಟ್

ಒಟ್ಟಾರೆಯಾಗಿ 185.3 ಓವರ್​ಗಳು ಅಂದ್ರೆ 1113 ಬಾಲ್ ಎಸೆದಿದ್ರು

ಓವಲ್ ​ನಲ್ಲಿ ನಡೆದ ಕೊನೇ ಪಂದ್ಯದಲ್ಲಿ 9 ವಿಕೆಟ್​ ಗಳ ಬೇಟೆ

ಯಾವುದೇ ಭಾರತೀಯ ವೇಗಿ ಬೌಲಿಂಗ್ ಮಾಡಿದ ಅತಿ ಹೆಚ್ಚು ಓವರ್‌

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲೂ ಭಾರತದ ಪರ ಅದ್ಭುತ ಪ್ರದರ್ಶನ

ಮೊದಲ ಪಂದ್ಯದಲ್ಲಿ 7 ವಿಕೆಟ್ ಪಡೆದ್ರೆ ಎರಡನೇ ಪಂದ್ಯದಲ್ಲಿ 3 ವಿಕೆಟ್

ಆಸೀಸ್ ವಿರುದ್ಧ ನಾಲ್ಕು, ಇಂಗ್ಲೆಂಡ್ ವಿರುದ್ಧ 23 ಹಾಗೇ ವಿಂಡೀಸ್ ವಿರುದ್ಧ 10 ವಿಕೆಟ್ಸ್

ಟೆಸ್ಟ್ ಕ್ರಿಕೆಟ್​ ನಲ್ಲಿ 37 ವಿಕೆಟ್ ಪಡೆದು ರೆಡ್ ಬಾಲ್ ಫಾರ್ಮೆಟ್​ನ ಹೀರೋ

ಸಾಕಷ್ಟು ಪಂದ್ಯಗಳಲ್ಲಿ ಜಸ್ಪ್ರೀತ್ ಬುಮ್ರಾ ಅವ್ರ ಆಬ್ಸೆನ್ಸ್​ನಲ್ಲಿ ಬೆಸ್ಟ್ ಪರಫಾಮೆನ್ಸ್ ಬಂದಿದೆ. ಇನ್ನು ಇದೇ ವರ್ಷ ಟೆಸ್ಟ್ ಕ್ರಿಕೆಟ್​ನಲ್ಲಿ ಜಸ್ಪ್ರೀತ್ ಬುಮ್ರಾ ಸ್ಟಾಟ್ಸ್ ನೋಡೋದಾದ್ರೆ ಇಂಜುರಿ ಕಾರಣದಿಂದಾಗಿ ಕೆಲವೊಂದು ಪಂದ್ಯಗಳಿಂದ ರೆಸ್ಟ್ ಪಡೆದಿದ್ದಾರೆ. ಬಟ್ ಆಡಿರುವಷ್ಟು ಮ್ಯಾಚ್​ಗಳಲ್ಲಿ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದಾರೆ.

2025ರಲ್ಲಿ ಬುಮ್ರಾ ಪ್ರದರ್ಶನ!

ಆಸೀಸ್ ವಿರುದ್ಧದ ಕೊನೇ ಮ್ಯಾಚಲ್ಲಿ ಬುಮ್ರಾ 2 ವಿಕೆಟ್

ಇಂಗ್ಲೆಂಡ್ ಟೂರ್ ​ಗೆ ಸೆಲೆಕ್ಟ್ ಆಗಿದ್ದ ಬುಮ್ರಾ 3 ಪಂದ್ಯ ಆಡಿದ್ರು

ಮೂರು ಪಂದ್ಯಗಳ 6 ಇನ್ನಿಂಗ್ಸ್ ​ಗಳಲ್ಲಿ 119.4 ಓವರ್​ಗಳನ್ನ ಬೌಲ್

ಬುಮ್ರಾ 718 ಚೆಂಡುಗಳನ್ನ ಎಸೆದಿದ್ದು ಹಾಗೇ 14 ವಿಕೆಟ್ಸ್ ತೆಗೆದಿದ್ರು

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಎರಡು ಪಂದ್ಯಗಳಿಂದ 7 ವಿಕೆಟ್

ಈ ವರ್ಷ ಆಡಿರುವಂತ 6 ಟೆಸ್ಟ್ ಪಂದ್ಯಗಳಿಂದ 23 ವಿಕೆಟ್ ಬೇಟೆ

ಸೋ ಈ ವರ್ಷ ಭಾರತದ ಪರ ಅತೀ ಹೆಚ್ಚು ಬೌಲ್ ಮಾಡಿರೋ ಬೌಲರ್ ಅಂದ್ರೆ ಅದು ಮೊಹಮ್ಮದ್ ಸಿರಾಜ್. ಹಾಗೇ 2025-27ನೇ ಸಾಲಿನ ವಿಶ್ವಟೆಸ್ಟ್ ಚಾಂಪಿಯನ್​ಶಿಪ್ ಪಂದ್ಯಗಳ ಪೈಕಿ ಹೈಯೆಸ್ಟ್ ವಿಕೆಟ್ ಟೇಕರ್ ಲಿಸ್ಟ್​ನಲ್ಲಿ ಸಿರಾಜ್ ನಂಬರ್ 1 ಸ್ಥಾನದಲ್ಲಿದ್ದಾರೆ. 7 ಪಂದ್ಯಗಳಿಂದ 33 ವಿಕೆಟ್ ತೆಗೆದು ಫಸ್ಟ್ ಪ್ಲೇಸ್​ನಲ್ಲಿದ್ದಾರೆ. ವಿಂಡೀಸ್​ ತಂಡದ ಜೋಸೆಫ್ 22 ವಿಕೆಟ್​ಗಳೊಂದಿಗೆ ಸೆಕೆಂಡ್ ಪ್ಲೇಸ್​ನಲ್ಲಿದ್ದಾರೆ. ಇನ್ನು ಬುಮ್ರಾ 5 ಪಂದ್ಯಗಳಿಂದ 21 ವಿಕೆಟ್ ತೆಗೆದು ಮೂರನೇ ಸ್ಥಾನದಲ್ಲಿದ್ದಾರೆ.

Shantha Kumari