ಕ್ರಿಕೆಟ್ ನ ಮಿಸ್ಟರಿ ಬವುಮಾ – ಜಗತ್ ಕಿಲಾಡಿ ಆಗಿದ್ದೇಗೆ?
ಕುಳ್ಳ ಎಂದವರ ಕೊಬ್ಬಿಳಿಯಿತು

ಸೌತ್ ಆಫ್ರಿಕಾ ವಿರುದ್ಧ ಭಾರತ ತನ್ನ ಮೊದಲ ಟೆಸ್ಟ್ ಪಂದ್ಯವನ್ನ ಸೋಲೋಕೆ ಸಾಕಷ್ಟು ಕಾರಣಗಳಿವೆ. ಬ್ಯಾಟಿಂಗ್ ಚೆನ್ನಾಗಿ ಇರ್ಲಿಲ್ಲ. ಪಾರ್ಟ್ನರ್ ಶಿಪ್ ಬಿಲ್ಡ್ ಆಗ್ಲಿಲ್ಲ. ಬೌಲಿಂಗ್ ಕೂಡ ಅಗ್ರೆಸ್ಸಿವ್ ಆಗಿರ್ಲಿಲ್ಲ. ಆದ್ರೆ ಸೌತ್ ಆಫ್ರಿಕಾ ಪಂದ್ಯ ಗೆಲ್ಲೋಕೆ ಮುಖ್ಯ ಕಾರಣನೇ ಟೆಂಬಾ ಬವುಮಾ. ಸೌತ್ ಆಫ್ರಿಕಾ ಟೆಸ್ಟ್ ತಂಡವನ್ನ ಯಶಸ್ಸಿನ ಉತ್ತುಂಗಕ್ಕೇರಿಸಿರೋ ಬವುಮಾ ಈಗ ಬಲಿಷ್ಠ ಭಾರತಕ್ಕೂ ನೀರು ಕುಡ್ಸಿದ್ದಾರೆ. ಸೋಲಿಲ್ಲದ ಸರದಾರನಾಗಿರೋ ಬವುಮಾ ಹೆಜ್ಜೆ ಹೆಜ್ಜೆಗೂ ಅವಮಾನ ಅನುಭವಿಸಿದವ್ರೇ. ಆದ್ರೆ ತನ್ನನ್ನ ಹೀಯಾಳಿಸಿದವ್ರಿಗೆ ಗೆಲುವಿನ ಮೂಲಕವೇ ಉತ್ತರ ಕೊಡ್ತಿದ್ದಾರೆ.
ಇದನ್ನೂ ಓದಿ : IPL ಮಿನಿ ಆಕ್ಷನ್ ನಲ್ಲಿ ಕುಬೇರರು – ವೆಂಕಿ, ರಸೆಲ್, ಪತಿರಾನ ಯಾರೆಲ್ಲಾ?
ಟೆಸ್ಟ್ ಕ್ರಿಕೆಟ್ ಸ್ಟಾರ್ಟ್ ಆಗಿ ಬರೋಬ್ಬರಿ 148 ವರ್ಷಗಳೇ ಆಗಿವೆ. ಇಷ್ಟು ವರ್ಷಗಳಲ್ಲಿ ಯಾರಿಂದಲೂ ಸಾಧ್ಯವಾಗದಂಥ ವಿಶೇಷ ದಾಖಲೆಯನ್ನ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಮಾಡಿದ್ದಾರೆ. ಅದೂ ಕೂಡ ಸೋಲಿಲ್ಲದ ಸರದಾರನಾಗಿ ಅನ್ನೋದೇ ಇಂಟ್ರೆಸ್ಟಿಂಗ್. ಇತ್ತೀಚೆಗೆ ಭಾರತದ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬವುಮಾ ಪಡೆ ಭಾರತವನ್ನ ಸೋಲಿಸಿ ಸರಣಿ ಲೀಡ್ ಪಡೆದಿದೆ. ಈ ಗೆಲುವು ಟೆಂಬಾ ಬವುಮಾ ನಾಯಕತ್ವದಲ್ಲಿ ಸೌತ್ ಆಫ್ರಿಕಾ ತಂಡದ 10ನೇ ಟೆಸ್ಟ್ ಗೆಲುವು. ಸ್ಪೆಷಾಲಿಟಿ ಏನಂದ್ರೆ ಬವುಮಾ ಲೀಡರ್ಶಿಪ್ನಲ್ಲಿ 11 ಟೆಸ್ಟ್ ಪಂದ್ಯಗಳನ್ನಾಡಿರುವ ಸೌತ್ ಆಫ್ರಿಕಾ ಒಂದೇ ಒಂದು ಪಂದ್ಯನೂ ಸೋತಿಲ್ಲ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಒಂದು ಟೆಸ್ಟ್ ಪಂದ್ಯ ಸೋಲದೇ ಮೊದಲ 10 ಮ್ಯಾಚ್ಗಳನ್ನು ಗೆದ್ದ ವಿಶ್ವದ ಮೊದಲ ಕ್ಯಾಪ್ಟನ್ ಎಂಬ ವಿಶ್ವ ದಾಖಲೆಯನ್ನ ಟೆಂಬಾ ಬವುಮಾ ನಿರ್ಮಿಸಿದ್ದಾರೆ. ಅತೀ ಕಡಿಮೆ ಪಂದ್ಯಗಳ ಮೂಲಕ ಮೊದಲ 10 ಗೆಲುವು ಕಂಡ ನಾಯಕ ಅನ್ನೋ ಸಾಧನೆ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಮಾತ್ರವೇ ಡ್ರಾ ಆಗಿದೆ ಮ್ಯಾಚ್!
ಟೆಂಬಾ ಬವುಮಾ ಫೆಬ್ರವರಿ 28, 2023 ರಂದು ಸೆಂಚುರಿಯನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ನಾಯಕತ್ವಕ್ಕೆ ಪಾದಾರ್ಪಣೆ ಮಾಡಿದರು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 87 ರನ್‌ಗಳ ಗೆಲುವಿನತ್ತ ಮುನ್ನಡೆಸಿದರು. ಅಲ್ಲಿಂದ 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯಲ್ಲಿ ಟೆಂಬಾ ಬವುಮಾ ದಕ್ಷಿಣ ಆಫ್ರಿಕಾವನ್ನು ಎಂಟು ಪಂದ್ಯಗಳಲ್ಲಿ ಏಳು ಗೆಲುವುಗಳೊಂದಿಗೆ ಮುನ್ನಡೆಸಿದ್ರು. ಪೋರ್ಟ್ ಆಫ್ ಸ್ಪೇನ್‌ನಲ್ಲಿ 2024 ರ ಆಗಸ್ಟ್ 7 ರಿಂದ 11 ರವರೆಗೆ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮಾತ್ರವೇ ಗೆಲ್ಲೋಕೆ ಸಾಧ್ಯವಾಗಿಲ್ಲ. ಹಾಗಂತ ಪಂದ್ಯ ಸೋತಿಲ್ಲ. ಡ್ರಾನಲ್ಲಿ ಕೊನೆಗೊಂಡಿತ್ತು. ಹಾಗೇ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನ ಸೋಲಿಸಿ ದಕ್ಷಿಣ ಆಫ್ರಿಕಾವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಇನ್ನು ಕಳೆದ ಅಕ್ಟೋಬರ್ನಲ್ಲಿ ಪಾಕ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನ ಸೌತ್ ಆಫ್ರಿಕಾ ಸೋತಿದೆಯಾದ್ರೂ ಕೂಡ ಟೆಂಬಾ ಆ ಪಂದ್ಯವನ್ನ ಆಡಿರಲಿಲ್ಲ. ಌಂಡ್ ಆಡಂ ಮಾರ್ಕ್ರಂ ಕ್ಯಾಪ್ಟನ್ ಆಗಿ ಸರಣಿಯನ್ನ ಲೀಡ್ ಮಾಡಿದ್ರು. ಈಗ ಭಾರತದ ಸರಣಿ ಟೆಂಬಾ ಕ್ಯಾಪ್ಟನ್ ಆಗಿ ಕಂ ಬ್ಯಾಕ್ ಮಾಡಿ ಮೊದಲ ಪಂದ್ಯವನ್ನ ಗೆಲ್ಲಿಸಿದ್ದಾರೆ. ಸೋ ಇಡೀ ಜಗತ್ತೇ ಟೆಂಬಾ ನಾಯಕತ್ವಕ್ಕೆ ಶಹಬ್ಬಾಸ್ ಹೇಳ್ತಿದೆ. ಆದ್ರೆ ಟೆಂಬಾ ಬೆಳೆದು ಬಂದ ಹಾದಿ ಅಷ್ಟು ಈಸಿಯಾಗಿ ಇರಲೇ ಇಲ್ಲ. ಆತನ ಬಣ್ಣ, ಆತನ ಎತ್ತರ ಎಲ್ಲವೂ ಟ್ರೋಲ್ ಆಗಿದೆ. ಕೋಟಾ ಕ್ಯಾಪ್ಟನ್ ಅನ್ನೋ ಟ್ಯಾಗ್ಲೈನ್ ಕೂಡ ಆತನ ಹಣೆಗಂಟಿದೆ. ಆದ್ರೆ ಅದ್ಯಾವುದನ್ನೂ ತಲೆಗೆ ಹಾಕಿಕೊಳ್ಳದೆ ತಂಡದ ಗೆಲುವೊಂದೇ ಮುಖ್ಯ ಅಂತಾ ಗೆಲುವಿನ ಕಡೆಗಷ್ಟೇ ಫೋಕಸ್ ಮಾಡ್ತಿದ್ದಾರೆ.
ಸೌತ್ ಆಫ್ರಿಕಾ 20 ಲೀಗ್ ನಲ್ಲಿ ಅನ್ ಸೋಲ್ಡ್ ಆಗಿದ್ದ ಬವುಮಾ!
ಬವುಮಾ ಎತ್ತರದಲ್ಲಿ ಕುಳ್ಳ ಅನ್ನೋ ಕಾರಣಕ್ಕೆ ಸಾಕಷ್ಟು ಟ್ರೋಲ್ಗಳಾಗಿವೆ. ಲಾರ್ಡ್ ಬವುಮಾ ಅಂತಾ ವ್ಯಂಗ್ಯವನ್ನೂ ಮಾಡಿದ್ದಾರೆ. ಌಂಡ್ ಮೊದಲ ಬಾರಿಗೆ SA20 ಆಟಗಾರರ ಹರಾಜಿನಲ್ಲಿ ಅನ್ಸೋಲ್ಡ್ ಆದಾಗ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾರೆ. ಯಾಕಂದ್ರೆ ರಾಷ್ಟ್ರೀಯ ತಂಡದ ನಾಯಕರಾಗಿದ್ರೂ ಲೀಗ್ನಲ್ಲಿ ಅನ್ಸೋಲ್ಡ್ ಆದಾಗ ಅಮಾನಕ್ಕೊಳಗಾಗಿದ್ರು. ಌಂಡ್ ಪದೇ ಪದೇ ಕುಳ್ಳ ಕುಳ್ಳ ಪೋಸ್ಟ್ಗಳು ಬರ್ತಾರೆ. ಆರಂಭದಲ್ಲಿ ಇದೆಲ್ಲಾ ತಮಾಸೆ ಅನ್ನಿಸಿದ್ರೂ ಆ ನಂತ್ರದಲ್ಲಿ ತೀರಾ ಕೆಳಮಟ್ಟದಲ್ಲಿ ಬಿಂಬಿಸಲಾಗುತ್ತೆ. ಆದ್ರೆ ಅದೆಲ್ಲವನ್ನೂ ಕಿವಿಗೆ ಹಾಕಿಕೊಳ್ಳದೆ ತಾನೆಂಥಾ ಪ್ಲೇಯರ್ ಅನ್ನೋದನ್ನ ಸಾಧಿಸಿ ತೋರಿಸಿದ್ದಾರೆ.
ಶಾಲೆಯ ದಿನಗಳಿಂದಲೇ ಕಪ್ಪುವರ್ಣದ ಬಗ್ಗೆ ಬೇಧ!
ಬವುಮಾ ಅವರಿಗೆ 10 ವರ್ಷ ವಯಸ್ಸಿದ್ದಾಗ ವಿದ್ಯಾರ್ಥಿ ವೇತನದ ಆಧಾರದ ಮೇಲೆ SACS ಎಂಬ ಪ್ರತಿಷ್ಠಿತ ಶಾಲೆಯಲ್ಲಿ ಅಡ್ಮಿಷನ್ ಆಗಿತ್ತು. ಆದ್ರೆ ಆ ಶಾಲೆಯಲ್ಲಿದ್ದ ಕೇವಲ ಮೂವರು ಕಪ್ಪು ಹುಡುಗರಲ್ಲಿ ಟೆಂಬಾ ಸಹ ಒಬ್ಬರಾಗಿದ್ದರು. ಇಂಥಾ ವ್ಯವಸ್ಥೆಯಲ್ಲಿ ಹೊಂದಿಕೊಳ್ಳೋದು ಸುಲಭ ಇರ್ಲಿಲ್ಲ. ಹೀಗೆ ಮುಂದಿನ ದಿನಗಳಲ್ಲಿ ಬವುಮಾ ಅವರ ಕುಟುಂಬವು ಜೋಹಾನ್ಸ್‌ಬರ್ಗ್‌ಗೆ ಶಿಫ್ಟ್ ಆಗುತ್ತೆ. ಸೇಂಟ್ ಡೇವಿಡ್ಸ್ ಎಂಬ ಮತ್ತೊಂದು ಪ್ರತಿಷ್ಠಿತ ಶಾಲೆಗೆ ಸೇರ್ತಾರೆ. ಅಲ್ಲಿಯೂ ಅದೇ ಟೀಕೆಗಳನ್ನ ಎದುರಿಸ್ತಾರೆ. ಆದ್ರೆ ಈಗ ಅದೇ ಶಾಲೆಯ ಕ್ರಿಕೆಟ್ ಮೈದಾನಕ್ಕೆ ಟೆಂಬಾ ಬವುಮಾ ಅವರ ಹೆಸರನ್ಣೇ ಇಡಲಾಗಿದೆ. ಇನ್ನು ದಕ್ಷಿಣ ಆಫ್ರಿಕಾ ಪರ ಟೆಸ್ಟ್ ಆಡಿದ ಮೊದಲ ಕಪ್ಪು ವರ್ಣೀಯ ಬ್ಯಾಟರ್ ಅವರು. ದಕ್ಷಿಣ ಆಫ್ರಿಕಾದ ಮೊದಲ ಪೂರ್ಣಾವಧಿ ನಾಯಕ. ಆಡಿದ ಮೊದಲ ಟೆಸ್ಟ್ ಪಂದ್ಯಗಳಲ್ಲಿ ಶತಕ ಗಳಿಸಿದ ಮೂವರು ದಕ್ಷಿಣ ಆಫ್ರಿಕಾದ ಬ್ಯಾಟರ್ ಗಳಲ್ಲಿ ಅವರೂ ಒಬ್ಬರು. ಌಂಡ್ ದಕ್ಷಿಣ ಆಫ್ರಿಕಾ ತಂಡದ ಡ್ರೆಸ್ಸಿಂಗ್ ರೂಂ ವಾತಾವರಣವನ್ನು ಬದಲಾಯಿಸಿದ ಶ್ರೇಯಸ್ಸು ಟೆಂಬಾ ಬವುಮಾಗೆ ಸಲ್ಲಬೇಕು. ಯಾವ ಆಟಗಾರರನ್ನೂ ಪ್ರೆಶರ್ನಲ್ಲಿ ಇಟ್ಟಿಲ್ಲ. ಪ್ರೋತ್ಸಾಹ ನೀಡ್ತಾರೆ. ಌಂಡ್ ತಾವೂ ಮುಂದೆ ನಿಂತು ಪಂದ್ಯ ಗೆಲ್ಲಿಸೋ ಸಾಮರ್ಥ್ಯವೇ ಅವ್ರನ್ನ ಈ ಮಟ್ಟಿಗೆ ತಂದು ನಿಲ್ಲಿಸಿದೆ.
21 ವರ್ಷಗಳ ಕಾಲ ಬ್ಯಾನ್ ಆಗಿದ್ದ ಸೌತ್ ಆಫ್ರಿಕಾ ಕ್ರಿಕೆಟ್ ಟೀಂ!
ದಕ್ಷಿಣ ಆಫ್ರಿಕಾದಲ್ಲಿ ವರ್ಣಬೇಧ ನೀತಿ ಅದೆಷ್ಟರ ಮಟ್ಟಿಗೆ ಬೇರೂರಿತ್ತು ಅಂದ್ರೆ ತಂಡವನ್ನ 21 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಂದ ಬ್ಯಾನ್ ಮಾಡಲಾಗಿತ್ತು. ಅಲ್ಲಿನ ಸರ್ಕಾರದ ವರ್ಣಭೇದ ನೀತಿಯಿಂದಾಗಿ ಕ್ರಿಕೆಟ್ ಆಟಗಾರರ ಆಯ್ಕೆಗಳಲ್ಲಿ ಬಣ್ಣವನ್ನು ಆಧರಿಸಿ ತಾರತಮ್ಯ ಮಾಡಲಾಗುತ್ತಿತ್ತು. ಅಂದ್ರೆ ಬಿಳಿಯರಿಗೆ ಮಾತ್ರವೇ ಅವಕಾಶ ಇತ್ತು. ಈ ನಿಯಮವನ್ನ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮತ್ತು ಜಾಗತಿಕ ಕ್ರೀಡಾ ಸಂಘಟನೆಗಳು ಒಪ್ಪಲಿಲ್ಲ. ಹೀಗಾಗಿ 1970 ರಿಂದ 1991 ರವರೆಗೆ ಸುಮಾರು 21 ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಿಸಲ್ಪಟ್ಟಿತ್ತು. 1991 ರಲ್ಲಿ ವರ್ಣಭೇದ ನೀತಿ ಕೊನೆಗೊಂಡ ನಂತರ, ದಕ್ಷಿಣ ಆಫ್ರಿಕಾ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಂ ಬ್ಯಾಕ್ ಮಾಡಿತ್ತು. ಆ ನಂತ್ರ ತಂಡದಲ್ಲಿ ಕೋಟಾ ಆಧಾರದಲ್ಲಿಯೇ ಆಟಗಾರರನ್ನ ಸೆಲೆಕ್ಟ್ ಮಾಡಲಾಗ್ತಿದೆ. ಬಣ್ಣಗಳ ಆಧಾರದಲ್ಲಿ ನಾಲ್ಕು ವರ್ಗಗಳನ್ನ ಮಾಡಿದ್ದು ಎಲ್ಲರಿಗೂ ಇಂತಿಷ್ಟು ಅಂತಾ ಅವಕಾಶ ಕೊಡ್ಲೇಬೇಕಾಗಿದೆ. ಇದೇ ಕಾರಣಕ್ಕೆ ಟೆಂಬಾ ಬವುಮಾಗೂ ಕ್ಯಾಪ್ಟನ್ಸಿ ಒಲಿದು ಬಂದಿತ್ತು. ಹೀಗಾಗೇ ಟೆಂಬಾರನ್ನ ಕೋಟಾ ಕ್ಯಾಪ್ಟನ್ ಅಂತಾನೇ ಕರೆಯಾಲಾಗಿದೆ.
ಚೋಕರ್ಸ್ ಹಣೆಪಟ್ಟಿ ಅಳಿಸಿದ ಬವುಮಾ!
ಕ್ರಿಕೆಟ್ ಜಗತ್ತಿನಲ್ಲಿ ಸೌತ್ ಆಫ್ರಿಕಾ ತಂಡವನ್ನ ಚೋಕರ್ಸ್ ಅಂತಾನೇ ಕರೆಯುತ್ತಾರೆ. ಅದಕ್ಕೆ ಕಾರಣ ಬಿಗ್ ಟೂರ್ನಮೆಂಟ್ಗಳಲ್ಲಿ ಸೆಮೀಸ್ ಅಥವಾ ಫೈನಲ್ನಲ್ಲಿ ಸೋತು ಟ್ರೋಫಿ ವಂಚಿತರಾಗ್ತಿದ್ರು. ಆದ್ರೆ ಈ ಹಣೆಪಟ್ಟಿಯನ್ನ ಅಳಿಸಿದ್ದೇ ಟೆಂಬಾ. ವಿಶ್ವ ಟೆಸ್ಟ್ ಚಾಂಪಿಯನ್ಸ್ಶಿಪ್ ಗೆಲ್ಲೋ ಮೂಲಕ. ಕೆಪ್ಲೇರ್ ವೆಸೆಲ್ಸ್, ಹ್ಯಾನ್ಸಿ ಕ್ರೋನಿಯೇ, ಗ್ರೇಮ್ ಸ್ಮಿತ್ ಅವರಿಂದಲೇ ಸೌತ್ ಆಫ್ರಿಕಾ ತಂಡವನ್ನು ಚೋಕರ್ಸ್ ಪಟ್ಟದಿಂದ ಹೊರತರಲು ಸಾಧ್ಯವಾಗಲಿಲ್ಲ. ಅದನ್ನ ಮಾಡಿ ತೋರಿಸಿದ್ದು ಟೆಂಬಾ. ಅದೂ ಕೂಡ ಬಲಿಷ್ಠ ಆಸ್ಟ್ರೇಲಿಯಾವನ್ನ ಸೋಲಿಸಿ ಅನ್ನೋದು ಈಗ ಇತಿಹಾಸ.

ನೋಡಿರಿ

