ಪ್ರಯಾಣಿಕ ಬೋಟ್, ಸೇನಾ ನೆಲೆಯ ಮೇಲೆ ಉಗ್ರರ ದಾಳಿ – 64 ಮಂದಿ ಸಾವು

ಪ್ರಯಾಣಿಕ ಬೋಟ್, ಸೇನಾ ನೆಲೆಯ ಮೇಲೆ ಉಗ್ರರ ದಾಳಿ – 64 ಮಂದಿ ಸಾವು

ಬಮಾಕೊ: ಉತ್ತರ ಮಾಲಿಯ ನೈಜರ್‌ ನದಿಯಲ್ಲಿ ಸೇನಾ ನೆಲೆ ಹಾಗೂ ಪ್ರಯಾಣಿಕರ ಬೋಟ್‌ ಮೇಲೆ ಉಗ್ರರು ದಾಳಿ ನಡೆಸಿದ್ದು, 64 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ನೈಜರ್ ನದಿಯಲ್ಲಿನ ಟಿಂಬಕ್ಟು ಬೋಟ್ ಮತ್ತು ಉತ್ತರ ಗಾವೊ ಪ್ರದೇಶದ ಬಾಂಬಾದಲ್ಲಿ ಸೇನಾ ಸ್ಥಾನವನ್ನು ಗುರಿಯಾಗಿರಿಸಿಕೊಂಡು ಉಗ್ರರು ಎರಡು ಪ್ರತ್ಯೇಕ ದಾಳಿಗಳನ್ನು ನಡೆಸಿದ್ದಾರೆ. ಘಟನೆಯಲ್ಲಿ ಸುಮಾರು 49 ನಾಗರಿಕರು ಮತ್ತು 15 ಸೈನಿಕರು ಹುತಾತ್ಮರಾಗಿದ್ದಾರೆ. ಪ್ರತ್ಯೇಕ ದಾಳಿಯಲ್ಲಿ ಎಷ್ಟು ಮಂದಿ ಮೃತಪಟ್ಟರು ಎಂಬುವುದು ಇನ್ನೂ ತಿಳಿದು ಬಂದಿಲ್ಲ ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮತ್ತೊಂದು ಮಾರಣಾಂತಿಕ ಕಾಯಿಲೆ ಪತ್ತೆ – ಐವರನ್ನು ಬಲಿ ಪಡೆದ ಸ್ಕ್ರಬ್ ಟೈಫಸ್!

ಈ ದುಷ್ಕೃತ್ಯ ಅಲ್-ಖೈದಾಗೆ ಸಂಯೋಜಿತವಾದ ಗುಂಪಿನಿಂದ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ನದಿಯಲ್ಲಿ ಚಲಿಸುತ್ತಿದ್ದ ಬೋಟ್ ಮತ್ತು ಅದರ ಎಂಜಿನ್ ಅನ್ನು ಗುರಿಯಾಗಿರಿಸಿಕೊಂಡು ಕನಿಷ್ಟ ಮೂರು ರಾಕೆಟ್‌ಗಳಿಂದ ದಾಳಿ ನಡೆಸಲಾಗಿದೆ. ಸೈನ್ಯವು ಪ್ರಯಾಣಿಕರನ್ನು ಸ್ಥಳಾಂತರಗೊಳಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ -ಖೈದಾ ಸಂಯೋಜಿತ ಮೈತ್ರಿಕೂಟ, ಇಸ್ಲಾಂ ಮತ್ತು ಮುಸ್ಲಿಮರ ಬೆಂಬಲ ಗುಂಪು ಕಳೆದ ತಿಂಗಳು ಉತ್ತರ ಮಾಲಿಯ ಐತಿಹಾಸಿಕ ಕ್ರಾಸ್‌ರೋಡ್ ನಗರವಾದ ಟಿಂಬಕ್ಟುವನ್ನು ನಿರ್ಬಂಧಿಸುವುದಾಗಿ ಘೋಷಿಸಿದ ಬಳಿಕ ಈ ದಾಳಿ ನಡೆದಿದೆ.

suddiyaana