ಉಗಾಂಡದಲ್ಲಿ ಉಗ್ರರ ದಾಳಿ – 37 ವಿದ್ಯಾರ್ಥಿಗಳನ್ನು ಸುಟ್ಟು ಕೊಂದ ಕಿರಾತಕರು
ಇಸ್ಲಾಮಿಕ್ ಸ್ಟೇಟ್ ಉಗ್ರರು ಹಾಸ್ಟೆಲ್ ಒಂದರ ಮೇಲೆ ದಾಳಿ ನಡೆಸಿ, 37 ವಿದ್ಯಾರ್ಥಿಗಳನ್ನು ಸುಟ್ಟು ಕೊಂದಿರುವ ಭೀಕರ ಘಟನೆ ಪಶ್ಚಿಮ ಉಗಾಂಡಾದಲ್ಲಿ ನಡೆದಿದೆ. ಒಂದು ದಶಕದಲ್ಲಿ ದೇಶದಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ ಎಂದು ಸೇನೆ ಮತ್ತು ಪೊಲೀಸ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಎಂಪಾಂಡ್ವೆಯ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮಾಧ್ಯಮಿಕ ಶಾಲೆಯ ಮೇಲೆ ಈ ದಾಳಿ ನಡೆದಿದೆ. ಸೇನೆಯಿಂದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಶಾಲೆಯಲ್ಲಿ ನಿರ್ಮಾಣ ಹಂತದ ಗೋಡೆ ಕುಸಿದು ಬಾಲಕ ಸಾವು – ಗೆಳೆಯನ ಕಣ್ಣೆದುರೇ ಹೋಯ್ತು ಪ್ರಾಣ
ಉಗ್ರ ಗುಂಪುಗಳಲ್ಲಿ ಒಂದಾದ ADF, ಶಾಲೆ ಮೇಲೆ ಆಕ್ರಮಣ ನಡೆಸಿ ವಿದ್ಯಾರ್ಥಿ ನಿಲಯಗಳನ್ನು ಸುಟ್ಟು ಹಾಕಿದ್ದು ಮಾತ್ರವಲ್ಲದೆ ವಿದ್ಯಾರ್ಥಿಗಳ ಮೇಲೆ ಕತ್ತಿಯಿಂದ ದಾಳಿ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಇಲ್ಲಿಯವರೆಗೆ 37 ಮೃತದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಉಗಾಂಡ ಪೀಪಲ್ಸ್ ಡಿಫೆನ್ಸ್ ಫೋರ್ಸ್ (ಯುಪಿಡಿಎಫ್) ವಕ್ತಾರ ಫೆಲಿಕ್ಸ್ ಕುಲೈಗ್ಯೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ದಾಳಿಯಲ್ಲಿ ಎಂಟು ಜನರಿಗೆ ಗಾಯಗಳಾಗಿವೆ. ಇತರ 6 ಮಂದಿಯನ್ನು ಅಪಹರಿಸಿದ ದಾಳಿಕೋರರು DR ಕಾಂಗೋ ಗಡಿಯನ್ನು ವ್ಯಾಪಿಸಿರುವ ವಿರುಂಗಾ ರಾಷ್ಟ್ರೀಯ ಉದ್ಯಾನವನದ ಕಡೆಗೆ ಕರೆದೊಯ್ದರು ಎಂದು ಅವರು ಹೇಳಿದರು. ಅಪಹರಣಕ್ಕೊಳಗಾದ ವಿದ್ಯಾರ್ಥಿಗಳನ್ನು ರಕ್ಷಿಸುವುದಕ್ಕಾಗಿ ಯುಪಿಡಿಎಫ್ ದುಷ್ಕರ್ಮಿಗಳನ್ನು ಹಿಂಬಾಲಿಸಲು ಪ್ರಾರಂಭಿಸಿದೆ. ಸಾವಿಗೀಡಾದವರಲ್ಲಿ 25 ಮಂದಿ ಶಾಲೆಯ ವಿದ್ಯಾರ್ಥಿಗಳು ಎಂದು ದೃಢೀಕರಿಸಲಾಗಿದೆ ಎಂದು ಕಸೆಸೆಯ ರೆಸಿಡೆಂಟ್ ಕಮಿಷನರ್ ಜೋ ವಾಲುಸಿಂಬಿ ಹೇಳಿರುವುದಾಗಿ ಎಎಫ್ಪಿ ತಿಳಿಸಿದೆ. 2010ರಲ್ಲಿ ಕಂಪಾಲಾದಲ್ಲಿ ನಡೆದ ಅವಳಿ ಬಾಂಬ್ ದಾಳಿಯಲ್ಲಿ ಸೊಮಾಲಿಯಾ ಮೂಲದ ಅಲ್-ಶಬಾಬ್ ಗ್ರೂಪ್ ನಡೆಸಿದ ದಾಳಿಯಲ್ಲಿ 76 ಮಂದಿ ಸಾವನ್ನಪ್ಪಿದ ನಂತರ ಉಗಾಂಡಾದಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ.