ವಿದೇಶಿ ಕ್ರಿಕೆಟಿಗರೇ ಟಾರ್ಗೆಟ್!! ಪಾಕಿಸ್ತಾನಕ್ಕೆ ಭದ್ರತೆ ಕೊಡೋಕೆ ಆಗಲ್ವಾ?
2009ರ ಘಟನೆ ಮರುಕಳಿಸುತ್ತಾ?

ವಿಶ್ವ ಕ್ರಿಕೆಟ್ನ ಪ್ರತಿಷ್ಠಿತ ಟೂರ್ನಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಿ 8 ದಿನಗಳಾಯಿತು. ಮಹತ್ವದ ಟೂರ್ನಿಯಲ್ಲಿ ಭಾಗಿಯಾಗಿರುವ 10 ತಂಡಗಳು ಪೈಕಿ ಪಾಕ್ ಮತ್ತು ಬಾಂಗ್ಲಾ ಟೂರ್ನಿಯಿಂದ ಹೊರ ಬಿದ್ದಿವೆ. ಉಳಿದ ತಂಡಗಳು ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟು ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿವೆ. ದಿನದಿಂದ ದಿನಕ್ಕೆ ಕುತೂಹಲ ಘಟ್ಟ ತಲುಪುತ್ತಾ ಇರುವ ಟೂರ್ನಿ ಫ್ಯಾನ್ಸ್ಗಂತೂ ಭರ್ಜರಿ ಕಿಕ್ ನೀಡುತ್ತಿದೆ. ಆದ್ರೆ ಇದರ ಮಧ್ಯೆ ಆಟಗಾರರಲ್ಲಿ ಭಯ ಶುರುವಾಗಿದೆ. ದುಬೈನಲ್ಲಿರುವ ಟೀಮ್ ಇಂಡಿಯಾ ಬಿಟ್ಟು, ಉಳಿದ ತಂಡಗಳ ಆಟಗಾರರ ಎದೆಯಲ್ಲಿ ನಡುಕ ಶುರುವಾಗಿದೆ. ಅದಕ್ಕೆ ಕಾರಣ ಪಾಕ್ ಕ್ರಿಕೆಟ್ ಆಟಗಾರರಿಗೆ ಸರಿಯಾದ ಸೇಫ್ಟಿ ಕೊಡುತ್ತಿಲ್ಲ ಅನ್ನೋ ಕಾರಣಕ್ಕೆ..
ಮಾನ ಕಳೆದುಕೊಳ್ಳುವ ಭಯದಲ್ಲಿ ಪಾಕ್?
29 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ತಂಡಕ್ಕೆ ಐಸಿಸಿ ಟೂರ್ನಿ ಆಯೋಜಿಸೋ ಹಕ್ಕು ಸಿಕ್ಕಿದೆ. ಜಿದ್ದಿಗೆ ಬಿದ್ದು ಐಸಿಸಿ ಬಳಿ ಟೂರ್ನಿಯ ಆಯೋಜಕತ್ವ ಪಡೆದುಕೊಂಡು ಬಂದಿರೋ ಪಾಕ್ ಕ್ರಿಕೆಟ್ ಮಂಡಳಿ ಈಗ ಇಕ್ಕಟ್ಟಿಗೆ ಸಿಲುಕಿದೆ. ನಡೀತಾ ಇರೋ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೇಲೆ ಉಗ್ರರ ಕರಿನೆರಳು ಬಿದ್ದಿದ್ದು, ಮುಂದೇ ಏನಾಗುತ್ತಪ್ಪಾ ಅನ್ನೋ ಆತಂಕ ಶುರುವಾಗಿದೆ. ವಿದೇಶಿ ಆಟಗಾರರು ಹಾಗೂ ಫ್ಯಾನ್ಸ್ಗೆ ಟೆನ್ಶನ್ ಶುರುವಾಗಿದೆ. ಈಗಾಗಲೇ ದಿವಾಳಿ ಎದ್ದಿರುವ ಪಾಕಿಸ್ತಾನಕ್ಕೆ ಹಾಗೂ ಪಾಕ್ ಕ್ರಿಕೆಟ್ ಮಂಡಳಿಗೆ ಐಸಿಸಿಯ ಈ ಟೂರ್ನಿ ಉಸಿರಾಡುವುದಕ್ಕೆ ಅವಕಾಶ ಮಾಡಿಕೊಡುತ್ತದೆ ಎಂಬುದು ಆಯೋಜಕ ಅಭಿಪ್ರಾಯವಾಗಿತ್ತು. ಆದ್ರೆ ಫ್ಯಾನ್ಸ್ ಕೂಡ ಮೈದಾನಕ್ಕೆ ಬರುತ್ತಿಲ್ಲ. ಜೊತೆಗೆ ಭಯೋತ್ಪಾದಕರ ಭಯ ಕೂಡ ಕಾಡುತ್ತಿದೆ.
ರಚಿನ್ ತಂಬಿಕೊಂಡ ಬಳಿಕ ಉಳಿದವರಿಗೆ ಭಯ
ರಾವಲ್ಪಿಂಡಿಯಲ್ಲಿ ನಡೆದ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ಪಂದ್ಯದ ನಡುವೆ ಒಬ್ಬ ವ್ಯಕ್ತಿ ಮೈದಾನಕ್ಕೆ ನುಗ್ಗಿದ್ದ. ಭದ್ರತೆ ಭೇದಿಸಿ ಅಂಗಳಕ್ಕೆ ಬಂದ ಆತ ಬ್ಯಾಟಿಂಗ್ ನಡೆಸ್ತಿದ್ದ ಕಿವೀಸ್ನ ರಚಿನ್ ರವಿಂದ್ರನ ಬಳಿ ಹೋಗಿ ತಬ್ಬಿಕೊಂಡ. ಪಾಕಿಸ್ತಾನ ಮಾತ್ರವಲ್ಲ, ವಿಶ್ವದ ಉಳಿದ ಕಡೆಗಳಲ್ಲೂ ಪಂದ್ಯಗಳು ನಡೆಯುವ ವೇಳೆ ನೆಚ್ಚಿನ ಆಟಗಾರನನ್ನ ಕಣ್ತುಂಬಿಕೊಳ್ಳಲು, ಮುಟ್ಟಿ ಮಾತನಾಡಿಸಲು ಭದ್ರತೆಯನ್ನ ಭೇದಿಸಿ ಫ್ಯಾನ್ಸ್ ಮೈದಾನಕ್ಕೆ ನುಗ್ಗೂದು ಇತ್ತೀಚೆಗೆ ಕಾಮನ್ ಆಗ್ಬಿಟ್ಟಿದೆ. ಇದು ಪಾಕಿಸ್ತಾನದಲ್ಲೂ ಆಗಿದೆ. ಇದ್ರಲ್ಲಿ ಆತಂಕ ಪಡುವಂತದ್ದು ಏನಿದೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಹುಟ್ಟಿರಬಹದು. ಇದೇ ಆತಂಕ ಪಡೋ ವಿಚಾರ ಇಲ್ಲಿ ಇದ್ದೇ ಇದೆ. ಅಸಲಿಗೆ ಮೊನ್ನೆ ಮೈದಾನಕ್ಕೆ ನುಗ್ಗಿದವನ ಕೈಯಲ್ಲಿ ಒಂದು ಪೋಸ್ಟರ್ ಇತ್ತು. ಆ ಪೋಸ್ಟರ್ನಲ್ಲಿ ಇದ್ದಿದ್ದು ನಿಷೇಧಿತ ಇಸ್ಲಾಮಿಕ್ ಪಕ್ಷದ ಮುಖ್ಯಸ್ಥನ ಫೋಟೋ. ನಿಷೇಧಿತ ಸಂಘಟನೆಯ ಬೆಂಬಲಿಗನೊಬ್ಬ ಸಲೀಸಾಗಿ ಮೈದಾನಕ್ಕೆ ನುಗ್ಗೋದು ಅಂದ್ರೆ ಅದೇನು ಸಾಮಾನ್ಯದ ವಿಚಾರನಾ?. ಈ ಘಟನೆ ಪಾಕಿಸ್ತಾನದ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ. ಈ ಘಟನೆ ನಡೆದ ಮೇಲೆ ಉಳಿದ ಕ್ರಿಕೆಟಿಗರಿಗೆ ಭಯ ಶುರುವಾಗಿದೆ. ಚಾಂಪಿಯನ್ಸ್ ಟ್ರೋಫಿ ನಡೀತಾ ಇರೋ ನಡುವೆಯೇ ಭಯೋತ್ಪಾದನಾ ಸಂಘಟನೆಗಳಿಂದ ಬೆದರಿಕೆ ಕರೆ ಕೂಡ ಬಂದಿದೆ. ಬೆದರಿಕೆ ಕರೆ ಬಂದಿದೆ ಎಂದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಪಾಕ್ ಕ್ರಿಕೆಟ್ ಮಂಡಳಿಗೆ ಎಚ್ಚರಿಸಿದ ಬೆನ್ನಲ್ಲೆ, ನಿಷೇಧಿತ ಸಂಘಟನೆಯ ಸದಸ್ಯನೊಬ್ಬ ಮೈದಾನಕ್ಕೆ ಸಲೀಸಾಗಿ ಎಂಟ್ರಿ ಕೊಟ್ಟಿರೋದು. ಹೀಗಾಗಿಯೇ ಆತಂಕ ಹೆಚ್ಚಾಗಿರೋದು.
ವರದಿಗಳ ಪ್ರಕಾರ, ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ ಪಂದ್ಯ ವೀಕ್ಷಿಸಲು ಪಾಕಿಸ್ತಾನಕ್ಕೆ ಬಂದಿರುವ ವಿದೇಶಿ ಪ್ರಜೆಗಳನ್ನು ಕಿಡ್ನಾಪ್ ಮಾಡಲು ಪ್ಲಾನ್ ರೂಪಿಸಿದೆ. ಅವರಿಂದ ಹಣ ಸುಲಿಗೆ ಮಾಡಲು ಟಾರ್ಗೆಟ್ ಇದೆ ಎನ್ನಲಾಗಿದೆ. ಪ್ರಮುಖವಾಗಿ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಅರಬ್ನಿಂದ ಬಂದವರ ಮೇಲೆ ಉಗ್ರರ ಕಣ್ಣಿದೆ ಎನ್ನಲಾಗಿದೆ.
ಭಾರತ ಇದೇ ಕಾರಣಕ್ಕೆ ಹೋಗಿಲ್ಲ
ಭಾರತ ಮತ್ತು ಪಾಕಿಸ್ತಾನ ಶತ್ರು ರಾಷ್ಟ್ರಗಳು ಅನ್ನೋದು ಇಡೀ ವಿಶ್ವಕ್ಕೆ ಗೊತ್ತು.. ಗಡಿ ವಿಚಾರದಲ್ಲಿ ಎರಡು ದೇಶಗಳ ನಡುವೆ ಕಿರಿಕ್ ಆಗತ್ತಲೇ ಇರುತ್ತೆ.. ಪಾಕ್‌ನಿಂದ ಭಾರತಕ್ಕೆ ನುಗ್ಗುವ ಉಗ್ರರ ಹೆಣಗಳು ಗಡಿಯಲ್ಲಿ ಬೀಳುತ್ತಲೇ ಇರುತ್ತೆ. ಶೀಲಂಕಾದ ಘಟನೆ ನಡೆದ ಮೇಲೆ ಭಾರತ ಪಾಕ್ ಕಡೆ ಮುಖ ಹಾಕಿ ಕೂಡ ನೋಡಿಲ್ಲ..ಎಷ್ಟೇ ಭದ್ರತೆ ಕೊಡುತ್ತೇವೆ ಅಂದ್ರು, ಬಿಸಿಸಿಐ ಭಯೋತ್ಪಾದಕರ ದಾಳಿಯಿಂದ ಪಾಕಿಸ್ತಾನಕ್ಕೆ ಬರಲ್ಲ ಅಂತ ಹೇಳಿತ್ತು.. ಹೀಗಾಗಿಯೇ ದುಬೈನಲ್ಲಿ ಭಾರತದ ಪಂದ್ಯಗಳನ್ನ ಆಯೋಜನೆ ಮಾಡಲಾಗಿದೆ.
ಶ್ರೀಲಂಕಾ ಮೇಲೆ ನಡೆದಿತ್ತು ಭಯಾನಕ ದಾಳಿ
ಲಾಹೋರ್‌ನಲ್ಲಿ 2009ರ ಪ್ರವಾಸದ ವೇಳೆ ಶ್ರೀಲಂಕಾ ತಂಡದ ಬಸ್ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. 12 ಜನ ಬಂದೂಕುಧಾರಿಗಳು ಗಢಾಪಿ ಸ್ಟೇಡಿಯಂ ಬಳಿ ಬಸ್ ಮೇಲೆ ಗುಂಡಿನ ಸುರಿಮಳೆ ಸುರಿಸಿದರು. ಆ ಘಟನೆಯಲ್ಲಿ 8 ಜನ ಪೋಲಿಸರು ಪ್ರಾಣ ಕಳೆದುಕೊಂಡರೇ, ಆಟಗಾರರಿಗೂ ಗಾಯಗಳಾಗಿದ್ವು. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಕ್ರಿಕೆಟ್ ಆಟಗಾರರು ಪ್ರಾಣಾಪಾಯದಿಂದ ಪಾರಾಗಿದ್ರು. ಬಳಿಕ ಮೈದಾನಕ್ಕೆ ಹೆಲಿಕಾಪ್ಟರ್ ತರಿಸಿ ಅವರನ್ನ ಶ್ರೀಲಂಕಾಗೆ ಕಳಿಸಲಾಗಿತ್ತು. ಈ ಘಟನೆ ಬಳಿಕ ಪಾಕಿಸ್ತಾನದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಕ್ರಿಕೆಟ್ ಅನ್ನು ನಿಷೇಧಿಸಲಾಗಿತ್ತು. ಯಾವ ದೇಶ ಕೂಡ ಪಾಕ್ಗೆ ಪ್ರಯಾಣಿಸಲು ಮುಂದಾಗಿರಲಿಲ್ಲ. ಇತ್ತೀಚೆಗೆ ದ್ವಿಪಕ್ಷೀಯ ಸರಣಿಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದ ಪಾಕ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ಹಕ್ಕನ್ನ ಹೋರಾಡಿ ಪಡೆದುಕೊಂಡಿತ್ತು. ಇದೀಗ ಅದಕ್ಕೂ ಉಗ್ರರ ಬೆದರಿಕೆ ಬಂದಿರುವುದು ಪಾಕ್ ಕ್ರಿಕೆಟ್ ಬೋರ್ಡ್ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸೂಕ್ತ ಭದ್ರತೆ ನೀಡುವ ಭರವಸೆಯನ್ನ ನೀಡಿದ್ರೂ ಕೂಡ, ಜೀವಭಯ ಆಟಗಾರರು ಹಾಗೂ ಫ್ಯಾನ್ಸ್ನ ಕಾಡ್ತಿದೆ. ಅಲ್ಲದೇ ಸರಿಯಾಗಿ ಕಾರ್ಯ ನಿರ್ವಹಿಸದ 100 ಕ್ಕೂ ಹೆಚ್ಚು ಪೊಲೀಸರನ್ನ ಪಾಕ್ ಕೆಲಸದಿಂದ ತೆಗೆದಿದೆ.. ಹೀಗಾಗಿ ಚಾಂಪಿಯನ್ ಟ್ರೋಫಿ ಮರೆಯೋ ತನಕ ವಿದೇಶಿ ಕ್ರಿಕೆಟಿಗರು ಹಾಗೂ ಫಾನ್ಸ್ ಸ್ಟೇಡಿಯಂನಲ್ಲಿ ಭಯದಲ್ಲೇ ಕಾಲ ಕಳೆಯುವಂತಾಗಿದೆ..