ಮಹಿಳಾ ಕಾರಾಗೃಹದಲ್ಲಿ ಭೀಕರ ಹಿಂಸಾಚಾರ – 41ಕ್ಕೂ ಹೆಚ್ಚು ಮಹಿಳೆಯರ ದಾರುಣ ಅಂತ್ಯ
ಹೊರ ಜಗತ್ತಿನಂತೆಯೇ ಜೈಲಿನಲ್ಲೂ ಗುಂಪುಗಳ ನಡುವೆ ಗಲಭೆಗಳು ನಡೆಯುತ್ತದೆ. ಆದರೆ, ಸೆಂಟ್ರಲ್ ಅಮೆರಿಕದಲ್ಲಿರುವ ಹಾಂಡುರಸ್ ದೇಶದ ಮಹಿಳಾ ಕಾರಾಗೃಹವೊಂದರಲ್ಲಿ ನಡೆದ ಭಾರೀ ಹಿಂಸಾಚಾರ ಅತ್ಯಂತ ಭೀಕರವಾಗಿದೆ. ಅಲ್ಲಿನ ಜೈಲಿನಲ್ಲಿ ನಡೆದ ಹಿಂಸಾಚಾರದಲ್ಲಿ 41ಕ್ಕೂ ಹೆಚ್ಚು ಮಹಿಳೆಯರು ದಾರುಣವಾಗಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಟೈಟಾನಿಕ್ ಅವಶೇಷ ನೋಡಲು ತೆರಳಿದ್ದ ಜಲಾಂತರ್ಗಾಮಿ ನೌಕೆ ನಾಪತ್ತೆ – ರಕ್ಷಣಾ ತಂಡಗಳಿಗೆ ಸಿಕ್ಕಿತು ಮಹತ್ವದ ಸುಳಿವು!
ಹಿಂಸಾಚಾರದ ಭೀಕರತೆ ಎಷ್ಟಿತ್ತೆಂದರೆ, ಮಹಿಳಾ ಕಾರಾಗೃಹದಲ್ಲಿ 26 ಮಹಿಳಾ ಕೈದಿಗಳನ್ನು ಬೆಂಕಿ ಹಚ್ಚಿ ಸಜೀವ ದಹನ ಮಾಡಲಾಗಿದೆ. ಇನ್ನು ಉಳಿದ ಮಹಿಳೆಯರನ್ನು ಗುಂಡಿಕ್ಕಿ ಅಥವಾ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಜೈಲಿನ ಒಳಗೆ ಕೆಲವು ಪಿಸ್ತೂಲುಗಳು, ದೊಡ್ಡ ಕತ್ತಿಗಳು ಮತ್ತು ಇತರೆ ಬ್ಲೇಡ್, ಆಯುಧಗಳ ರಾಶಿ ಬಿದ್ದಿರುವ ದೃಶ್ಯವನ್ನ ಅಲ್ಲಿನ ಸರ್ಕಾರ ಬಿಡುಗಡೆ ಮಾಡಿದೆ.. ಇಲ್ಲಿ ಮತ್ತೊಂದು ಆಘಾತಕಾರಿ ವಿಚಾರ ಅಂದ್ರೆ ಭದ್ರತಾ ಅಧಿಕಾರಿಗಳಿಗೆ ಈ ಗಲಭೆ ಬಗ್ಗೆ ತಿಳಿದಿತ್ತು. ಮತ್ತು ಅವರ ಒಪ್ಪಿಗೆಯಿಂದಲೇ ಮಾರಾ ಗ್ಯಾಂಗ್ನವರು ದಾಳಿ ಮಾಡಿದ್ದಾರೆ ಎಂದು ಹಾಂಡುರಸ್ ಅಧ್ಯಕ್ಷೆ ಕ್ಸಿಯೋಮಾರಾ ಕಾಸ್ಟ್ರೋ ಹೇಳಿದ್ದಾರೆ.. ಹಾಗೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ..