ನೆದರ್‌ಲ್ಯಾಂಡ್ ನಲ್ಲಿ ಭಯಾನಕ ಹಿಂಸಾಚಾರ – ಗಲಭೆಕೋರರ ಅಟ್ಟಹಾಸಕ್ಕೆ ತತ್ತರಿಸಿದ ಹೇಗ್ ಸಿಟಿ!

ನೆದರ್‌ಲ್ಯಾಂಡ್ ನಲ್ಲಿ ಭಯಾನಕ ಹಿಂಸಾಚಾರ – ಗಲಭೆಕೋರರ ಅಟ್ಟಹಾಸಕ್ಕೆ ತತ್ತರಿಸಿದ ಹೇಗ್ ಸಿಟಿ!

ನೆದರ್ಲ್ಯಾಂಡ್ ನ ಹೇಗ್ ನಗರದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿದೆ. ಗಲಭೆ, ಹಿಂಸಾಚಾರದಿಂದಾಗಿ ಇಡೀ ಸಿಟಿ ಅಕ್ಷರಶಃ ನಲುಗಿ ಹೋಗಿದೆ. ಉದ್ರಿಕ್ತರ ಗುಂಪು ಸಿಕ್ಕ, ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿವೆ.

ಕಳೆದ ಶನಿವಾರ ರಾತ್ರಿ ಹೇಗ್‌ನಲ್ಲಿ ಆಫ್ರಿಕನ್ ದೇಶದ ಸರ್ಕಾರವನ್ನು ವಿರೋಧಿಸಿದ ಒಂದು ಗುಂಪು ಒಪೇರಾ ಹೌಸ್‌ನಲ್ಲಿ ಸಭೆ ನಡೆಸುತ್ತಿತ್ತು. ಆಗ ಗುಂಪು ಸೇರಿದ ಎರಿಟ್ರಿಯನ್ ಮೂಲದ ನಿರಾಶ್ರಿತರು ಪೊಲೀಸರ ಮೇಲೆ ದಾಳಿ ನಡೆಸಿದೆ. ಇದೀಗ ಪರಿಸ್ಥಿತಿ ಕೈಮೀರಿ ಹೋಗಿದ್ದು, ಉದ್ರಿಕ್ತರ ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆರಂಭವಾಗಲಿದೆ ಚಿರತೆ ಸಫಾರಿ! – ಯಾವಾಗಿನಿಂದ ಪ್ರಾರಂಭ?

ನೆದರ್ಲ್ಯಾಂಡ್ಸ್‌ನಲ್ಲಿ ಗಲಭೆಕೋರರು ಸಿಕ್ಕವರ ಮೇಲೆ ಅಟ್ಟಹಾಸ ಮೆರೆಯುತ್ತಿದ್ದಾರೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಷ್ಟೇ ಅಲ್ಲ ಪೊಲೀಸರ ಕಾರು, ಬಸ್‌ಗಳಿಗೆ ಬೆಂಕಿ ಹಚ್ಚಿ ಘೋಷಣೆಗಳನ್ನು ಕೂಗಿದ್ದಾರೆ. ಹೇಗ್‌ ನಗರದ ಸ್ಥಿತಿ ಸಂಪೂರ್ಣ ಕೈ ಮೀರಿ ಹೋಗಿದ್ದು, ಗಲಭೆಕೋರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಘಟನೆಗೆ ಕಾರಣವೇನು?

ಎರಿಟ್ರಿಯಾದಿಂದ ಪಲಾಯನ ಮಾಡಿದ ನಂತರ ಹತ್ತು ಸಾವಿರ ಜನರು ಯುರೋಪ್‌ನಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ನೆದರ್ಲ್ಯಾಂಡ್ಸ್‌ನಲ್ಲಿ ಆಶ್ರಯ ಪಡೆದಿರುವ ಈ ನಿರಾಶ್ರಿತರು ಈ ಗಲಭೆಗೆ ಕಾರಣ ಎನ್ನಲಾಗುತ್ತಿದೆ.

Shwetha M