ದೇಗುಲದಲ್ಲಿ ಭೀಕರ ಕಾಲ್ತುಳಿತ! – 8 ಮಹಿಳೆಯರು ಸಾವು.. ಹಲವರ ಸ್ಥಿತಿ ಗಂಭೀರ

ದೇಗುಲದಲ್ಲಿ ಭೀಕರ ಕಾಲ್ತುಳಿತ! – 8 ಮಹಿಳೆಯರು ಸಾವು.. ಹಲವರ ಸ್ಥಿತಿ ಗಂಭೀರ

ಬಿಹಾರದಲ್ಲಿ ಭೀಕರ ಕಾಲ್ತುಳಿತವೊಂದು ಸಂಭವಿಸಿದೆ. ಬಿಹಾರದ ನಳಂದ ಜಿಲ್ಲೆಯ ಶಿಟ್ಲಾ ಮಾತಾ ಮಂದಿರದಲ್ಲಿ ಕಾಲ್ತುಳಿತ ಸಂಭವಿಸಿದ್ದು, 8 ಭಕ್ತರು ಸಾವನ್ನಪ್ಪಿದ್ದಾರೆ. 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರೆಲ್ಲರೂ ಮಹಿಳೆಯರಾಗಿದ್ದಾರೆ.

ಇದನ್ನೂ ಓದಿ: ಮೇಕಪ್ ಆರ್ಟಿಸ್ಟ್​​ನ ಹಿಂದೆ ಬಿದ್ದು ಮದುವೆಯಾದ! – ವಿವಾಹವಾದ ಒಂದೇ ತಿಂಗಳಲ್ಲಿ ಯುವ ಉದ್ಯಮಿ ದುರಂತ ಅಂತ್ಯ!  

ನಳಂದ ಜಿಲ್ಲೆಯ ಬಿಹಾರ ಶರೀಫ್‌ನಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿರುವ ಮಾಘ್ರಾ ಗ್ರಾಮದಲ್ಲಿರುವ ಶೀತಲಾದೇವಿ (ಶೀತ್ಲಾಷ್ಟಮಿ) ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿದೆ.  ಇಂದು ಚೈತ್ರ ಮಾಸದ ಕೊನೆಯ ಮಂಗಳವಾರವಾದ್ದರಿಂದ, ದೇವಾಲಯದಲ್ಲಿ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿದ್ದರು. ಇದ್ರಿಂದಾಗಿ ಕಾಲ್ತುಳಿತ ಸಂಭವಿಸಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ದೇವಾಲಯದಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿಲ್ಲ. ಭಾರಿ ಜನಸಂದಣಿಯಿಂದಾಗಿ ಭಕ್ತರಿಗೆ ದೇವಸ್ಥಾನದ ಒಳಗೆ ಹೋಗಲು ಜಾಗವೂ ಇರಲಿಲ್ಲ. ಮತ್ತೊಂದ್ಕಡೆ ಬಿಸಿಲು ಹೆಚ್ಚಾಗಿತ್ತು. ಹೆಚ್ಚಿನ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದ್ದ ಕಾರಣ, ಅವರಲ್ಲಿ ಕೆಲವರಿಗೆ ಕಡಿಮೆ ರಕ್ತದೊತ್ತಡ ಕಾಣಿಸಿಕೊಂಡಿತು. ಆಂಬ್ಯುಲೆನ್ಸ್ ತುಂಬಾ ತಡವಾಗಿ ಬಂದಿತು ಎಂದು ಭಕ್ತರು ದೂರಿದ್ದಾರೆ.

Shwetha M