ಚಿಲಿ ಅರಣ್ಯದಲ್ಲಿ ಭಯಾನಕ ಕಾಡ್ಗಿಚ್ಚು – ಸಾವಿನ ಸಂಖ್ಯೆ 99ಕ್ಕೆ ಏರಿಕೆ, 1100ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಚಿಲಿ ಅರಣ್ಯದಲ್ಲಿ ಭಯಾನಕ ಕಾಡ್ಗಿಚ್ಚು – ಸಾವಿನ ಸಂಖ್ಯೆ 99ಕ್ಕೆ ಏರಿಕೆ, 1100ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ದಕ್ಷಿಣ ಅಮೆರಿಕದ ಚಿಲಿಯ ಅರಣ್ಯದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಕಾಡಿನಲ್ಲಿ ಕ್ಷಣದಿಂದ ಕ್ಷಣಕ್ಕೆ ಕಾಡ್ಗಿಚ್ಚು ವೇಗವಾಗಿ ಹರಡುತ್ತಿದೆ. ಕಾಡ್ಗಿಚ್ಚಿನಿಂದಾಗಿ ಸಾವಿನ ಸಂಖ್ಯೆ 99ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.

ಕಳೆದ ಮೂರು ದಿನಗಳಿಂದ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಯ ರೌದ್ರ ತಾಂಡವಕ್ಕೆ ಅದೆಷ್ಟೋ ಮನೆಗಳು ಸುಟ್ಟು ಭಸ್ಮವಾಗಿದೆ. ಅಗ್ನಿ ನರ್ತನಕ್ಕೆ ಇಡೀ ಅರಣ್ಯ ಸಂಪತ್ತೇ ಸುಟ್ಟು ಭಸ್ಮವಾಗಿದೆ. ಕಾಡು ಪ್ರಾಣಿಗಳು ಬೆಂಕಿಯಲ್ಲಿ ಬೆಂದು ಹೋಗಿವೆ. ಮಧ್ಯ ಚಿಲಿಯ ಅರಣ್ಯ ಪ್ರದೇಶದಲ್ಲಿ ಉಂಟಾದ ಕಾಡ್ಗಿಚ್ಚು. ನಗರ ಪ್ರದೇಶಗಳಿಗೂ ಆವರಿಸಿದೆ. ಈಗಾಗಲೇ ಬೆಂಕಿಯ ಬಲೆಯಲ್ಲಿ ಸಿಲುಕಿ ಸುಮಾರು ಒಂದು ಸಾವಿರದ ನೂರಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮವಾಗಿವೆ. ಇಡೀ ಊರಿಗೆ ಊರೇ ಸ್ಮಶಾನದಂತೆ ಭಾಸವಾಗುತ್ತಿದೆ. 99 ಮಂದಿ ಸಜೀವ ದಹನಗೊಂಡಿದ್ದಾರೆ. ಚಿಲಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಜನರು ಭಯಭೀತಗೊಂಡಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕ ಆಸ್ತಿಗೆ ನಷ್ಟ ಭರಿಸಿದ್ರೆ ಮಾತ್ರ ಇನ್ನುಮುಂದೆ ಪ್ರತಿಭಟನಾಕಾರರಿಗೆ ಜಾಮೀನು!

ಚಿಲಿ ಕಾಡಿನಲ್ಲಿ ಹಬ್ಬಿರೋ ಬೆಂಕಿಯನ್ನು ನಿಯಂತ್ರಿಸಲು ಅಲ್ಲಿನ ಸರ್ಕಾರ ಹೆಣಗಾಡುತ್ತಿದೆ. ವಾಲ್ಪಾರೈಸೊ ಪ್ರದೇಶದ ಹಲವು ಭಾಗಗಳಲ್ಲಿ ಕಪ್ಪು ಹೊಗೆಯು ಆಕಾಶವನ್ನೇ ಆವರಿಸಿಬಿಟ್ಟಿದೆ. ಅಗ್ನಿಶಾಮಕ ಸಿಬ್ಬಂದಿ, ಹೆಲಿಕಾಪ್ಟರ್‌ಗಳು ಮತ್ತು ಟ್ರಕ್‌ಗಳನ್ನು ಬಳಸಿ ಬೆಂಕಿಯನ್ನು ನಂದಿಸಲು ಹೆಣಗಾಡುತ್ತಿದ್ದಾರೆ. ಕರಾವಳಿ ಭಾಗದ ಪ್ರವಾಸಿ ನಗರವಾದ ವಿನಾ ಡೆಲ್ ಮಾರ್ ಸುತ್ತಮುತ್ತಲಿನ ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿವೆ. ಇನ್ನೂ ಬೆಂಕಿಯಲ್ಲಿ ಸಿಲುಕಿದ ಜನರನ್ನ ರಕ್ಷಿಸಲು ರಕ್ಷಣಾ ಪಡೆಗಳು ಎಂಟ್ರಿ ಕೊಟ್ಟಿವೆ. ಆದ್ರೆ, ಬೆಂಕಿ ಆವರಿಸಿರೋ ಪ್ರದೇಶಗಳನ್ನ ತಲುಪಲು ಆಗದೇ ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ.

Shwetha M