ಎರಡು ಟ್ರಕ್‌ಗಳ ಮಧ್ಯೆ ಭೀಕರ ಅಪಘಾತ – 10 ಮಂದಿ ಸ್ಥಳದಲ್ಲೇ ಸಾವು

ಎರಡು ಟ್ರಕ್‌ಗಳ ಮಧ್ಯೆ ಭೀಕರ ಅಪಘಾತ – 10 ಮಂದಿ ಸ್ಥಳದಲ್ಲೇ ಸಾವು

ಅಹಮದಾಬಾದ್: ಟ್ರಕ್‌ ಹಾಗೂ ಮಿನಿ ಟ್ರಕ್‌ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಸುಮಾರು 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಅಹಮದಾಬಾದ್‌ – ಬಗೋದ್ರಾ ಹೆದ್ದಾರಿಯಲ್ಲಿ ಸಂಭವಿಸಿದೆ.

ಚೋಟಿಲಾ ಕ್ಷೇತ್ರದ ದರ್ಶನ ಪಡೆದು ಮಿನಿ ಟ್ರಕ್‍ನಲ್ಲಿ 13 ರಂದು ಹಿಂದಿರುಗುತ್ತಿದ್ದರು. ಈ ವೇಳೆ ಟ್ರಕ್‌ ಹಾಗೂ ಮಿನಿ ಟ್ರಕ್‌ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಐವರು ಮಹಿಳೆಯರು, ಮೂವರು ಮಕ್ಕಳು ಹಾಗೂ ಇಬ್ಬರು ಪುರುಷರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಜೈಲಿನಿಂದಲೇ ಪ್ರೇಯಸಿ ಜಾಕ್ವೆಲಿನ್‌ಗೆ ಪ್ರೇಮಪತ್ರ ಬರೆದ ಸುಕೇಶ್ ಚಂದ್ರಶೇಖರ್ – ಬರ್ತ್‌ಡೇಗೆ ಲವ್‌ಲೆಟರ್ ಗಿಫ್ಟ್..!

ಚೋಟಿಲಾಗೆ ತೆರಳಿದ್ದ ಮಿನಿ ಟ್ರಕ್ ಅಹಮದಾಬಾದ್’ಗೆ ಬರುತ್ತಿತ್ತು. ಈ ವೇಳೆ ಮತ್ತೊಂದು ಟ್ರಕ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ 3 ಜನರನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿದವರು ಸುಧಾಗಾಂನ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

suddiyaana