ಜಾಮೀಯ ಮಸೀದಿ ಮುಂದೆ ಭಾರಿ ಹೈಡ್ರಾಮಾ! – ಮಸೀದಿಗೆ ನುಗ್ಗಲು ಯತ್ನಿಸಿದ ಹನುಮ ಮಾಲಾಧಾರಿಗಳು!

ಜಾಮೀಯ ಮಸೀದಿ ಮುಂದೆ ಭಾರಿ ಹೈಡ್ರಾಮಾ! – ಮಸೀದಿಗೆ ನುಗ್ಗಲು ಯತ್ನಿಸಿದ ಹನುಮ ಮಾಲಾಧಾರಿಗಳು!

ದೇಶದಾದ್ಯಂತ ವಿಜೃಂಭಣೆಯಿಂದ ಹನುಮ ಜಯಂತಿ ಆಚರಿಸಲಾಗುತ್ತಿದೆ. ಆದ್ರೀಗ ಮಂಡ್ಯ ಜಿಲ್ಲೆಯಲ್ಲಿ ಹನುಮ ಜಯಂತಿ ಆಚರಣೆ ವೇಳೆ ದೊಡ್ಡ ಹೈಡ್ರಾಮಾ ನಡೆದಿದೆ. ಶ್ರೀರಂಗ ಪಟ್ಟಣದಲ್ಲಿ ಹನುಮ ಸಂಕೀರ್ತನಾ ಯಾತ್ರೆ  ವೇಳೆ ಹನುಮ ಮಾಲಾಧಾರಿಗಳು ಜಾಮಿಯಾ ಮಸೀದಿ ಕಡೆ ನುಗ್ಗಲು ಯತ್ನಿಸಿದ್ದಾರೆ.

ಇದನ್ನೂ ಓದಿ: ಡೆವಿಲ್‌ಗೆ ಒಬ್ಬರಲ್ಲ.. ಇಬ್ಬರು ನಾಯಕಿಯರು! – ಹೊಸ ಹೀರೋಯಿನ್‌ ಯಾರು ಗೊತ್ತಾ?

ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದ ಹನುಮ ಸಂಕೀರ್ತನ ಯಾತ್ರೆ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಜಾಮೀಯ ಮಸೀದಿ ಬಳಿ ಸಂಕೀರ್ತನ ಯಾತ್ರೆ ಬರುತ್ತಿದ್ದಂತೆ ಹನುಮ ಮಾಲಾಧಾರಿಗಳು ಜಾಮೀಯ ಮಸೀದಿ ವೃತ್ತದಲ್ಲಿ ಕುಳಿತು ಹನುಮಾನ್ ಚಾಲಿಸ್ ಪಠಣ ಮಾಡಿದ್ದಾರೆ. ಇದಿಷ್ಟೇ ಅಲ್ಲದೇ ಇನ್ನು ಕೆಲವರು ಕೆಲವರು ಮಸೀದಿಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ತಳ್ಳಾಟ-ನೂಕಾಟ ನಡೆದಿದ್ದು, ಕೂಡಲೇ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.

ಸದ್ಯ, ಸಂಕೀರ್ತನ ಯಾತ್ರೆ ಸಮಾಪ್ತಿಯಾಗಿದ್ದು, ಮೂಡಲ ಬಾಗಿಲು ಆಂಜನೇಯನ ದರ್ಶನ ಪಡೆದ ಹನುಮ ಮಾಲಾಧಾರಿಗಳು, ಶ್ರೀರಂಗನಾಥ ದೇಗುಲದ ಆವರಣದಲ್ಲಿ ಮಾಲೆ ವಿಸರ್ಜನೆ ಮಾಡಿದ್ದಾರೆ. ವಿವಾದಿತ ಮಸೀದಿ ವೃತ್ತದಿಂದ ಸಂಕೀರ್ತನ ಯಾತ್ರೆ ಮುಂದೆ ಸಾಗಿದ ಹಿನ್ನೆಲೆ, ಪೊಲೀಸರು ಮತ್ತು ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿದ್ದಾರೆ.

Shwetha M