ಜೈಲಲ್ಲೇ ಡೆವಿಲ್ ಫೈಟಿಂಗ್ SCENE – ಜೊತೆಗಿದ್ದೇ ದರ್ಶನ್‌ಗೆ ಹಾಕಿದ್ರಾ ಸ್ಕೆಚ್?
ಸಹಚರರಿಗೆ ಡಿಚ್ಚಿ ಕೊಟ್ಟ D BOSS?

ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲಿನಲ್ಲಿ ಕಂಬಿ ಎಣಿಸುತ್ತಿರೋ ಡಿ ಬಾಸ್ ದರ್ಶನ್‌ಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ನಾನ್ ನಡೆದಿದ್ದೇ ದಾರಿ ನಾನ್ ಏನ್ ಮಾಡಿದ್ರೂ ಯಾರು ಕೇಳಲ್ಲ ಅಂತ ಒಬ್ಬನ ಪ್ರಾಣ ತೆಗೆದು, ತನ್ನ ಜೀವನದ ಜೊತೆ ಬೇರೆಯವರ ಜೀವನ ಹಾಳು ಮಾಡಿದ ದರ್ಶನ್ ಜೈಲಿನಲ್ಲಿ ಅಟ್ಟಹಾಸ ಮುಂದುವರಿಸಿದ್ದಾರೆ.. ಹೌದು ಜೈಲಿನಲ್ಲಿ ತನ್ನ ಜೊತೆಗಿದ್ದ, ತನ್ನದೇ ಕೇಸ್‌ನ ಆರೋಪಿಗಳ ಮೇಲೆ ದಾಸ ಮಾನಸಿಕ ಮತ್ತು ದೈಹಿಕ ಹಿಂಸೆ ನಡೆಸಿರುವುದು ಬೆಳಕಿಗೆ ಬಂದಿದೆ. ಹಾಗಿದ್ರೆ ಜೈಲಿನಲ್ಲಿ ದರ್ಶನ್ ಮಾಡಿದ್ದೇನು?, ಅನುಕುಮಾರ್ ಸಾಯ್ತಿನಿ ಅಂದಿದ್ದೇಕೆ? ಜಗ್ಗು ಡಿ ಬಾಸ್ ವಿರುದ್ಧ ತಿರುಗಿ ಬಿದ್ದಿದ್ದೇಕೆ. ದರ್ಶನ್ ಮಾನಸಿತ ಸ್ಥಿಮಿತಾ ಕಳೆದುಕೊಂಡ್ರಾ ಅನ್ನೋದ್ದನ್ನ ನೋಡೋಣ..
ಇದನ್ನೂ ಓದಿ: ಪಾಕಿಸ್ತಾನದ ಗೂಗಲ್ ಸರ್ಚಿಂಗ್‌ನಲ್ಲಿ ನಂ.1 ಸ್ಥಾನ ಪಡೆದ ಅಭಿಷೇಕ್ ಶರ್ಮಾ
ಮಾಡಬಾರದನ್ನ ಮಾಡಿ ಜೈಲಿಲ್ಲಿ ಕಂಬಿ ಎಣಿಸುತ್ತಿರೋ ದರ್ಶನ್ ಇನ್ನಾದ್ರೂ ಬದಲಾಗ್ತಾರೆ ಅಂತ ಅಂದ್ಕೊಂಡಿದ್ರು. ಡೆವಿಲ್ ಟೈಂನಲ್ಲೇ ದರ್ಶನ್ ಜೈಲಿಗೆ ಸೇರಿರುವುದು ಫ್ಯಾನ್ಸ್‌ಗೆ ಬೇಜಾರ್ ಇದೆ. ಆದ್ರೆ ಈ ಟೈಂನಲ್ಲಿ ದರ್ಶನ್ ಜೈಲಿನಲ್ಲಿ ಸೈಲೆಂಟ್ ಆಗಿ, ತನ್ನ ಸಿನಿಮಾ ಹೇಗ್ ಹೋಗ್ತಿದೆ ಅನ್ನೋದ್ದನ್ನ ತಿಳಿದುಕೊಳ್ಳುವುದು ಬಿಟ್ಟು ಜೈಲಿನಲ್ಲಿ ರೌಡಿಸಂ ಮಾಡ್ತಿದ್ದಾರೆೆ.
ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ನರಕ ದರ್ಶನ್ ಆಗುತ್ತಿದೆ. ಕಳೆದ ಸಲ ಹೋದಾಗ ಜೈಲಿನಲ್ಲಿ ದರ್ಶನ್‌ಗೆ ಎಲ್ಲಾ ಪೆಸಿಲಿಟಿ ಸಿಗುತ್ತಿದೆ. ಆದ್ರೆ ಈ ಸಲ ಏನೂ ಇಲ್ಲ.. ಚಾಪೆ, ದಿಂಬ ಏನ್ ಬೇಕಾದ್ರೂ ಕೋರ್ಟ್ ಮೊರೆ ಹೋಗಬೇಕು. ಯಾವ ಸೌಲಭ್ಯ ಕೂಡ ಸಿಗುತ್ತಿಲ್ಲ.. ದರ್ಶನ್ ಅವರೇ ಸಾಲಿನಲ್ಲಿ ನಿಂತು ತಾವೇ ಊಟ ತೆಗೆದುಕೊಂಡು ಬರಬೇಕಿದೆ. ಒಳಗಿನ ಶೌಚಾಲಯ ಕೂಡ ತಾವೇ ಕ್ಲೀನ್ ಮಾಡಬೇಕಿದೆ. ಈ ನಿಯಮಗಳಿಂದ ದರ್ಶನ್ ತತ್ತರಿಸಿ ಹೋಗಿದ್ದಾರೆ. ಡೆವಿಲ್ ಟೈಂನಲ್ಲಿ ನಾನು ಹೊರಗಿಲ್ಲ ಅನ್ನೋ ಬೇಜಾರ್ ದರ್ಶನ್‌ರನ್ನ ಮಾನಸಿಕವಾಗಿ ಕುಗ್ಗಿಸಿದ್ದಂತೆ ಕಾಣುತ್ತಿದೆ. ಹೀಗಾಗಿ ತಮ್ಮ ಸಿಟ್ಟನ್ನ ಜೈಲಿನಲ್ಲಿ ಹೊರ ಹಾಕುತ್ತಿದ್ದಾರೆ.. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ತನ್ನ ಜೊತೆಯಿದ್ದ, ತನಗೆ ಸಪೋರ್ಟ್ ಮಾಡಿದ್ದ ಸಹ ಕೈದಿಗಳ ಮೇಲೆ ಕೋಪಕೊಂಡು ಮಾನಸಿ ಮತ್ತು ದೈಹಿಕ ಹಲ್ಲೆ ಮಾಡಿದ್ದಾರಂತೆ.
ದರ್ಶನ್ ಇರುವ ಸೆಲ್‌ನಲ್ಲೇ ಅನುಕುಮಾರ್, ಜಗ್ಗ, ನಾಗರಾಜು, ಪ್ರದೋಶ್, ಲಕ್ಷ್ಮಣ್ ಇದ್ದಾರೆ. ಇವರೆಲ್ಲರೂ ರೇಣುಕಾಸ್ವಾಮಿ ಕೊಲೆ ಕೇಸ್ ಅಲ್ಲಿ ಜೈಲು ಸೇರಿದವರೇ. ನಾಗರಾಜು ಅವರನ್ನು ಹೊರತುಪಡಿಸಿ ಉಳಿದ ಆರೋಪಿಗಳಿಗೆ ದರ್ಶನ್ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎನ್ನಲಾಗಿದೆ. ಮಲಗಿರುವ ಸಹ ಕೈದಿಗಳನ್ನು ಕಾಲಿನಲ್ಲಿ ಒದ್ದು ಎಬ್ಬಿಸುವುದು, ಅವರಿಗೆ ಅವಾಚ್ಯ ಶಬ್ದಗಳಿಂದ ಬೈದಾಡುವುದು ಸೇರಿದಂತೆ ದರ್ಶನ್ ಸಹ ಕೈದಿಗಳಿಗೆ ತೊಂದರೆ ಕೊಡುತ್ತಿದ್ದಾರಂತೆ. ಇದೇ ವಿಚಾರವಾಗಿ ಜಗ್ಗ ಹಾಗೂ ದರ್ಶನ್ ಮಧ್ಯೆ ದೊಡ್ಡ ಜಗಳ ಆಗಿದೆಯಂತೆ. ಇಬ್ಬರ ಜಗಳ ಜೋರಾಗುತ್ತಿದ್ದಂತೆ ಜೈಲಧಿಕಾರಿಗಳು ಬಂದು ಜಗಳ ಬಿಡಿಸಿದ್ದಾರಂತೆ.
ಈ ಕೈದಿಗಳು ನಿಮ್ಮ ವಿಚಾರಕ್ಕೆ ನಮಗೆ ಈ ಪರಿಸ್ಥಿತಿ ಬಂದಿದೆ. ನಮಗೂ ಲಾಯರ್ ವ್ಯವಸ್ಥೆ ಮಾಡಿಸಿ ನಮ್ಮನ್ನ ಬಿಡಿಸಿ ಅಂತ ಕೇಳಿದ್ದಕ್ಕೆ ದರ್ಶನ್ ಸಿಟ್ಟು ಮಾಡಿಕೊಂಡು ಜಗಳ ಮಾಡಿದ್ದಾರೆ ಎನ್ನಲಾಗಿದೆ. ದರ್ಶನ್ ಇರುವ ಸೆಲ್‌ನಲ್ಲೇ ಇದ್ದರೆ ನಾನು ಸಾಯುತ್ತೇನೆ ಎನ್ನುತ್ತಿರೋ ಆರೋಪಿ ಅನುಕುಮಾರ್ ನನ್ನ ಚಿತ್ರದುರ್ಗ ಜೈಲಿಗೆ ಶಿಫ್ಟ್ ಮಾಡಿ ಎಂದು ಬೇಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಇರುವ ಸೆಲ್‌ಗೆ ವಿಶೇಷ ಕಾವಲು ವ್ಯವಸ್ಥೆ ಮಾಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಒಟ್ನಲ್ಲಿ ಹೊರಗಡೆ ಐಷರಾಮಿ ಜೀವನ ನಡೆಸುತ್ತಿದ್ದ ದರ್ಶನ್ ಈಗ ಜೈಲಿನಲ್ಲಿ ನಕರ ಅನುಭವಿಸುತ್ತಿದ್ದಾರೆ. ಅರ್ಡರ್ ಮಾಡಿ ಊಟ ಮಾಡುತ್ತಿದ್ದ ದಾಸ, ಈಗ ತುತ್ತು ಅನ್ನಕ್ಕೂ ಅಂಗಲಾಚುವಂತೆ ಆಗಿದೆ. ಸಿನಿಮಾ ರೀಲಿಸ್ ಆದಾಗ ಫ್ಯಾನ್ಸ್‌ಗಳ ಮಧ್ಯೆ ಹೋಗಿ ಹೆಮ್ಮೆ ಪಡುತ್ತಿದ್ದ ಕರಿಯಾ ಈಗ ಫ್ಯಾನ್ಸ್ ಮುಖ ನೋಡದಂತೆ ಆಗಿದೆ. ತನ್ನ ಜೀವನ ಹೀಗಾಯ್ತು ಅನ್ನೋ ಚಿಂತೆ ದರ್ಶನ್‌ರನ್ನ ಬಿಟ್ಟು ಬಿಡದೆ ಕಾಡುತ್ತಿದೆ. ಹೀಗಾಗಿ ದರ್ಶನ್ ಆ ಸಿಟ್ಟನ್ನ ಸಹ ಕೈದಿಗಳ ಮೇಲೆ ತೋರಿಸುತ್ತಿದ್ದಾರೆ ಅನ್ಸುತ್ತೆ.

ನೋಡಿರಿ

