T-20 ಕ್ರಿಕೆಟ್ ಗೆ ಮೇಜರ್ ಸರ್ಜರಿ – IP ಇರಲ್ಲ.. 4 ಓವರ್ ಪವರ್ ಪ್ಲೇ?
2027ರ IPL ಕಂಪ್ಲೀಟ್ ಬದಲಾಗುತ್ತಾ?

T-20 ಕ್ರಿಕೆಟ್ ಗೆ ಮೇಜರ್ ಸರ್ಜರಿ – IP ಇರಲ್ಲ.. 4 ಓವರ್ ಪವರ್ ಪ್ಲೇ?2027ರ IPL ಕಂಪ್ಲೀಟ್ ಬದಲಾಗುತ್ತಾ?

ಐಪಿಎಲ್ ಮುಗೀತು.. ಬೆಂಗಳೂರು ವಿನ್ನರ್ ಆಗಿದ್ದೂ ಆಯ್ತು. ಇನ್ನೇನಿದ್ರೂ ಟೀಂ ಇಂಡಿಯಾ ಜರ್ನಿ ಮತ್ತೆ ಸ್ಟಾರ್ಟ್ ಆಗುತ್ತೆ. ಆದ್ರೆ ಐಪಿಎಲ್ ಮುಗಿಯೋ ಹೊತ್ತಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿರೋ ಮಾತುಗಳು ಹಲ್​ಚಲ್ ಎಬ್ಬಿಸಿವೆ. ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ. ಮುಂದಿನ ಐಪಿಎಲ್​ ವೇಳೆಗೆ ಮೇಜರ್ ಸರ್ಜರಿಯಾಗುತ್ತಾ ಅನ್ನೋ ಚರ್ಚೆ ಶುರುವಾಗಿದೆ.

ಇದನ್ನೂ ಓದಿ : RCB ಹೀರೋ ಟಿಮ್ ಡೇವಿಡ್‌ಗೆ ನಿಷೇಧ- ವಿಚಾರಣೆ ಬಳಿಕ ಶಿಕ್ಷೆ ನೀಡಿದ ಬಿಸಿಸಿಐ

ಟಿ-20 ಫಾರ್ಮೆಟ್ ಅಂದ್ರೇನೆ ಈಗ ಹೊಡಿಬಡಿ ಗೇಮ್ ಆಗಿದೆ. ಸಿಂಗಲ್ಸ್, ಡಬಲ್ಸ್ ಅನ್ನೋದು ಲೆಕ್ಕಕ್ಕೇ ಇಲ್ಲ. ಹೊಡೆದ್ರೆ ಸಿಕ್ಸ್ ಇಲ್ಲ ಫೋರ್. ಈ ಫಾರ್ಮೆಟ್​ನಲ್ಲಿ ಅಭಿಷೇಕ್ ಶರ್ಮಾನೇ ಡೇಂಜರಸ್ ಅನ್ಕೊಳ್ತಿದ್ರು. ಆದ್ರೆ ಈಗ ವೈಭವ್ ಸೂರ್ಯವಂಶಿ ಕ್ರಿಕೆಟ್ ಜಗತ್ತೇ ಸ್ಟನ್ ಆಗುವಂತೆ ಸಿಡೀತಿದ್ದಾರೆ. ಬೌಲರ್​ಗಳಿಗೇ ತಮ್ಮ ಸ್ಕಿಲ್ ಮೇಲೆ ಡೌಟ್ಸ್ ಶುರುವಾಗೋ ಥರ ಬ್ಯಾಟಿಂಗ್ ಮಾಡಿದ್ದಾರೆ. 2026ರ ಸೀಸನ್​ನಲ್ಲಿ ಐದೈದು ಪ್ರಶಸ್ತಿ ಬಾಚಿಕೊಂಡಿದ್ದಾರೆ.  70+ ಸಿಕ್ಸಸ್​.. 700+ ರನ್ಸ್ ಸ್ಕೋರರ್ಸ್.. 200+ ರನ್ಸ್ ಟಾರ್ಗೆಟ್.. 250+ ರನ್ಸ್ ಚೇಸಿಂಗ್.. ಅಬ್ಬಬ್ಬಾ ಈ ಸೀಸನ್​ನಲ್ಲಿ ಬ್ಯಾಟರ್​ಗಳ ಹಾವಳಿ ಮುಂದೆ ಬೌಲರ್ಸ್ ಅಕ್ಷರಶಃ ಮಂಕಾಗಿದ್ದಾರೆ. ಆದ್ರೆ ಕ್ರಿಕೆಟ್​ನಲ್ಲಿ ಈ ಇಂಬ್ಯಾಲೆನ್ಸ್ ಬಗ್ಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಆತಂಕ ವ್ಯಕ್ತಪಡಿಸಿದ್ದಾರೆ. ಇದು ಹೀಗೆ ಕಂಟಿನ್ಯೂ ಆದ್ರೆ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ ಬಗ್ಗೆ ಸಚಿನ್ ಅಸಮಾಧಾನ!

ಈಗಾಗ್ಲೇ ಐಪಿಎಲ್​ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ತಂಡಗಳ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೆಜೆಂಡರಿ ಪ್ಲೇಯರ್ಸ್ ಕೂಡ ಬೇಡ ಅಂದಿದ್ದಾರೆ. ಅದಕ್ಕೆ ಕಾರಣಗಳು ಸಾಕಷ್ಟಿವೆ. ಒಂದ್ಕಡೆ ಆಲೌಂಡರ್ಸ್​ಗೆ ಇಂಪಾರ್ಟೆನ್ಸ್ ಸಿಕ್ತಿಲ್ಲ, ಹಾಗೇ ಬೌಲರ್ಸ್ ವ್ಯಾಲ್ಯೂ ಕಮ್ಮಿ ಆಗ್ತಿದೆ, ಟೀಂ ಸಮತೋಲನ ಇಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈ ನಿಮಯ ಇಲ್ಲ ಅನ್ನೋ ಅವ್ರ ವಿರೋಧಕ್ಕೆ ಕಾರಣ. ಈಗ ಸಚಿನ್ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.  2023ರಿಂದ ಐಪಿಎಲ್​ನಲ್ಲಿ ಜಾರಿಯಾಗಿರೋ ಈ ನಿಯಮದ ಬಗ್ಗೆ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಮಾತನಾಡಿದ್ದಾರೆ. ಹಾಗೇ ಮೂರು ಸಲಹೆಗಳನ್ನೂ ನೀಡಿದ್ದಾರೆ. ಏನದು ಸಲಹೆ ಅಂದ್ರೆ..

ಪವರ್ ಪ್ಲೇ 4 ಓವರ್ ಸಾಕು!

ಟಿ20 ಕ್ರಿಕೆಟ್ ಮಾದರಿಯಲ್ಲಿ ಆಡಲು ಕೇವಲ 20 ಓವರ್‌ಗಳು ಮಾತ್ರ ಸಿಗುತ್ತವೆ. ಅಂತಹದರಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮದಲ್ಲಿ ಒಬ್ಬ ಹೆಚ್ಚುವರಿ ಬ್ಯಾಟರ್‌ಗೆ ಅವಕಾಶ ಕೊಡಲಾಗುತ್ತಿದೆ. ಈ ಮಾದರಿಯಲ್ಲಿ ಬೌಲರ್‌ಗಳ ಮುಂದೆ ಕಠಿಣ ಸವಾಲು ಇದೆ. ಅದರ ಮೇಲೆ ಈ ನಿಯಮವು ಮತ್ತಷ್ಟು ಹೊರೆ ಹಾಕುತ್ತಿದೆ. ಇದು ಅಸಮತೋಲನಗೊಳಿಸುತ್ತಿದೆ. ಎರಡನೆಯದು ಬೌಲರ್‌ಗಳಿಗೆ ತಲಾ ನಾಲ್ಕು ಓವ‌ರ್ ಹಾಕುವ ನಿಯಮವನ್ನು ಪರಿಷ್ಕರಿಸಬೇಕು. ಪ್ರತಿ ಬೌಲರ್‌ಗೆ ಪಂದ್ಯವೊಂದಕ್ಕೆ ತಲಾ ಐದು ಓವ‌ರ್ ಹಾಕುವ ಅವಕಾಶ ನೀಡಬೇಕು. ಮೂರನೆಯದು ಪವರ್‌ಪ್ಲೇ ನಿಯಮವನ್ನು ಬದಲಾಯಿಸಬೇಕು. ಅದನ್ನು ಎರಡು ಭಾಗಗಳಾಗಿ ವಿಭಜಿಸಬೇಕು. ಬ್ಯಾಟಿಂಗ್ ಮಾಡುವ ತಂಡಕ್ಕೆ 4 ಓವರ್‌ಗಳ ಪವರ್‌ಪ್ಲೇ ಮತ್ತು ಬೌಲಿಂಗ್ ಮಾಡುವವರಿಗೆ ಎರಡು ಓವರ್‌ ಪವರ್‌ಪ್ಲೇ ಪಡೆಯುವ ಅವಕಾಶ ನೀಡಬೇಕು. ಬೌಲಿಂಗ್ ಕಡೆಯ ಪವರ್‌ಪ್ಲೇ ಇದ್ದಾಗ 30 ಯಾರ್ಡ್ ವೃತ್ತದ ಹೊರಗೆ ಒಬ್ಬ ಹೆಚ್ಚುವರಿ ಫೀಲ್ಡ‌ರ್ ನಿಯೋಜನೆಗೆ ಅವಕಾಶವಿರಬೇಕು.

                   ಸಚಿನ್ ತೆಂಡೂಲ್ಕರ್,  ಮಾಜಿ ಕ್ರಿಕೆಟಿಗ

ಸಚಿನ್ ತೆಂಡೂಲ್ಕರ್ ಹೇಳಿರುವ ಇದೇ ಮಾತುಗಳೇ ಕ್ರಿಕೆಟ್ ಲೋಕದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿವೆ. ನಿಜ ಹೇಳಬೇಕು ಎಂದರೇ, ಇಂಪ್ಯಾಕ್ಟ್ ಪ್ಲೇಯರ್ ನಿಯಮ ಬಂದ ಬಳಿಕ ಐಪಿಎಲ್ ನಲ್ಲಿ 250 ಪ್ಲಸ್ ಸ್ಕೋರ್ ಮಾಡೋದು ಕಾಮನ್ ಆಗೋಗಿದೆ. 8ನೇ ಕ್ರಮಾಂಕದಲ್ಲಿಯೂ ಬ್ಯಾಟರ್ ಬಂದು ಸಿಕ್ಸರ್ ಬಾರಿಸಿ ಪಂದ್ಯದ ದಿಕ್ಕನ್ನೇ ಬದಲಾಯಿಸ್ತಿದ್ದಾರೆ. ಇದು ಬೌಲರ್​ಗಳ ಮೇಲೆ ತುಂಬಾ ಒತ್ತಡ ಉಂಟು ಮಾಡ್ತಿದೆ. ಸಚಿನ್ ಸಜೇಷನ್​ನಂತೆ ಓರ್ವ ಬೌಲರ್ಗೆ ಐದು ಓವರ್ ಹಾಕಲು ಅವಕಾಶ ನೀಡಿದರೆ ತಂಡದ ಪ್ರಮುಖ ಬೌಲರ್ ಓರ್ವನನ್ನು ಡೆತ್ ಓವರ್ ಗಳಲ್ಲಿ ಅಥವಾ ಪವರ್ ಪ್ಲೇ ನಲ್ಲಿ ಮತ್ತಷ್ಟು ಸಮರ್ಥವಾಗಿ ಬಳಸಿಕೊಳ್ಳಬಹುದು. ಅದೇ ರೀತಿ ಪವರ್ ಪ್ಲೇ ಅನ್ನು ಇಬ್ಭಾಗ ಮಾಡುವುದರಿಂದ ಕ್ಯಾಪ್ಟನ್ ಗಳಿಗೆ ಹೊಸ ತಂತ್ರ ಮಾಡಿಕೊಳ್ಳಲು ಅವಕಾಶ ಸಿಗುತ್ತದೆ. ಇದು ಕೇವಲ ಬೌಂಡರಿ, ಸಿಕ್ಸರ್ ಗಳೊಂದಿಗೆ ಒನ್ ಸೈಡ್ ಗೇಮ್ ಆಗದಂತೆ ಬ್ಯಾಟಿಂಗ್ ಮತ್ತು ಬೌಲರ್ ಇಬ್ಬರೂ ಕೂಡ ಗೇಮ್ ಚೇಂಜರ್ ಆಗುವಂತೆ ಮಾಡುತ್ತೆ. ಸೋ ಇಲ್ಲಿ ಸಚಿನ್ ಬರೀ ಬ್ಯಾಟರ್​ಗಳನ್ನೇ ಫೋಕಸ್ ಮಾಡಿ ಅವ್ರಿಗೇ ಇಂಪಾರ್ಟೆನ್ಸ್ ಕೊಡೋ ಬದಲು ಬೌಲರ್​ಗಳಿಗೂ ಸಮಾನ ಅವಕಾಶ ಸಿಗ್ಬೇಕು ಅನ್ನೋದು ಅವರ ಆಶಯ.

Shantha Kumari

Leave a Reply

Your email address will not be published. Required fields are marked *