ಗಿಲ್‌ ಗೆ ಕೈ ಕೊಟ್ಟ ಸಾರಾ.. ಬಾಲಿವುಡ್‌ ನಟನೊಂದಿಗೆ ಕುಚ್‌ ಕುಚ್!‌ – ತೆಂಡೂಲ್ಕರ್‌ ಅಳಿಯ ಈ ಹೀರೋ?

ಗಿಲ್‌ ಗೆ ಕೈ ಕೊಟ್ಟ ಸಾರಾ.. ಬಾಲಿವುಡ್‌ ನಟನೊಂದಿಗೆ ಕುಚ್‌ ಕುಚ್!‌ – ತೆಂಡೂಲ್ಕರ್‌ ಅಳಿಯ ಈ ಹೀರೋ?

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರು ಸಚಿನ್‌ ತೆಂಡೂಲ್ಕರ್‌ ಪುತ್ರಿ ಸಾರಾ ತೆಂಡೂಲ್ಕರ್‌.. ಸದ್ಯ ಈಕೆ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿರೋದು ನಿಮ್ಗೆಲ್ಲಾ ಗೊತ್ತೇ ಇದೆ. ಶುಭ್‌ಮನ್ ಗಿಲ್ ಮತ್ತು ಸಾರಾ ಜೋಡಿ ಹಕ್ಕಿಗಳು ಎನ್ನುವ ಮಾತು ಇಂದು ನಿನ್ನೆಯದಲ್ಲ. ಆದ್ರೆ ಇದೀಗ ಹೊಸ ಸುದ್ದಿಯೊಂದು ಹಲ್‌ ಚಲ್‌ ಸೃಷ್ಠಿಸಿದೆ. ಸರಾ ಡೇಟಿಂಗ್‌ ನಡೆಸ್ತಿರೋದು ಶುಬ್ಮನ್‌ ಗಿಲ್‌ ಜೊತೆ ಅಲ್ವಂತೆ.. ಸಾರಾ ಬಾಲಿವುಡ್‌ ನಟನೊಂದಿಗೆ ಡೇಟಿಂಗ್‌ ನಡೆಸ್ತಿದ್ದಾರೆ ಅನ್ನೋ ಮಾತು ಕೇಳಿಬಂದಿದೆ.

ಸಚಿನ್‌ ತೆಂಡೂಲ್ಕರ್‌ ಪುತ್ರಿ ಸಾರಾ ತೆಂಡೂಲ್ಕರ್‌ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ.. ಬಾಲಿವುಡ್ ನಟಿಯಾಗದಿದ್ರು ಯಾವ ಹೀರೋಯಿನ್​ ಗಳಿಗೂ ಕಡಿಮೆಯಿಲ್ಲ.. ಅವ್ರ ಲುಕ್‌, ಸ್ಟೈಲ್‌ ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಇದೀಗ ತೆಂಡೂಲ್ಕರ್‌ ಮಗಳು ಪ್ರೀತಿಯಲ್ಲಿ ಬಿದ್ರಾ ಅನ್ನೋ ಕುತೂಹಲ ಫ್ಯಾನ್ಸ್‌ ನ ಕಾಡ್ತಿದೆ. ಹೌದು, ಶುಬ್ಮನ್‌ ಗಿಲ್‌ ಹಾಗೂ ಸಾರಾ ತೆಂಡೂಲ್ಕರ್‌ ಡೇಟಿಂಗ್‌ ನಡೆಸ್ತಿದ್ದಾರೆ ಅನ್ನೋ ಗಾಸಿಪ್‌ ಕೆಲ ವರ್ಷಗಳಿಂದ ಕೇಳಿ ಬರ್ತಾನೆ ಇತ್ತು. ಇದಕ್ಕೆ ಪೂರಕವಾಗಿ ಇವರಿಬ್ರುರು ಆಗಾಗ ಕ್ಯಾಮರಾ ಕಣ್ಣಿಗೂ ಕಾಣಿಸಿಕೊಳ್ತಿದ್ರು.. ಹೀಗಾಗಿ ಇವರಿಬ್ರ ಮಧ್ಯೆ ಸಮಂಥಿಂಗ್‌ ಸಮಂಥಿಗ್‌ ನಡಿತಾ ಇದೆ ಅಂತಾ ಫ್ಯಾನ್‌ ಹೇಳ್ತಾ ಇದ್ರು.. ಕೆಲ ಫ್ಯಾನ್ಸ್‌ ಅಂತೂ ತೆಂಡೂಲ್ಕರ್‌ ಅಳಿಯ ಈತನೇ ಅಂತಾ ಹೇಳಿದ್ರು.. ಆದ್ರೆ ಗಿಲ್‌ ನಾನು ಮೂರು ವರ್ಷಗಳಿಂದ ಒಂಟಿಯಾಗಿದ್ದೇನೆ ಎಂದು ಹೇಳೋ ಮೂಲಕ ಎಲ್ಲಾ ಗಾಸಿಪ್‌ ಗೆ ಬ್ರೇಕ್‌ ಹಾಕಿದ್ದಾರೆ. ಆದ್ರೀಗ ಸಾರಾ ಹೆಸರು ಸ್ಟಾರ್ ಹೀರೋ ಜೊತೆ ತಳುಕು ಹಾಕಿಕೊಂಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.

ಸಾರಾ ಹಾಗೂ ಬಾಲಿವುಟ್‌ ನಟ ಸಿದ್ದಾಂತ್ ಚತುರ್ವೇದಿ ಡೇಟಿಂಗ್‌ ನಡೆಸ್ತಿದ್ದಾರೆ ಎಂಬ ಸುದ್ದಿ ಈ ಜೋರಾಗಿ ಹಬ್ತಾ ಇದೆ. ಸಾರಾ ಹಾಗೂ ಸಿದ್ದಾಂತ್ ಕೆಲವು ಕಡೆಗಳಲ್ಲಿ ಸುತ್ತಾಡಿದ್ದಾರೆ ಎನ್ನಲಾಗುತ್ತಿದೆ. ಇವರ ಮಧ್ಯೆ ಪ್ರೀತಿ ಮೂಡಿದೆ. ಕುಟುಂಬದ ಒಪ್ಪಿಗೆ ಪಡೆದು ಮದುವೆ ಆಗ್ತಾರೆ ಎಂದು ಹೇಳಲಾಗ್ತಿದೆ. ಆದರೆ, ಈ ಸುದ್ದಿ ನಿಜಾನಾ ಅಥವಾ ಬರೀ ಗಾಸಿಪ್‌ ಗೆ ಅಷ್ಟೇ ಸೀಮಿತನಾ ಅನ್ನೋದು ಇನ್ನೂ ಕನ್ಪರ್ಮ್‌ ಆಗಿಲ್ಲ.  ಈ ಬಗ್ಗೆ ಸಾರಾ ಆಗಲಿ, ಸಿದ್ದಾಂತ್ ಆಗಲಿ ಬಾಯ್ಬಿಟ್ಟಿಲ್ಲ. ಈ ವಿಚಾರದಲ್ಲಿ ಅವರು ಮೌನ ತಾಳಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡ್ತಾರಾ ಅಂತಾ ಕಾದುನೋಡ್ಬೇಕು.

ಅಂದ್ಹಾಗೆ ಸಿದ್ದಾಂತ್ 2019ರ ‘ಗಲ್ಲಿ ಬಾಯ್’ ಚಿತ್ರದ ಮೂಲಕ ಜನಪ್ರಿಯತೆ ಪಡೆದರು. ಅದಕ್ಕೂ ಮೊದಲು ‘ಇನ್​ಸೈಡ್ ಎಡ್ಜ್’ ಹೆಸರಿನ ವೆಬ್ ಸೀರಿಸ್​ನಲ್ಲಿ ಅವರು ನಟಿಸಿದ್ದರು. 2022ರಲ್ಲಿ ಅವರು ನಟಿಸಿದ ಗೆಹರಾಯಿಯಾ ಸಿನಿಮಾ ರಿಲೀಸ್ ಆಗಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಈಗ ‘ಧಡಕ್ 2’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಈ ಮೊದಲು ಸಿದ್ಧಾಂತ್ ಹೆಸರು ಕೂಡ ಚರ್ಚೆಯಲ್ಲಿ ಇತ್ತು. ಅಮಿತಾಭ್ ಬಚ್ಚನ್ ಮೊಮ್ಮಗಳು ನಂದಾ ನವೇಲಿ ಜೊತೆ ಅವರು ಸುತ್ತಾಟ ನಡೆಸುತ್ತಿದ್ದರು ಎನ್ನುವ ಗಾಸಿಪ್ ಬಾಲಿವುಡ್ ಅಂಗಳದಲ್ಲಿ ಇತ್ತು. ಇದೀಗ ಸಾರಾ ಹೆಸರು ಸಿದ್ಧಾಂತ್ ಜೊತೆ ತಳುಕು ಹಾಕಿಕೊಂಡಿದೆ.

Shwetha M

Leave a Reply

Your email address will not be published. Required fields are marked *