ಮಾಸ್ಟರ್ ಬ್ಲಾಸ್ಟರ್ 50ನೇ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ – ವಾಂಖೆಡೆಯಲ್ಲಿ ಕ್ರಿಕೆಟ್ ದೇವರ ಪ್ರತಿಮೆ

ಮಾಸ್ಟರ್ ಬ್ಲಾಸ್ಟರ್ 50ನೇ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ – ವಾಂಖೆಡೆಯಲ್ಲಿ ಕ್ರಿಕೆಟ್ ದೇವರ ಪ್ರತಿಮೆ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಏಪ್ರಿಲ್ 24ಕ್ಕೆ 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಭಾರತರತ್ನ ತೆಂಡೂಲ್ಕರ್​​ಗೆ ಮುಂಬೈ ಕ್ರಿಕೆಟ್​ ಅಸೋಸಿಯೇಷನ್ ಸರ್​ಪ್ರೈಸ್ ಕೊಡೋಕೆ ನಿರ್ಧರಿಸಿದೆ. ಮುಂಬೈನಲ್ಲಿರುವ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ಸಚಿನ್​​ ತೆಂಡೂಲ್ಕರ್ ಪ್ರತಿಮೆಯನ್ನ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಸ್ಟೇಡಿಯಂನ ಒಳ ಭಾಗದಲ್ಲಿ ಸಚಿನ್ ಪ್ರತಿಮೆಯನ್ನ ಸ್ಥಾಪಿಸಲಾಗುತ್ತದೆ.

ಇದನ್ನೂ ಓದಿ:  ರಿಷಬ್ ಪಂತ್ ರೀ ಎಂಟ್ರಿ ಯಾವಾಗ ?- ಸೌರವ್ ಗಂಗೂಲಿ ಉತ್ತರ ಕೇಳಿ ಫ್ಯಾನ್ಸ್ ಶಾಕ್..!

ಎಲ್ಲವೂ ಅಂದುಕೊಂಡಂತೆ ಆದಲ್ಲಿ ಏಪ್ರಿಲ್​ 24ರಂದು ಸಚಿನ್​ 50ನೇ ಹುಟ್ಟುಹಬ್ಬದಂದೇ ಪ್ರತಿಮೆ ಅನಾವರಣ ಮಾಡುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಈ ವರ್ಷದ ಅಂತ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿ ವೇಳೆ ಪ್ರತಿಮೆ ಅನಾವರಣ ಮಾಡಬಹುದು. 2011ರಲ್ಲಿ ವಾಂಖಡೆ ಸ್ಟೇಡಿಯಂನಲ್ಲೇ ಟೀಂ ಇಂಡಿಯಾ ಜೊತೆ ಸಚಿನ್ ವಿಶ್ವಕಪ್ ಎತ್ತಿ ಹಿಡಿದಿದ್ರು. ಬಳಿಕ 2013ರಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನ ಕೂಡ ವಾಂಖೆಡೆಯಲ್ಲೇ ಆಡಿದ್ರು. ಭಾರತೀಯ ಕ್ರಿಕೆಟ್ ಮತ್ತು ಮುಂಬೈ ಕ್ರಿಕೆಟ್​ಗೆ ನೀಡಿದ ಕೊಡುಗೆಯನ್ನ ಪರಿಗಣಿಸಿ ತವರು ಕ್ರೀಡಾಂಗಣದಲ್ಲಿ ಕ್ರಿಕೆಟ್ ದೇವರ ಪ್ರತಿಮೆ ಸ್ಥಾಪನೆ ಮಾಡಲಾಗುತ್ತಿದೆ. ಏಪ್ರಿಲ್ 24, 1973ರಂದು ಮುಂಬೈನಲ್ಲಿ ಜನಿಸಿದ ಸಚಿನ್ 1989ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಟೆಸ್ಟ್, ಏಕದಿನ ಮತ್ತು ಟಿ20ಯಲ್ಲಿ ಒಟ್ಟು 664 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಸಚಿನ್ 34,357 ರನ್ ಗಳಿಸಿದ್ದಾರೆ. ಇದು 100 ಶತಕಗಳನ್ನು ಬಾರಿಸಿದ್ದಾರೆ.

 

suddiyaana