ಮೆಟ್ರೋ ಮಾರ್ಗದಲ್ಲಿ ಮಳೆನೀರು ಕೊಯ್ಲು ಅನುಷ್ಠಾನಕ್ಕಾಗಿ ಟೆಂಡರ್ ಆಹ್ವಾನ

ಮೆಟ್ರೋ ಮಾರ್ಗದಲ್ಲಿ ಮಳೆನೀರು ಕೊಯ್ಲು ಅನುಷ್ಠಾನಕ್ಕಾಗಿ ಟೆಂಡರ್ ಆಹ್ವಾನ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕುಡಿಯೋಕು ನೀರಿಲ್ಲ. ತೊಳೆಯೋಕು ನೀರಿಲ್ಲ ಅನ್ನುವ ಪರಿಸ್ಥಿತಿ ಎದುರಾಗಿದೆ. ನಗರದ ಹಲವೆಡೆ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಇದೀಗ ಮಳೆ ನೀರನ್ನು ಭೂಮಿಗೆ ಹರಿಸಿ ಅಂತರ್ಜಲ ಹೆಚ್ಚಿಸಲು BMRLC ಮುಂದಾಗಿದೆ. ಇದಕ್ಕಾಗಿ ಟೆಂಡರ್ ಆಹ್ವಾನಿಸಿದೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾವೇರಿ ನೀರು ಸರಬರಾಜು ಆದರೂ, ಅಂತರ್ಜಲ ಕುಸಿತದಿಂದಲೂ ಹಲವೆಡೆ ನೀರಿನ ಸಮಸ್ಯೆ ಉದ್ಭವಿಸುತ್ತಿದೆ. ಬೆಂಗಳೂರಿನಲ್ಲಿ ಸುಮಾರು 73 ಕಿಲೋ ಮೀಟರ್ ಜಾಲ ಹೊಂದಿರುವ ನಮ್ಮ ಮೆಟ್ರೋ ಒಂದೆರಡು ಕಡೆಗಳಲ್ಲಿ ಬಿಟ್ಟರೆ ಉಳಿದೆಲ್ಲು ಮಳೆ ನೀರು ಕೊಯ್ಲು ಅಳವಡಿಕೆ ಮಾಡಿಕೊಂಡಿಲ್ಲ. ಹೀಗಾಗಿ ಮಳೆ ನೀರು ಕೊಯ್ಲು ಸಾಮರ್ಥ್ಯ ಹೆಚ್ಚಳಕ್ಕೆ ಮುಂದಾಗಿದೆ. ಇದೀಗ ಮಳೆ ನೀರನ್ನು ಭೂಮಿಗೆ ಹರಿಸಿ ಅಂತರ್ಜಲ ಹೆಚ್ಚಿಸಲು ಬಿಎಂಆರ್‌ಸಿಎಲ್‌ ಮುಂದಾಗಿದೆ. ಈ ಸಂಬಂಧ ಮಳೆನೀರು ಕೊಯ್ಲು ಜಾರಿಗೆ ತರಲು ಯೋಜನೆ ಅನುಷ್ಠಾನ ಸಂಬಂಧ 65 ಕೋಟಿ ರೂಪಾಯಿ ಮೊತ್ತದ ಟೆಂಡರ್ ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಎಲ್ಲಿ ಹಳ್ಳಿ ಇದೆಯೋ ಅಲ್ಲಿ ಬಾರ್​.. ಬಡವರಿಗೆ ಉಚಿತ ವಿಸ್ಕಿ – ವಿಚಿತ್ರ ಆಶ್ವಾಸನೆ ನೀಡಿದ ಲೋಕಸಭಾ ಚುನಾವಣಾ ಅಭ್ಯರ್ಥಿ

ಬೆಂಗಳೂರು ಮೆಟ್ರೋ ರೈಲು ನಿಗಮವು ಹಾಲಿ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಈ ಮುಂದಿನ ದಿನಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಜಾರಿಗೆ ತರಲಿದೆ. ಈ ಮೊದಲು 2012ರಲ್ಲಿ ಬೈಯಪ್ಪನಹಳ್ಳಿ ಮತ್ತು ಮಹಾತ್ಮಾಗಾಂಧಿ ರಸ್ತೆ ಮಧ್ಯೆ ಈ ಪದ್ಧತಿ ಜಾರಿ ಆಗಿತ್ತು. ಇಲ್ಲಿ ಮೆಟ್ರೋ ಮಾರ್ಗದ ಮೇಲೆ ಬೀಳುವ ಮಳೆ ನೀರು ಕಾಂಕ್ರೀಟ್ ಪಿಲ್ಲರ್ ಒಳಗೆ ಅಳಡಿಕೆಯಾದ ಪೈಪಿನೊಳಗೆ ಹಾದು ಇಂಗುಗುಂಡಿಗೆ ಹೋಗುತ್ತದೆ. ಇಲ್ಲಿ ಮೂರು ಮೀಟರ್ ಸುತ್ತಳತೆ ಇಂಗು ಗುಂಡಿಮಾಡಲಾಗಿದೆ. ಪ್ರತಿ ಟ್ಯಾಂಕ್ 3000 ಸಾವಿರ ಲೀಟರ್ ಸಾಮರ್ಥ್ಯ ಹೊಂದಿದೆ.

ಕಾಂಕ್ರೀಟ್ ಪಿಲ್ಲರ್ ನಲ್ಲಿ ಅಳವಡಿಸಲಾದ 200 ಮಿಲಿ ಮೀಟರ್ ಗಾತ್ರದ ಪೈಪ್‌ನಿಂದ ಬರುವ ಮಳೆ ನೀರು ಈ ಟ್ಯಾಂಕ್ ನೀರು ಸೇರಿ, ಹೆಚ್ಚುವರಿ ನೀರು ಇಂಗುಗುಂಡಿಗೆ ಸೇರುತ್ತದೆ.

ನಮ್ಮ ಮೆಟ್ರೋ ಹಾಲಿ ಜಾಲದಲ್ಲಿ ಒಟ್ಟು 60ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳಿವೆ. ಸಮೀಕ್ಷೆಯೊಂದರ ಪ್ರಕಾರ, ಮೆಟ್ರೋ ವಯಡಕ್ಟ್‌ನಿಂದ ಮಳೆ ನೀರನ್ನು ಇಂಗುಗುಂಡಿಗೆ ಹರಿಸಬಹುದಾಗಿದೆ. ನಮ್ಮ ಮೆಟ್ರೋ ಹಾಲಿ ಮಾರ್ಗದ ಎಲ್ಲ ವಯಡಕ್ಟ್‌ಗಳಿಂದ ನೀರು ಭೂಮಿಗೆ ಇಳಿಸಲು ಆರಂಭಿಸಿದರೆ, ವಾರ್ಷಿಕವಾಗಿ ಲಕ್ಷಾಂತರ ಲೀಟರ್ ನೀರನ್ನು ಸಂಗ್ರಹಿಸಬಹುದು.

Shwetha M