‘ಬಾಡಿಗೆದಾರರಿಗೂ ಉಚಿತ ವಿದ್ಯುತ್ ಯೋಜನೆ ಸಿಗಲಿದೆ’ – ಗೊಂದಲಗಳಿಗೆ ತೆರೆ ಎಳೆದ ಸಿಎಂ ಸಿದ್ದರಾಮಯ್ಯ

‘ಬಾಡಿಗೆದಾರರಿಗೂ ಉಚಿತ ವಿದ್ಯುತ್ ಯೋಜನೆ ಸಿಗಲಿದೆ’ – ಗೊಂದಲಗಳಿಗೆ ತೆರೆ ಎಳೆದ ಸಿಎಂ ಸಿದ್ದರಾಮಯ್ಯ

ಬಾಡಿಗೆದಾರರಿಗೂ ಗೃಹ ಜ್ಯೋತಿ ಸಿಗಲಿದೆ. 200 ಯುನಿಟ್ ಒಳಗೆ ಉಪಯೋಗ ಮಾಡೋ ಬಾಡಿಗೆದಾರರಿಗೂ ಉಚಿತ ವಿದ್ಯುತ್ ಯೋಜನೆ ಅನ್ವಯ ಆಗುತ್ತದೆ ಎಂದು ಭರವಸೆ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದಾರೆ. ಉಚಿತ ವಿದ್ಯುತ್ ಬಗ್ಗೆ ನಾನಾ ರೀತಿಯ ಮಾತುಗಳು ಕೇಳಿಬರುತ್ತಿದೆ. ಜನ ಕೂಡಾ ಈ ಉಚಿತ ವಿದ್ಯುತ್ ಯೋಜನೆ ಬಗ್ಗೆ ಇನ್ನೂ ಕ್ಲಾರಿಟಿಗೆ ಬಂದಿಲ್ಲ. ಜೊತೆಗೆ ಕೆಲವರಿಗೆ ಇನ್ನೂ ಗೊಂದಲ ಹಾಗೇ ಇದೆ.

ಇದನ್ನೂ ಓದಿ:  ಮಹಿಳೆಯರ ಉಚಿತ ಪ್ರಯಾಣಕ್ಕೆ ಸ್ಮಾರ್ಟ್‌ ಕಾರ್ಡ್‌! – ಗೃಹಜ್ಯೋತಿ ಯೋಜನೆಗೆ ಸರ್ಕಾರದಿಂದ ಮಾರ್ಗಸೂಚಿ

ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಿಧಾನಸೌಧದಲ್ಲಿ ಮಾತನಾಡಿದ್ದು, ರಾಜ್ಯಾದ್ಯಂತ ಬಾಡಿಗೆದಾರರು ಸೇರಿದಂತೆ ಎಲ್ಲರಿಗೂ ಉಚಿತ ವಿದ್ಯುತ್ ನೀಡ್ತೇವೆ. 200 ಯೂನಿಟ್​ ಒಳಗೆ ವಿದ್ಯುತ್​​ ಉಪಯೋಗಿಸುವ ಎಲ್ಲರಿಗೂ ಉಚಿತವಾಗಿರುತ್ತದೆ. ವಾಣಿಜ್ಯ ಉದ್ದೇಶಕ್ಕೆ ವಿದ್ಯುತ್​ ಬಳಸುವವರಿಗೆ ಮಾತ್ರ ಈ ನಿಯಮ ಅನ್ವಯ ಆಗಲ್ಲ ಎಂದು ಪುನರುಚ್ಚರಿಸಿದ್ದಾರೆ. ಬಾಡಿಗೆದಾರರಿಗೂ ಗೃಹ ಜ್ಯೋತಿ ಸಿಗಲಿದೆ. 200 ಯುನಿಟ್ ಒಳಗೆ ಉಪಯೋಗ ಮಾಡೋ ಬಾಡಿಗೆದಾರರಿಗೂ ಉಚಿತ ವಿದ್ಯುತ್ ಯೋಜನೆ ಅನ್ವಯ ಆಗುತ್ತದೆ.

ಇದೇ ವೇಳೆ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಾಪ ಅವರಿಗೆ ಏನೂ ಇಲ್ಲ ಅದಕ್ಕೆ ಪ್ರತಿಭಟನೆ ಮಾಡ್ತಿದ್ದಾರೆ. ಬಿಜೆಪಿ ಅವರಿಗೆ ಯಾವ ನೈತಿಕತೆ ಇದೆ ಪ್ರತಿಭಟನೆ ಮಾಡೋಕೆ?. ಬಿಜೆಪಿ ಅವರು 10 ಗಂಟೆ ವಿದ್ಯುತ್ ಕೊಡ್ತೀವಿ ಅಂದ್ರು. ಕೊಟ್ರಾ?, ಸಾಲಮನ್ನಾ ಮಾಡ್ತೀವಿ ಅಂದ್ರು ಮಾಡಿದ್ರಾ?, ನೀರಾವರಿಗೆ 1.5 ಲಕ್ಷ ಕೋಟಿ ಖರ್ಚು ಮಾಡ್ತೀನಿ ಅಂದ್ರು ಮಾಡಿದ್ರಾ?, ಹೀಗಿರುವಾಗ ನಮ್ಮನ್ನ ಪ್ರಶ್ನೆ ಮಾಡೋಕೆ ಇವರಿಗೆ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು. ಬಿಜೆಪಿ ಅವರು ಹೇಳಿದ್ದು ಮಾಡಲಿಲ್ಲ. ನಾವು ಹೇಳಿದ್ದು ಮಾಡಿದ್ರು ಮೊಸರಲ್ಲಿ ಕಲ್ಲು ಹುಡುಕೋಕೆ ಹೊರಟಿದ್ದಾರೆ. ನಾವು ಬಂದ 15 ದಿನಗಳ ಒಳಗೆ 5 ಗ್ಯಾರಂಟಿ ಜಾರಿ ಮಾಡಿದ್ದೇವೆ. ಹಿಂದೆ ನಾನು ಸಿಎಂ ಆಗಿದ್ದಾಗ ಕೊಟ್ಟಿದ್ದ 165 ಭರವಸೆ ಪೈಕಿ 158 ಭರವಸೆ ಈಡೇರಿಸಿದ್ದೇನೆ. ಇಂದಿರಾ ಕ್ಯಾಂಟಿನ್ ನಿಲ್ಲಿಸಿದ್ದು ಯಾರು? ಕೃಷಿ ಭಾಗ್ಯ ನಿಲ್ಲಿಸಿದ್ದು ಯಾರು? ಪಶು ಭಾಗ್ಯ, ಶೂ ಭಾಗ್ಯ ನಿಲ್ಲಿಸಿದ್ದು ಯಾರು? ಸೈಕಲ್ ನಿಲ್ಲಿಸಿದ್ದು ಯಾರು ಎಂದು ಸಿಎಂ ಬಿಜೆಪಿ ವಿರುದ್ಧ ಪ್ರಶ್ನೆ ಮಾಡಿದ್ದಾರೆ.

suddiyaana