ರಂಗನತಿಟ್ಟುನಲ್ಲಿ ಪ್ರವಾಸಿಗರಿಗೆ ತಾತ್ಕಾಲಿಕ ಬೋಟಿಂಗ್‌ ನಿಷೇಧ!

ರಂಗನತಿಟ್ಟುನಲ್ಲಿ ಪ್ರವಾಸಿಗರಿಗೆ ತಾತ್ಕಾಲಿಕ ಬೋಟಿಂಗ್‌ ನಿಷೇಧ!

ರಂಗನತಿಟ್ಟು ಪಕ್ಷಿಧಾಮಕ್ಕೆ ರಾಜ್ಯವಲ್ಲದೇ ಹೊರ ರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಇಲ್ಲಿನ ಪಕ್ಷಿ ಸಂಕುಲದ ಜೊತೆಗೆ ಜಲಚರ ಪ್ರಾಣಿಗಳನ್ನು ಬೋಟಿಂಗ್ ಮೂಲಕ ವೀಕ್ಷಣೆ ಮಾಡ್ತಾರೆ. ಆದರೆ ರಂಗನತಿಟ್ಟು ಪಕ್ಷಿಧಾಮಕ್ಕೆ ತೆರಳುವ ಪ್ರವಾಸಿಗರಿಗೆ ಕಹಿ ಸುದ್ದಿಯೊಂದಿದೆ. ಪಕ್ಷಿಧಾಮದಲ್ಲಿ ಈಗ ತಾತ್ಕಾಲಿಕವಾಗಿ ಬೋಟಿಂಗ್‌ಗೆ ನಿಷೇಧ ಹೇರಲಾಗಿದೆ.

ಇದನ್ನೂ ಓದಿ: ಇನ್ನು ಮುಂದೆ ಕಸ ಹಾಕಿದರೆ ಲೈಸನ್ಸ್ ರದ್ದು! – ರಾತ್ರಿ 10ರ ನಂತರ ಚಾಮುಂಡಿ ಬೆಟ್ಟಕ್ಕೆ ಹೋದ್ರೆ ದಂಡ!

ಕಾವೇರಿ ನದಿಗೆ ಕಳೆದ ಮೂರು ದಿನಗಳಿಂದ 10 ಸಾವಿರ ಕ್ಯೂಸೆಕ್‍ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟಿರುವ ಕಾರಣ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ತಾತ್ಕಾಲಿಕವಾಗಿ ಬಂದ್ ಆಗಿದೆ. ಕೆಆರ್‍ಎಸ್ ಡ್ಯಾಂನಿಂದ ಕಾವೇರಿ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬಿಟ್ರೆ ರಂಗನತಿಟ್ಟು ಪಕ್ಷಿಧಾಮದ ಬೋಟಿಂಗ್ ರದ್ದು ಆಗುತ್ತೆ. ಇಲ್ಲಿ ಮೋಟಾರ್ ಬೋಟ್ ಇಲ್ಲದ ಕಾರಣ ಮಾನವ ಚಲಿತ ದೋಣಿಗಳನ್ನು ಬಳಕೆ ಮಾಡಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟ ವೇಳೆ ಇಲ್ಲಿ ಸೆಳೆತ ಹೆಚ್ಚಾಗುತ್ತದೆ. ಇದರಿಂದಾಗಿ ದೋಣಿ ಚಲಿಸಲು ಕಷ್ಟವಾಗುತ್ತದೆ. ಹೀಗಾಗಿ ದೋಣಿ ವಿಹಾರವನ್ನು ಬಂದ್ ಮಾಡಲಾಗುತ್ತದೆ.

ಪಕ್ಷಿಧಾಮದಲ್ಲಿ ಬೋಟಿಂಗ್ ನಿಲ್ಲಿಸಿರುವ ಕಾರಣ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿದೆ. ಇಲ್ಲಿ ಬರುವ ಬಹುತೇಕ ಪ್ರವಾಸಿಗರು ಬೋಟಿಂಗ್‍ಗೆ ಹೋಗಿ ತಮ್ಮ ಕ್ಯಾಮೆರಾಗಳಲ್ಲಿ ಪಕ್ಷಿಗಳ ಚಲನವಲನವನ್ನು ಸೆರೆ ಹಿಡಿಯಲು ಇಷ್ಟ ಪಡುತ್ತಾರೆ. ಆದರೆ ಇದೀಗ ಈ ಖುಷಿಗೆ ಬ್ರೇಕ್ ಬಿದ್ದ ಹಾಗೆ ಆಗಿದೆ.

suddiyaana